ಸೋಮಣ್ಣ ನಮ್ಮ ಕುಟುಂಬಕ್ಕೆ ಹಿರಿಯ ಸೋದರರಿದ್ದಂತೆ: ಡಿ.ಕೆ ಸುರೇಶ್

Public TV
2 Min Read
SOMANNA DK SURESH

ಬೆಂಗಳೂರು: ವಿ.ಸೋಮಣ್ಣ (V Somanna) ಬಿಜೆಪಿಯಲ್ಲೆ ಉಳಿಯುವುದಾಗಿ ಹೇಳಿದ್ದಾರೆ. ವಿ.ಸೋಮಣ್ಣ ನಮ್ಮ ಕುಟುಂಬಕ್ಕೆ ಹಿರಿಯ ಸೋದರರಿದ್ದಂತೆ. ಅವರ ಬಗ್ಗೆ ಹೆಚ್ಚು ಮಾತನಾಡೋಕೆ ಹೋಗಲ್ಲ ಎಂದು ಸಂಸದ ಡಿಕೆ ಸುರೇಶ್ (D.K Suresh) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚುನಾವಣೆ ಪ್ರಯುಕ್ತ ಬೇರೆ ಬೇರೆ ಕಾರ್ಯದಲ್ಲಿ ಬ್ಯುಸಿ ಇದ್ದೇನೆ. ರಾಮನಗರ ಚುನಾವಣೆ (Ramanagar Election) ಸ್ಪರ್ಧೆ ವಿಚಾರದಲ್ಲಿ ರಾಜ್ಯ ನಾಯಕರಾಗಲಿ ರಾಷ್ಟ್ರ ನಾಯಕರಾಗಲಿ ನನ್ನ ಬಳಿ ಮಾತನಾಡಿಲ್ಲ. ನಾನು ಲೋಕಸಭಾ ಸದಸ್ಯನಾಗಿರುವುದರಿಂದ ನನ್ನ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಚುನಾವಣಾ ಕ್ಷೇತ್ರಗಳಲ್ಲಿ ನಾನೇ ಅಭ್ಯರ್ಥಿ ಅಂತ ಮತ ಕೇಳುತ್ತಿದ್ದೇನೆ ಎಂದರು.

bjp flag

ನನಗೂ ಬೇರೆ ಬೇರೆ ಕ್ಷೇತ್ರಗಳಿಂದ ಚುನಾವಣೆ ಸ್ಪರ್ಧೆಗೆ ಆಹ್ವಾನ ನೀಡುತ್ತಿದ್ದಾರೆ. ಚನ್ನಪಟ್ಟಣ, ರಾಜರಾಜೇಶ್ವರಿ ನಗರ ಸೇರಿದಂತೆ ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6 ಕ್ಷೇತ್ರಗಳು ಹೊರಗಿನ 4 ಕ್ಷೇತ್ರಗಳು ಸೇರಿದಂತೆ ಒಟ್ಟು 10 ಕ್ಷೇತ್ರಗಳಿಂದ ನನ್ನ ಸ್ಪರ್ಧೆಗೆ ಆಹ್ವಾನ ಇದೆ. ಆದರೆ ರಾಜ್ಯ ರಾಜಕಾರಣ ನನಗೆ ಆಸಕ್ತಿ ಇಲ್ಲ. ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಆಸಕ್ತಿ ಹೊಂದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಆಣೆ-ಪ್ರಮಾಣದ ಪಾಲಿಟಿಕ್ಸ್ ; ಕರ್ಪೂರ ಹಚ್ಚಿ ಪ್ರಮಾಣ ಮಾಡಿದ ಮಾಗಡಿ ಶಾಸಕರ ಪತ್ನಿ

DK SURESH

ರಾಮನಗರದಲ್ಲಿ ನಮ್ಮ ಅಭ್ಯರ್ಥಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ನಾಯಕರು ಹೇಳಿದ ಕೂಡಲೆ ಸ್ಪರ್ಧೆ ಮಾಡುವುದಲ್ಲ ಸ್ಥಳೀಯವಾಗಿ ಕಾರ್ಯಕರ್ತರ ಜೊತೆ ಷರ್ಚೆ ಮಾಡಬೇಕು ಅವರ ಜೊತೆ ಮಾತನಾಡಿ ತೀರ್ಮಾನ ಮಾಡಬೇಕಾಗುತ್ತದೆ. ನಾನು ಏಕೈಕ ಸಂಸದ ಇದ್ದೀನಿ. ಕಳೆದ 20 ವರ್ಷಗಳಲ್ಲಿ ಉಪ ಚುನಾವಣೆಗಳನ್ನು ಮಾಡಿ ರೋಸಿ ಹೋಗಿದ್ದೇನೆ. ಎಲ್ಲಾ ಉಪ ಚುನಾವಣೆಗಳನ್ನು ನಾವು ಮಾಡಿದ್ದೇವೆ ಈಗ ಉಪ ಚುನಾವಣೆ ಬಗ್ಗೆ ಆಸಕ್ತಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 10 ಕ್ಷೇತ್ರಗಳಿಂದ ನನಗೆ ಆಹ್ವಾನ, ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ: ಡಿ.ಕೆ.ಸುರೇಶ್

ASHWATH NARAYAN COMPLAINT

ಉರಿಗೌಡ ನಂಜೇಗೌಡ ಅಶ್ವಥ್ ನಾರಾಯಣ್‍ಗೆ ಅಸ್ವಸ್ಥರಾದಾಗ ಸಿಕ್ಕಿರಬೇಕು ಅನ್ನಿಸುತ್ತೆ. ಉರಿಗೌಡ, ನಂಜೇಗೌಡರ ವಿಚಾರದಲ್ಲಿ ಒಕ್ಕಲಿಗರು ಜಾಗೃತರಾಗಬೇಕು ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಈ ಚುನಾವಣಾ ಸಂದರ್ಭದಲ್ಲಿ ನಾನು ಯಾವುದೆ ಪ್ರತಿಕ್ರಿಯೆ ನೀಡಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *