ಲಂಡನ್: ಸ್ಟಾರ್ಟ್ಅಪ್‌ಗಳಿಗೆ ಸಾಲ ನೀಡಲು ಹೆಸರುವಾಸಿಯಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅಮೆರಿಕದಲ್ಲಿ (USA) ದಿವಾಳಿಯಾಗಿರುವ ಬೆನ್ನಲ್ಲೇ ಸಿಲಿಕಾನ್ ವ್ಯಾಲಿ ಬ್ಯಾಂಕಿನ ಬ್ರಿಟನ್ ಘಟಕವನ್ನು ಹೆಚ್‌ಎಸ್‌ಬಿಸಿ (HSBC) ಕೇವಲ 1 ಪೌಂಡ್‌ಗೆ (99.86 ರೂಪಾಯಿ) ಖರೀದಿಸಿದೆ.
ಮಾರ್ಚ್ 10ರ ಹೊತ್ತಿಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಯುಕೆ ಘಟಕವು ಸುಮಾರು 5.5 ಬಿಲಿಯನ್ ಪೌಂಡ್ ಸಾಲಗಳನ್ನು ಮತ್ತು ಸುಮಾರು 6.7 ಬಿಲಿಯನ್ ಪೌಂಡ್ ಠೇವಣಿ ಹೊಂದಿದೆ. ಜೊತೆಗೆ ಒಟ್ಟು 8.8 ಶತಕೋಟಿ ಪೌಂಡ್‌ಗಳಷ್ಟು ಬ್ಯಾಲೆನ್ಸ್ ಶೀಟ್ ಗಾತ್ರವನ್ನು ಹೊಂದಿದೆ. ಇದೀಗ ಹೂಡಿಕೆದಾರರಲ್ಲಿ ಮತ್ತಷ್ಟು ಉತ್ಸಾಹ ತುಂಬಲು ಹೆಚ್‌ಎಸ್‌ಬಿಸಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಿಲಿಕಾನ್ ವ್ಯಾಲಿ ಬಳಿಕ ಅಮೆರಿಕದ ಮತ್ತೊಂದು ಬ್ಯಾಂಕ್ ದಿವಾಳಿ
- Advertisement -
- Advertisement -
ಬ್ಯಾಂಕ್‌ನ ಬ್ರಿಟನ್ (UK) ವ್ಯವಹಾರಕ್ಕೆ ಇದು ಅತ್ಯುತ್ತಮ ಕಾರ್ಯತಂತ್ರದ ಅರ್ಥ ನೀಡುವ ಜೊತೆಗೆ ವಾಣಿಜ್ಯ ಬ್ಯಾಂಕಿಂಗ್ ಅನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ ಬ್ರಿಟನ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಹಾಗೂ ಜೀವ-ವಿಜ್ಞಾನ ಕ್ಷೇತ್ರಗಳನ್ನು ಒಳಗೊಂಡಂತೆ ನವೀನ ಮತ್ತು ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಗಳಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
- Advertisement -
ಬ್ರಿಟನ್‌ನ ಬ್ಲೂ-ಚಿಪ್ FTSC 100 ಷೇರುಗಳ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ ಶೇ.1ರಷ್ಟು ಕಡಿಮೆಯಾಗಿದೆ. ಸಿಲಿಕಾನ್ ವ್ಯಾಲಿಬ್ಯಾಂಕ್ ಮೌಲ್ಯ ಕುಸಿತದಿಂದ ಎಚ್‌ಎಸ್‌ಬಿಸಿ ಷೇರುಗಳು ಶೇ.1.7ರಷ್ಟು ಕುಸಿದಿವೆ ಎಂದು ಎನ್ನಲಾಗಿದೆ. ಇದನ್ನೂ ಓದಿ:
- Advertisement -
ಆರ್ಥಿಕ ಹಿಂಜರಿತದ ಭೀತಿಯ ನಡುವೆ ಅಮೆದಿಕದ ದೊಡ್ಡ-ದೊಡ್ಡ ಬ್ಯಾಂಕ್‌ಗಳು ದಿವಾಳಿ ಹಂತ ತಲುಪಿತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಒಂದು ದಿನದ ಅಂತರದಲ್ಲಿ ಎರಡು ಬ್ಯಾಂಕ್‌ಗಳು ಬಾಗಿಲುಮುಚ್ಚಿವೆ. ಠೇವಣಿದಾರರು ದೊಡ್ಡ ಮಟ್ಟದಲ್ಲಿ ಹೂಡಿಕೆ ಹಿಂಪಡೆದ ಕಾರಣ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿ ಎದ್ದಿದೆ. ಎಸ್‌ವಿಬಿ ವೈಫಲ್ಯದ ಕಾರಣ ಇದರಲ್ಲಿ ಡೆಪಾಸಿಟ್ ಮಾಡಿದ 10,000 ಚಿಕ್ಕ ಚಿಕ್ಕ ವಾಣಿಜ್ಯ ಸಂಸ್ಥೆಗಳು ತಮ್ಮ 2 ಲಕ್ಷ ಉದ್ಯೋಗಿಗಳಿಗೆ ವೇತನ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಹಣದುಬ್ಬರ ನಿಯಂತ್ರಿಸಲು ಅಮೆರಿಕಾದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ವಿಪರೀತವಾಗಿ ಹೆಚ್ಚಿಸಿರುವುದೇ ಎಸ್‌ವಿಬಿ ಪತನಕ್ಕೆ ಕಾರಣ ಎನ್ನಲಾಗುತ್ತಿದೆ. ಇದು ಬೇರೆ ದೇಶಗಳಲ್ಲಿನ ಎಸ್‌ವಿಬಿ ಬ್ಯಾಂಕ್‌ಗಳ ಮೇಲೆಯೂ ಪರಿಣಾಮ ಬೀರಿದೆ…