ಬಂಧನ ಕೈಬಿಟ್ಟ ಪಾಕ್ ಪೊಲೀಸರು – ಗ್ಯಾಸ್ ಮಾಸ್ಕ್ ಧರಿಸಿ ಮನೆಯಿಂದ ಹೊರಬಂದ ಇಮ್ರಾನ್ ಖಾನ್

Public TV
2 Min Read
pakistan imran khan

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಭ್ರಷ್ಟಾಚಾರದ ಪ್ರಕರಣದ ಹಿನ್ನೆಲೆ ಬಂಧಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಆದರೆ ಖಾನ್ ಬೆಂಬಲಿಗರು ಅವರ ಬಂಧನವನ್ನು ವಿರೋಧಿಸಿ ಭಾರೀ ಪ್ರತಿಭಟನೆ (Protest) ನಡೆಸಿರುವ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ವಾಪಾಸಾಗಿದ್ದಾರೆ. ಮಾತ್ರವಲ್ಲದೇ ಪಿಟಿಐ (PTI) ಅಧ್ಯಕ್ಷನನ್ನು ಗುರುವಾರ ಬೆಳಗ್ಗೆ 10 ಗಂಟೆಯವರೆಗೂ ಬಂಧಿಸದಂತೆ ಲಾಹೋರ್ ಹೈಕೋರ್ಟ್ ಆದೇಶಿಸಿದೆ.

ಇಮ್ರಾನ್ ಖಾನ್‌ನ ನೂರಾರು ಬೆಂಬಲಿಗರು ಅವರ ಬಂಧನವನ್ನು ವಿರೋಧಿಸಿ ನಿವಾಸದ ಬಳಿಯಲ್ಲಿ ಘರ್ಷಣೆ ನಡೆಸಿದ್ದಾರೆ. ಅಧಿಕಾರಿಗಳು ಇಮ್ರಾನ್ ಖಾನ್ ಬಂಧನವನ್ನು ಹಿಂತೆಗೆದುಕೊಳ್ಳುತ್ತಿದ್ದಂತೆಯೇ ಮಾಜಿ ಪಿಎಂ ಗ್ಯಾಸ್ ಮಾಸ್ಕ್ (Gas Mask) ಧರಿಸಿ ಮನೆಯಿಂದ ಹೊರಬಂದಿದ್ದಾರೆ. ಗ್ಯಾಸ್ ಮಾಸ್ಕ್ ಧರಿಸಿ ಖಾನ್ ತಮ್ಮ ಬೆಂಬಲಿಗರೊಂದಿಗೆ ಮಾತನಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

Imran Khan 2

ಇದಕ್ಕೂ ಮುನ್ನ ನೂರಾರು ಪ್ರತಿಭಟನಾಕಾರರು ಖಾನ್ ನಿವಾಸದ ಬಳಿ ಘರ್ಷಣೆ ನಡೆಸಿದ್ದಾರೆ. ಇದನ್ನು ತಡೆಯಲು ಭದ್ರತಾ ಪಡೆಗಳು ಅವರ ಮೇಲೆ ಅಶ್ರುವಾಯು ಹಾಗೂ ನೀರಿನ ಫಿರಂಗಿಯನ್ನು ಪ್ರಯೋಗಿಸಿದ್ದಾರೆ. ಭಾರೀ ಪ್ರತಿಭಟನೆ ಹಿನ್ನೆಲೆ ತಾತ್ಕಾಲಿಕ ಪರಿಹಾರವಾಗಿ ಖಾನ್ ಬಂಧನವನ್ನು ಗುರುವಾರದವರೆಗೆ ಕೈಬಿಡುವಂತೆ ಪಾಕಿಸ್ತಾನದ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಖಾನ್ ಬಂಧನವನ್ನು ಕೈಬಿಟ್ಟ ಬಳಿಕ ಅವರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಆಡಿಯೋ ಬಾಂಬ್- ರೇವಣ್ಣ, ಶಿವಲಿಂಗೇಗೌಡ ಮಾತುಕತೆ ಆಡಿಯೋ ವೈರಲ್

2018 ರಿಂದ 2022ರ ವರೆಗೆ ಪ್ರಧಾನಿಯಾಗಿದ್ದಾಗ ಇಮ್ರಾನ್ ಖಾನ್ ವಿದೇಶಿ ಗಣ್ಯರು ನೀಡಿದ ಉಡುಗೊರೆಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದ ಆರೋಪವನ್ನು ಹೊತ್ತುಕೊಂಡಿದ್ದಾರೆ. ಇದನ್ನು ಸಮರ್ಥಿಸಿಕೊಳ್ಳಲು ನ್ಯಾಯಾಲಯಕ್ಕೆ ಹಾಜರಾಗುವ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಲಯ ಕಳೆದ ವಾರ ಖಾನ್ ವಿರುದ್ಧ ಬಂಧನದ ವಾರಂಟ್ ಹೊರಡಿಸಿತ್ತು. ಇದನ್ನೂ ಓದಿ: ರಾಜ್ಯದಲ್ಲಿ H3N2 ವೈರಸ್ ಸ್ಫೋಟ – 82 ದಿನದಲ್ಲಿ 115 ಪ್ರಕರಣ ದಾಖಲು

Share This Article
Leave a Comment

Leave a Reply

Your email address will not be published. Required fields are marked *