ಧ್ರುವನಾರಾಯಣ್ ನಿಧನಕ್ಕೆ ಕಾರಣ ಬಿಚ್ಚಿಟ್ಟ ವೈದ್ಯ ಡಾ. ಮಂಜುನಾಥ್

Public TV
2 Min Read
DHRUVANARAYAN DOCTOR 2

ಮೈಸೂರು: ಹಳೇ ಮೈಸೂರು ಭಾಗದ ಪ್ರಬಲ ದಲಿತ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ನಿಧನದ ಹಿಂದಿನ ಕಾರಣವನ್ನು ವೈದ್ಯ ಡಾ. ಮಂಜುನಾಥ್ (Dr. Manjunath) ಚ್ಚಿಟ್ಟಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೆಳಗ್ಗೆ ಜಾಗಿಂಗ್ ಮುಗಿಸಿ ವಾಪಸ್ ಬರುತ್ತಿದಂತೆಯೇ ಅವರ ಡ್ರೈವರ್ ಹಾಗೂ ಗಾರ್ಡ್ ಬೇಗ ಬರುವಂತೆ ನನ್ನ ಕೂಗಿದರು. ಕೂಡಲೇ ಅವರ ಮನೆಗೆ ಓಡಿದೆ. ಈ ವೇಳೆ ಮೊದಲನೇ ಮಹಡಿಯಲ್ಲಿ ಧ್ರುವನಾರಾಯನ್ ಅವರು ಮಂಚದಿಂದ ಕೆಳಗೆ ಬಿದ್ದು, ಸುಮಾರು 3 ಲೀಟರ್ ಆಗುವಷ್ಟು ರಕ್ತದ ಮಡುವಿನಲ್ಲಿ ಮಲಗಿದ್ದರು. ಆದರೆ ಅವರಲ್ಲಿ ಹಾರ್ಟ್ ಬೀಟ್, ಚಲನವಲನ ಯಾವುದೂ ಇರಲಿಲ್ಲ. ಅಂದರೆ ಅದಾಗಲೇ ಅವರ ಉಸಿರು ನಿಂತ ಸ್ಥಿತಿಯಲ್ಲಿತ್ತು ಎಂದರು.

DHRUVANARAYAN

ಕೂಡಲೇ ಆಸ್ಪತ್ರೆಗೆ ಕರೆ ಮಾಡಿ ಅಂಬುಲೆನ್ಸ್ ಮೂಲಕ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಎಲ್ಲಾ ಪ್ರಯತ್ನಗಳನ್ನೂ ಮಾಡಿದರೂ ಅವರನ್ನು ನಮಗೆ ಉಳಿಸಿಕೊಳ್ಳಲು ಆಗಲಿಲ್ಲ. ಹೊಟ್ಟೆಯಲ್ಲಿ ಮ್ಯಾಸಿವ್ ಬ್ಲೀಡಿಂಗ್ ಆಗಿದ್ದೇ ಅವರ ನಿಧನಕ್ಕೆ ಕಾರಣ ಎಂದರು ಹೇಳಿದರು. ಇದನ್ನೂ ಓದಿ: ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ

DHRUVANARAYAN DOCTOR 1

ಶುಕ್ರವಾರ ರಾತ್ರಿನೇ ಸ್ವಲ್ಪ ಹುಷಾರಿಲ್ಲ ಅಂತ ನನಗೆ ಕರೆ ಮಾಡಿ ಹೇಳಿದ್ದರು. ಆಗ ತಕ್ಷಣ ನಾನು ಬನ್ನಿ ಆಸ್ಪತ್ರೆಗೆ ಅಂದೆ. ಇಲ್ಲ ಬೆಳಗ್ಗೆ ಬರ್ತೀನಿ ಅಂತ ಹೇಳಿದ್ರು. ಆ ಸಂದರ್ಭದಲ್ಲಿಯೇ ಅವರಿಗೆ ಬ್ಲೀಡಿಂಗ್ ಶುರುವಾಗಿದೆ. ಅದಕ್ಕೆ ಅವರಿಗೆ ಸ್ವಲ್ಪ ಆಯಾಸ ಆದಂತೆ ಭಾಸವಾಗಿದೆ. ಅದು ಬೆಳಗ್ಗೆ ಅಷ್ಟೊತ್ತಿಗೆ ಬ್ಲೀಡಿಂಗ್ ಜಾಸ್ತಿ ಆಗಿದೆ ಎಂದು ವಿವರಿಸಿದರು.

DHRUVA NARAYAN 1

ವಿಧಾನಸಭಾ ಚುನಾವಣೆ (Vidhanasabha Election) ಹತ್ತಿರದಲ್ಲಿದೆ. ಧ್ರುವ ನಾರಾಯಣ್ (Dhruva Narayan) ಅವರು ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು. ಹೀಗಾಗಿ ಅವರು ಸ್ವಲ್ಪ ಒತ್ತಡದಲ್ಲಿದ್ದರು. ಈ ಒತ್ತಡ ಜಾಸ್ತಿ ಆದಾಗ ಅಲ್ಸರ್ಸ್ ಜಾಸ್ತಿ ಆಗಿ ಹೊಟ್ಟೆಯಲ್ಲಿ ಬ್ಲೀಡಿಂಗ್ ಆಗುತ್ತದೆ. ಹಾರ್ಟ್ ಟ್ಯಾಕ್ ಅಂತೀವಿ ಆದರೆ ಅವರ ನಿಧನಕ್ಕೆ ಕಾರಣ ಮ್ಯಾಸೀವ್ ಬ್ಲೀಡಿಂಗ್ ಎಮದು ಅವರು ತಿಳಿಸಿದರು. ಇದನ್ನೂ ಓದಿ: ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ

DHRUVANARAYAN DOCTOR

ಧ್ರುವ ನಾರಾಯಣ್ (62) ಅವರು ಶನಿವಾರ ಹೃದಯಾಘಾತ (Heart Attack) ದಿಂದ ಮೈಸೂರಿನ ಡಿಆರ್‍ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1961 ಜುಲೈ 31ರಂದು ಚಾಮರಾಜನಗರದ ಹಗ್ಗವಾಡಿಯಲ್ಲಿ ಜನಿಸಿದ್ದ ಇವರು ಬೆಂಗಳೂರಿನ ಜಿಕೆವಿಕೆಯಲ್ಲಿ ಪದವಿ ಪಡೆದಿದ್ದರು. ಕಳೆದ 2 ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ನಂಜನಗೂಡಿನಿಂದ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. 2 ಬಾರಿ ಶಾಸಕ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *