ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

Public TV
2 Min Read
deepika padukone 5

`ಪಠಾಣ್’ (Pathaan) ಹೀರೋಯಿನ್ ದೀಪಿಕಾ ಪಡುಕೋಣೆ (Deepika Padukone) ಇದೀಗ ಸಖತ್ ಸುದ್ದಿಯಲ್ಲಿದ್ದಾರೆ. ಈ ವರ್ಷ ಆಸ್ಕರ್ (Oscar) ವೇದಿಕೆಯಲ್ಲಿ ನಿರೂಪಣೆ (Anchoring) ಮಾಡುವ ಮೂಲಕ ನಟಿ ಗಮನ ಸೆಳೆದಿದ್ದಾರೆ. ಇದೀಗ ಮೊದಲ ಬಾರಿಗೆ ನಟಿ ದೀಪಿಕಾರನ್ನ ಕಂಗನಾ ರಣಾವತ್ ಹಾಡಿ ಹೊಗಳಿದ್ದಾರೆ. ದೀಪಿಕಾ ನಮ್ಮ ಭಾರತದ ಹೆಮ್ಮೆ ಎಂದಿದ್ದಾರೆ.

Kangana 3

ಕನ್ನಡತಿ ದೀಪಿಕಾ ಪಡುಕೋಣೆ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆಸ್ಕರ್ ವೇದಿಕೆಯಲ್ಲಿ ನಿರೂಪಣೆ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಸಿಕ್ಕ ಅವಕಾಶವನ್ನ ಸರಿಯಾಗಿ ಸದುಪಯೋಗ ಪಡಿಸಿಕೊಂಡು ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಹಾಡಿನ ವಿಶೇಷತೆ ಬಗ್ಗೆ ಅದ್ಭುತವಾಗಿ ಮಾತನಾಡಿ ನಟಿ ಗಮನ ಸೆಳೆದರು. ಇದನ್ನೂ ಓದಿ: ಧನಂಜಯ ನಟನೆಯ 25ನೇ ಸಿನಿಮಾ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

deepika padukone

ದೀಪಿಕಾ ಆಸ್ಕರ್ ಸಮಾರಂಭದಲ್ಲಿ ಕಪ್ಪು ಡ್ರೆಸ್ ತೊಟ್ಟು ಕಂಗೊಳಿಸಿದ್ದಾರೆ. `ಆರ್‌ಆರ್‌ಆರ್’ (RRR) ಚಿತ್ರದ ನಾಟು ನಾಟು ಹಾಡಿನ ಬಗ್ಗೆ ಮಸ್ತ್ ಆಗಿ ನಿರೂಪಣೆ ಮಾಡಿದ್ದಾರೆ. ಅವರ ಡ್ರೆಸ್ ಸೆನ್ಸ್‌ಗೆ ಮತ್ತು ನಿರೂಪಣೆ ಶೈಲಿಗೆ ಹಲವರು ಫಿದಾ ಆಗಿದ್ದಾರೆ. ಈಗ ದೀಪಿಕಾ ಬಗ್ಗೆ ಕಂಗನಾ ರಣಾವತ್ (Kangana Ranaut) ಪ್ರತಿಕ್ರಿಯೆ ನೀಡಿದ್ದಾರೆ.

ದೀಪಿಕಾ ಪಡುಕೋಣೆ ಎಷ್ಟು ಸುಂದರ (Beautiful). ಭಾರತ (India) ಪ್ರತಿನಿಧಿಸಿ ಆಸ್ಕರ್ ವೇದಿಕೆ ಮೇಲೆ ನಿಲ್ಲುವುದು ಅಷ್ಟು ಸುಲಭವಲ್ಲ. ಈ ಕಾರ್ಯಕ್ರಮದಲ್ಲಿ ಆತ್ಮವಿಶ್ವಾಸದಿಂದ ಮಾತನಾಡುತ್ತಾ ಭಾರತದ ಘನತೆಯನ್ನು ಕಾಪಾಡಿದ್ದು ಮಾತ್ರ ಅವಿಸ್ಮರಣೀಯ. ಇದು ಭಾರತದ ಮಹಿಳೆ ಸಾಮರ್ಥ್ಯ ಹೇಗಿರುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದು ದೀಪಿಕಾರನ್ನ ಮನಸಾರೆ ಕಂಗನಾ ಹಾಡಿ ಹೊಗಳಿದ್ದಾರೆ.

kangana ranaut 3

ಸದಾ ಒಂದಲ್ಲಾ ಒಂದು ವಿವಾದಾತ್ಮಕ ಮಾತುಗಳಿಂದ ಸುದ್ದಿಯಲ್ಲಿರುತ್ತಿದ್ದ ನಟಿ ಕಂಗನಾ ನಡೆಗೆ ಈಗ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ ಆಸ್ಕರ್ ವೇದಿಕೆಯಲ್ಲಿ ದೀಪಿಕಾ ನಿರೂಪಣೆ ಮಾಡಿರುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *