ಕೋಲ್ಕತ್ತಾ: ಕೋವಿಡ್ 19 (Covid 19) ನಂತರ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ದರ (Electrinics Product Price) ಮೊದಲ ಬಾರಿಗೆ ಭಾರೀ ಇಳಿಕೆಯಾಗುತ್ತಿದೆ.
2020ರ ಬಳಿಕ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಶೇ.5-15 ರಷ್ಟು ಇಳಿಕೆಯಾಗಿದೆ. ಖ್ಯಾತ ಕಂಪನಿಗಳಾದ ಎಲ್‌ಜಿ, ಸ್ಯಾಮ್‌ಸಂಗ್ ಸೇರದಿಂತೆ ಇನ್ನಿತರ ಕಂಪನಿಗಳ ಎಂಟ್ರಿ ಲೆವೆಲ್ ಫ್ರಿಡ್ಜ್ ಬೆಲೆ 4 ಸಾವಿರ ರೂ. ಇಳಿಕೆಯಾಗಿದೆ. 1 ಲಕ್ಷ ರೂ. ಬೆಲೆ ಇರುವ ಫ್ರಿಡ್ಜ್ ದರ 7 ಸಾವಿರದಿಂದ 15 ಸಾವಿರ ರೂ.ವರೆಗೆ ಇಳಿಕೆಯಾಗಿದೆ.
ಸ್ಮಾರ್ಟ್‌ಫೋನ್ ಬೆಲೆಗಳು ಶೇ.15ರಷ್ಟು ಇಳಿಕೆಯಾಗಿದೆ. 2020, 2021ರ ಅವಧಿಯಲ್ಲಿ ಫೋನ್‌ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಫೋನ್ ಉತ್ಪಾದನೆಯಾಗಿತ್ತು. ಈಗ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ದಾಸ್ತಾನಿನಲ್ಲಿರುವ ಫೋನ್‌ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಕಂಪನಿಗಳು ದರವನ್ನು ಇಳಿಕೆ (Price Cut) ಮಾಡಿವೆ. ಇದನ್ನೂ ಓದಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲ: ಸುಮಲತಾ
ಪ್ರತಿ ವರ್ಷ ಎಲೆಕ್ಟ್ರಾನಿಕ್ ಕಂಪನಿಗಳು ದರವನ್ನು ಏರಿಕೆ ಮಾಡುವುದು ಸಾಮಾನ್ಯ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳಿಂದಾಗಿ ಪ್ರತಿ ಬಾರಿ ಸುಮಾರು ಶೇ.2-4 ರಷ್ಟು ಬೆಲೆಗಳನ್ನು ವರ್ಷಕ್ಕೆ ಎರಡು-ಮೂರು ಬಾರಿ ಹೆಚ್ಚಿಸುತ್ತಿವೆ. ಉದ್ಯಮದ ಮಾಹಿತಿಯ ಪ್ರಕಾರ ಈ ವರ್ಷದ ಜನವರಿಯ ಹೊತ್ತಿಗೆ, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೆಲೆ ಫೆಬ್ರವರಿ 2020ರ ಪೂರ್ವ ಕೋವಿಡ್ ಅವಧಿಗಿಂತ ಸರಾಸರಿ ಶೇ.18-25 ರಷ್ಟು ಹೆಚ್ಚಾಗಿತ್ತು.
ಈಗ ಕಚ್ಚಾವಸ್ತುಗಳ ಬೆಲೆ ಕಡಿಮೆಯಾಗಿದೆ. ಕಳೆದ ವಷಕ್ಕೆ ಹೋಲಿಸಿದರೆ ಫೆಬ್ರವರಿಯಲ್ಲಿ ಅಲ್ಯೂಮಿನಿಯಂ ಬೆಲೆ ಶೇ. 16.3, ಉಕ್ಕು ಶೇ.1.3 ಮತ್ತು ಹೈ-ಡೆನ್ಸಿಟಿ ಪಾಲಿಥಿಲೀನ್ (HDPE) ಬೆಲೆ ಶೇ.7 ರಷ್ಟು ಕಡಿಮೆಯಾಗಿದೆ. ಜುಲೈನಿಂದ ಡಿಸೆಂಬರ್ 2022 ರವರೆಗೆ ಹಣದುಬ್ಬರದಿಂದ ತಾಮ್ರದ ಬೆಲೆಗಳು ಸ್ವಲ್ಪ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷದಿಂದ ಜಾಗತಿಕವಾಗಿ ಸೆಮಿಕಂಡಕ್ಟರ್ ಚಿಪ್ ಬೆಲೆ ಇಳಿಕೆಯಾಗುತ್ತಿದೆ. ಕೋವಿಡ್ ಸಮಯದಲ್ಲಿ ಉತ್ತುಂಗದಲ್ಲಿ ಇದ್ದ ಬೆಲೆಗಿಂತ ಹತ್ತು ಪಟ್ಟು ಹೆಚ್ಚು ಇಳಿಕೆಯಾಗಿದೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.