ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಮಾತಾಡಿದ ಸುಮಲತಾ

Public TV
1 Min Read
abhishek 1

ಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಇಂದು ಮಂಡ್ಯದಲ್ಲಿ ಮಹತ್ವದ ಸುದ್ದಿಗೋಷ್ಠಿ ಆಯೋಜನೆ ಮಾಡಿದ್ದರು. ವಿರೋಧಿ ಪಕ್ಷಗಳಿಂದ ತಮಗಾದ ನೋವನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕುಟುಂಬ ರಾಜಕಾರಣದ ಬಗ್ಗೆಯೂ ಮಾತನಾಡಿದ ಅವರು, ತಮ್ಮ ಮಗ ಅಭಿಷೇಕ್ ಅಂಬರೀಶ್ (Abhishek) ಯಾವುದೇ ಕಾರಣಕ್ಕೂ ತಾವು ರಾಜಕಾರಣದಲ್ಲಿ ಇರುವತನಕ ರಾಜಕಾರಣಕ್ಕೆ ಬರುವುದಿಲ್ಲ ಎಂದು ಹೇಳಿಕೆ ಕೊಟ್ಟರು. ಅಲ್ಲದೇ ಅಭಿಷೇಕ್ ಮದುವೆ ವಿಚಾರವನ್ನೂ ಬಹಿರಂಗ ಪಡಿಸಿದರು.

abhishek ambareesh Aviva Bidapa

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ, ‘ಚುನಾವಣೆಗೆ ನಿಲ್ಲುವಂತೆ ಎರಡು ಪಕ್ಷಗಳಿಂದ ಅಭಿಷೇಕ್‍ ಗೆ ಆಹ್ವಾನ ಬಂದಿದ್ದು ನಿಜ. ಅಭಿಷೇಕ್ ಸದ್ಯದಲ್ಲೇ ಮದುವೆ (Marriage) ಆಗಲಿದ್ದಾರೆ. ಅಲ್ಲದೇ, ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳಿವೆ. ನಾನು ರಾಜಕಾರಣದಲ್ಲಿ ಇರುವಾಗ, ಅವನು ರಾಜಕೀಯ ಕ್ಷೇತ್ರಕ್ಕೆ ಬರುವುದಿಲ್ಲ ಮತ್ತು ಚುನಾವಣೆಯನ್ನು ಎದುರಿಸುವುದಿಲ್ಲ’ ಎಂದು ಸ್ಪಷ್ಟ ಪಡಿಸಿದ್ದರು. ಈ ಮಾತಿನ ಮೂಲಕ ಅಭಿಷೇಕ್ ಸದ್ಯದಲ್ಲೇ ಹೊಸ ಜೀವನಕ್ಕೆ ಕಾಲಿಡುವ ಕುರಿತು ಸುಳಿವು ನೀಡಿದರು. ಇದನ್ನೂ ಓದಿ: ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ ರಕ್ಷಿತ್ ಶೆಟ್ಟಿ ನಾಯಕಿ

abhishek 1 1

ಕಳೆದ ತಿಂಗಳಷ್ಟೇ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗಾಗಲೇ ಮನೆಯಲ್ಲಿ ಮದುವೆ ತಯಾರಿ ಕೂಡ ನಡೆಯುತ್ತಿದೆ. ಏಪ್ರಿಲ್ ನಲ್ಲಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ (Aviva Biddappa) ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡೂ ಮನೆಯಲ್ಲಿ ಮದುವೆ ಸಿದ್ಧತೆ ಭರದಿಂದ ನಡೆಯುತ್ತಿದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲೇ ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *