ನವದೆಹಲಿ: ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ (CEC) ಶುಕ್ರವಾರ (ಮಾ.17) ಸಭೆ ಸೇರಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಹುತೇಕ ಫೈನಲ್ ಮಾಡಿದೆ.
ಮೂರು ಗಂಟೆಗಳ ಕಾಲ ಸಭೆ ನಡೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ರಾಜ್ಯ ನಾಯಕರ ಸಮ್ಮುಖದಲ್ಲಿ ಸ್ಕ್ರೀನಿಂಗ್ ಕಮಿಟಿ ಕಳಿಸಿದ ಹೆಸರುಗಳನ್ನು ಪರಿಶೀಲಿಸಿದರು. ಗೆಲ್ಲುವ ಅಭ್ಯರ್ಥಿಗಳ್ಯಾರು? ಎಂಬುದನ್ನು ಸರ್ವೇ ಸೇರಿ ಹಲವು ಮೂಲಗಳ ಮೂಲಕ ಕ್ರಾಸ್‌ಚೆಕ್ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ
ಕೆಲ ಕ್ಷೇತ್ರಗಳಿಗೆ ಸಂಬಂಧಿಸಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಮ್ಮ ಬೆಂಬಲಿಗರ ಪರವಾಗಿ ಬ್ಯಾಟ್ ಮಾಡಿದರು ಎನ್ನಲಾಗಿದೆ. ಅಂತಿಮವಾಗಿ 130 ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ. ನಾಲ್ವರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸಿಎಂ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿಯಲ್ಲಿ ಮಾಜಿ ಮಂತ್ರಿ ವಿನಯ್ ಕುಲಕರ್ಣಿ ಕಣಕ್ಕಿಳಿಯೋ ಸಾಧ್ಯತೆ ಹೆಚ್ಚಾಗಿದೆ.
ಈ ಬಾರಿ ಮುಸ್ಲಿಮರಿಗೆ ಕಡಿಮೆ ಟಿಕೆಟ್ ನೀಡೋ ಬಗ್ಗೆ ಚರ್ಚೆ ನಡೆದಿದೆ. ಕಳೆದ ಬಾರಿ 17, ಈ ಬಾರಿ 12ಕ್ಕೆ ಇಳಿಸಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಆದರೆ ಇನ್ನೂ ಕೆಲವರು ಈ ಪ್ರಸ್ತಾವವನ್ನು ವಿರೋಧ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಫೈನಲ್ ಆಗಬೇಕಿದ್ದು, ಹಗ್ಗಜಗ್ಗಾಟಗಳು ನಡೀತಿದೆ. ಇದನ್ನೂ ಓದಿ: ಸಾರಿಗೆ ನೌಕರರ ವೇತನ ಶೇ.15ರಷ್ಟು ಹೆಚ್ಚಿಸಿ ಸರ್ಕಾರ ಆದೇಶ
ಸಿಇಸಿ ಸಭೆ ಬಳಿಕ ರಾಜ್ಯ ನಾಯಕರ ಜೊತೆ ಖರ್ಗೆ ಇನ್ನೊಂದು ಸುತ್ತಿನ ಸಭೆ ನಡೆಸಿದ್ದಾರೆ. ಮೂಲಗಳ ಪ್ರಕಾರ ರಾಹುಲ್ ರಾಜ್ಯಕ್ಕೆ ಬಂದು ಹೋದ ಮಾರನೇ ದಿನ ಅಂದರೆ ಯುಗಾದಿ ಹಬ್ಬದ ಪರ್ವದಿನದಂದು ಕಾಂಗ್ರೆಸ್ ಫಸ್ಟ್ ಲಿಸ್ಟ್ ರಿಲೀಸ್ ಆಗಲಿದೆ.
ಸಭೆ ಆರಂಭಕ್ಕೂ ಮುನ್ನ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಎಂಬಿ ಪಾಟೀಲ್, ಜಿ. ಪರಮೇಶ್ವರ್ ಬಳಿ ಆಕಾಂಕ್ಷಿಗಳು ಲಾಬಿ ಮಾಡಿದ್ದು ಕಂಡುಬಂತು.