ಪ್ರೀತಿಯೊಂದು (Love) ಸುಂದರ ಅನುಭವ. ಅದನ್ನು ಅನುಭವಿಸಬೇಕೇ ಹೊರತು ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿ ಕೆಲವರು ಪ್ರೀತಿಯೆಂಬುದೇ ಮಾಯೆ ಎನ್ನುತ್ತಾರೆ. ಕೆಲವರಿಗೆ ಹೇಳಿಕೊಳ್ಳಲು ಸಂಕೋಚ, ಹೇಳಿಕೊಂಡರೇ ಇದ್ದ ಸಂಬಂಧವೂ ಬಿಟ್ಟುಹೋಗುತ್ತದೆ ಅನ್ನೋ ಆತಂಕ. ಹಾಗಾಗಿಯೇ ಅನೇಕ ಮಂದಿ ಪ್ರೀತಿಯ ಭಾವನೆ ಹೊಂದಿದ್ದರೂ, ಹೃದಯದಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ.
ಕೆಲವರಿಗೆ ಮನಸ್ಸಿನ ಮಾತು ಅರ್ಥವಾದರೆ, ಇನ್ನೂ ಕೆಲವರು ತಮ್ಮ ಬಾಡಿ ಲಾಂಗ್ವೇಜ್‌ನಿಂದಲೇ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಾರೆ. ಇದರ ಸಹಾಯದಿಂದ ಅವರು ನಿಮ್ಮನ್ನು ಪ್ರೀತಿಸುತ್ತಿದ್ದಾರಾ ಎಂದು ತಿಳಿದುಕೊಳ್ಳಬಹುದು ಆದರೆ ಸಂಪೂರ್ಣವಾಗಿ ಅದೇ ನಿಜ ಎಂದು ಹೇಳಲಾಗುವುದಿಲ್ಲ. ಆದರೀಗ ಅದಕ್ಕೂ ಆನ್‌ಲೈನ್ ದಾರಿ ಮಾಡಿಕೊಟ್ಟಿದೆ. ಅದು ಹೇಗೆ ಅನ್ನೋದನ್ನ ನೋಡಿ..
1. ಕಣ್ಸನ್ನೆಯ ಮಾತು:
ಇನ್ನೂ ಆನ್‌ಲೈನ್ ಹೊರತಾಗಿ ನೋಡುವುದಾದರೆ, ಪ್ರೇಮಿಗಳು ಇಷ್ಟಪಡೋದು ಕಣ್ಸನ್ನೆ ಮಾತು. ಉದಾಹರಣೆಗೆ ಅನೇಕ ಸ್ನೇಹಿತರು ಒಟ್ಟಿಗೆ ಎಲ್ಲೋ ಹೋಗಿದ್ದಾರೆ ಎಂದು ಭಾವಿಸೋಣ. ಈ ವೇಳೆ ನಿಮ್ಮ ಸ್ನೇಹಿತ ನೀವು ಅವರತ್ತ ನೋಡಲೆಂದೇ ಪ್ರಯತ್ನಿಸುತ್ತಿದ್ದರೆ ಮತ್ತು ವಿವಿಧ ಕಾರಣಗಳಿಗಾಗಿ ನಿಮ್ಮನ್ನು ನೋಡುತ್ತಿದೆ. ಅವರು ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಅರ್ಥಮಾಡಿಕೊಳ್ಳಬಹುದು. ಇದನ್ನೂ ಓದಿ: ಬಿದಿರಿನ ಉಡುಪಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ಉರ್ಫಿ ಜಾವೇದ್
2. ಡೇಟಿಂಗ್ ಆ್ಯಪ್:
ದೇಶಾದ್ಯಂತ ಡೇಟಿಂಗ್ ಆ್ಯಪ್‌ಗಳು (Dating App) ಹೆಚ್ಚು ಬಳಕೆಯಲ್ಲಿವೆ. ಹೆಚ್ಚಿನ ಯುವಕ ಯುವತಿಯರು ಸ್ವಲ್ಪ ಡಿಫರೆಂಟ್ ಆಗಿ ಇರಬೇಕು ಅಂತಾ ನೆಚ್ಚಿನ ಸಂಗಾತಿ ಆಯ್ಕೆಗಾಗಿ ಈ ಆ್ಯಪ್‌ಗಳ ಮೊರೆಹೋಗುತ್ತಾರೆ. ಸಾವಿರಾರು ಕಿಮೀ ಗಳ ದೂರದಲ್ಲಿರುವ ಗೆಳೆಯ ಗೆಳತಿಯರನ್ನ ಹುಡುಗಿ ಲೈಫ್ ಪಾರ್ಟ್ನರ್ ಮಾಡಿಕೊಳ್ಳುತ್ತಾರೆ. ಆದರೆ ಬಹುತೇಕ ಮಂದಿ ಇಂತಹ ಡೇಟಿಂಗ್ ಆ್ಯಪ್‌ಗಳ ಬಳಕೆಯಿಂದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವುದೂ ಉಂಟು. ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಪ್ರದಾನಕ್ಕೆ ಕ್ಷಣಗಣನೆ : ಭಾರತದ ಯಾವ ಚಿತ್ರಕ್ಕೆ ಸಿಗತ್ತೆ ಆಸ್ಕರ್?
3. ಇಷ್ಟ ಆಗಿದ್ರೆ ಹೀಗೆ ತಿಳಿಯುತ್ತೆ:
ನೀವು ಆನ್‌ಲೈನ್‌ನಲ್ಲಿ ಸಂದೇಶ ಕಳುಹಿಸಿದಾಗ ಅವನು/ಅವಳು ಯಾವಾಗ ಉತ್ತರಿಸುತ್ತಾನೆ ಎಂಬುದು ಗಮನಿಸಬೇಕಾದ ಸಂಗತಿ. ನಿಮ್ಮ ಸಂದೇಶಗಳಿಗೆ ತ್ವರಿತವಾಗಿ ಪ್ರತ್ಯುತ್ತರಿಸಿದರೆ, ಅವರು ನಿಮ್ಮತ್ತ ಸ್ವಲ್ಪವಾದರೂ ಆಕರ್ಷಿತರಾಗಿರುತ್ತಾರೆ ಎಂದರ್ಥ. ಸಂಬಂಧಕ್ಕೆ ಪ್ರಾಮುಖ್ಯತೆ ನೀಡುವುದು. ಸಮಯವನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವುದರಲ್ಲಿಯೇ ನಿಮಗೆ ತಿಳಿಯುತ್ತದೆ.