ಬಿಜೆಪಿಯ ಮಿಷನ್ ಬೆಂಗಳೂರು ಟಾಸ್ಕ್‌ಗೆ ಜೀವ – ಮೋದಿ ಮೆಟ್ರೋ ಅಜೆಂಡಾ ಏನು?

Public TV
2 Min Read
pm narendra modi mandya road show expressway 2

ಬೆಂಗಳೂರು: ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತೆ ಬೆಂಗಳೂರಿಗೆ (Bengaluru) ಬರಲಿದ್ದಾರೆ. ಕೆ.ಆರ್ ಪುರ – ವೈಟ್‍ಫೀಲ್ಡ್ ಮಾರ್ಗದ ಮೆಟ್ರೋ (KR Puram Whitefield Metro Line) ಉದ್ಘಾಟಿಸಲಿರುವ ಮೋದಿ ʼಮಿಷನ್ ಬೆಂಗಳೂರು ಟಾಸ್ಕ್‌ʼಗೆ ಜೀವ ತುಂಬಲಿದ್ದಾರೆ.

ವೈಟ್‍ಫೀಲ್ಡ್ ಮೆಟ್ರೋ ಲೈನ್‍ಗೆ ಗ್ರೀನ್ ಸಿಗ್ನಲ್  ನೀಡಿ ಅದರಲ್ಲೇ ಸಂಚರಿಸುವ ಮೂಲಕ ಗ್ರೇಟರ್ ಬೆಂಗಳೂರು ಟಾರ್ಗೆಟ್ ಮಾಡಲಿದ್ದಾರೆ. ಬೆಂಗಳೂರು ನಗರದ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು 20ಕ್ಕೂ ಅಧಿಕ ಸ್ಥಾನವನ್ನು ಗೆಲ್ಲಬೇಕೆಂಬ ಟಾರ್ಗೆಟ್ ಹಾಕಿಕೊಂಡಿದೆ.

ಮೋದಿ ಮೆಟ್ರೋ ಅಜೆಂಡಾ ಏನು?
ಬೆಂಗಳೂರು ನಗರದಲ್ಲಿ ಒಟ್ಟು 32 ವಿಧಾನಸಭಾ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ 4, ಕಾಂಗ್ರೆಸ್‌ 17, ಬಿಜೆಪಿ 11 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಕಾರಣಕ್ಕೆ ಈ ಬಾರಿಯ ಚುನಾವಣೆಯಲ್ಲಿ ಅಮಿತ್‌ ಶಾ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಟಾಸ್ಕ್‌ ನೀಡಿದ್ದರು.  ಇದನ್ನೂ ಓದಿ: ಭಾರತದ ಧ್ವಜ ಕೆಳಗಿಳಿಸಿ ಖಲಿಸ್ತಾನ್‌ ಧ್ವಜ ಹಾರಿಸಿದ ಪ್ರತ್ಯೇಕತಾವಾದಿಗಳು – ಭಾರತ ಸರ್ಕಾರ ಬೇಸರ

ಅಮಿತ್ ಶಾ ಟಾಸ್ಕ್ ನೀಡಿ ತಿಂಗಳಾದ್ರೂ ದೊಡ್ಡ ಮಟ್ಟದಲ್ಲಿ ಕಾರ್ಯಗತವಾಗದ ಹಿನ್ನೆಲೆಯಲ್ಲಿ ಈಗ ಅಭಿವೃದ್ಧಿ ಅಜೆಂಡಾವನ್ನು ಇಟ್ಟುಕೊಂಡು ಬ್ರ್ಯಾಂಡ್ ಬೆಂಗಳೂರು ಕನಸು ಬಿತ್ತಲು ಬಿಜೆಪಿ ಮುಂದಾಗಿದೆ. ಈ ಕಾರಣಕ್ಕೆ ವೈಟ್‍ಫೀಲ್ಡ್ – ಕೆ.ಆರ್.ಪುರ ಮೆಟ್ರೋ ಲೈನ್ ಉದ್ಘಾಟನೆ ಮೂಲಕ ಡಬಲ್‌ ಎಂಜಿನ್‌ ಸರ್ಕಾರದ ಅಭಿವೃದ್ಧಿ ಮಂತ್ರವನ್ನು ಮೋದಿ ಪಠಿಸಲಿದ್ದಾರೆ.

narendra modi karnataka road show

ಈ ಸಂದರ್ಭದಲ್ಲೇ ರೋಡ್‌ ಶೋ ನಡೆಸಲು ಮೋದಿ ಮುಂದಾಗಿದ್ದು, ಈ ಮೂಲಕ ಮಿಷನ್ ಬೆಂಗಳೂರು ಟಾರ್ಗೆಟ್‍ನಡಿ ಮತ ಬೇಟೆ ಮಾಡಲಿದ್ದಾರೆ. ಬೆಂಗಳೂರು ನಗರದ 28, ಗ್ರಾಮಾಂತರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮೋದಿ ಹವಾ ಸೃಷ್ಟಿಗೆ ಪ್ಲ್ಯಾನ್ ರೂಪಿಸಲಾಗಿದೆ.

ಬೆಂಗಳೂರಿನಲ್ಲಿ ಒಟ್ಟು ನಾಲ್ಕು ಲೋಕಸಭಾ ಕ್ಷೇತ್ರಗಳಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಜಯಗಳಿಸಿತ್ತು. ಬೆಂಗಳೂರು ಗ್ರಾಮಾಂತರ ಒಂದೇ ಕ್ಷೇತ್ರವನ್ನು ಕಾಂಗ್ರೆಸ್‌ ಗೆದ್ದುಕೊಂಡಿತ್ತು. 150+ ಟಾರ್ಗೆಟ್‌ ರೀಚ್‌ ಆಗಬೇಕಾದರೆ ಬೆಂಗಳೂರಿನಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲುವುದು ಬಿಜೆಪಿಗೆ ಅನಿವಾರ್ಯ. ಈ ಕಾರಣಕ್ಕೆ ಬಿಜೆಪಿ 20+ ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ರೂಪಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *