ಶೋಭಾ ಡೆವಲಪರ್ಸ್ ಕಚೇರಿಗೆ ಐಟಿ ಶಾಕ್

Public TV
1 Min Read
Incom Tax Department IT Raid

ಬೆಂಗಳೂರು: ಶೋಭಾ ಡೆವಲಪರ್ಸ್ (Sobha Developers) ಕೇಂದ್ರ ಕಚೇರಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಇತರ ಕಚೇರಿಗಳ ಮೇಲೆ ಸೋಮವಾರ ಬೆಳಗ್ಗೆ ಐಟಿ ಅಧಿಕಾರಿಗಳು (Incom Tax Officers) ದಾಳಿ ನಡೆಸಿದ್ದಾರೆ.

ಆದಾಯ ತೆರಿಗೆ ವಂಚನೆ ಹಿನ್ನೆಲೆ ಶೋಭಾ ಡೆವಲಪರ್ಸ್‌ಗೆ ಸಂಬಂಧಪಟ್ಟ ಬೆಂಗಳೂರಿನ ಕಚೇರಿಗಳ ಮೇಲೆ ಐಟಿ ದಾಳಿ (IT Raid) ನಡೆಸಿದೆ. ವೈಟ್ ಫೀಲ್ಡ್ ರಸ್ತೆಯ ಹೂಡಿ, ಬನ್ನೇರುಘಟ್ಟ ರಸ್ತೆಯ ಅರಕೆರೆ ಬಳಿಯ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಇದನ್ನೂ ಓದಿ: ಖಲಿಸ್ತಾನಿ ನಾಯಕರು ಮಾನವ ಬಾಂಬರ್‌ಗಳನ್ನ ರೂಪಿಸುತ್ತಿದ್ದಾರೆ – ಗುಪ್ತಚರ ಇಲಾಖೆ ಮಾಹಿತಿ

income tax 1

ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ ಬೆಂಗಳೂರು ಹಾಗೂ ಚೆನ್ನೈ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 50 ವಾಹನಗಳಲ್ಲಿ ಐಟಿ ಅಧಿಕಾರಿಗಳು ಆಗಮಿಸಿದ್ದಾರೆ. 10 ಅಧಿಕಾರಿಗಳನ್ನೊಳಗೊಂಡ 5 ತಂಡಗಳಿಂದ ಏಕಕಾಲಕ್ಕೆ ವಿವಿಧೆಡೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಶೋಭಾ ಡೆವಲಪರ್ಸ್‌ಗೆ ಸಂಬಂಧಪಟ್ಟ ಕಚೇರಿಗಳಲ್ಲಿ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋದಿ ಫೋಟೋ ಸ್ಟೇಟಸ್ ಹಾಕಿದ್ದ ಯವಕನಿಗೆ ಹಲ್ಲೆ – ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್‌

Share This Article
Leave a Comment

Leave a Reply

Your email address will not be published. Required fields are marked *