ಲಕ್ನೋ: ಸಾಮಾನ್ಯವಾಗಿ ಯಾವುದೇ ಹಬ್ಬಗಳು ಬಂದಾಗಲೂ ಪೊಲೀಸರಿಗೆ (Police) ಬಿಡುವಿಲ್ಲದ ಕೆಲಸ ಇರುತ್ತದೆ. ಹಾಗಾಗಿ ಸಾಮಾನ್ಯ ದಿನಗಳಿಗಿಂತ ಭದ್ರತೆ ಹೆಚ್ಚಾಗಿಯೇ ಇರುತ್ತದೆ. ಆದ್ರೆ ಇಲ್ಲೊಬ್ಬರು ಪೊಲೀಸ್ ಅಧಿಕಾರಿ ತನ್ನ ಹೆಂಡತಿಯೊಂದಿಗೆ ಹೋಳಿ (Holi Festival) ಆಚರಿಸಲು 10 ದಿನ ರಜೆ ಕೇಳಿ ಸುದ್ದಿಯಾಗಿದ್ದಾರೆ.
ಉತ್ತರಪ್ರದೇಶದ (Uttar Pradesh) ಫರೂಕಾಬಾದ್ ಜಿಲ್ಲೆಯ ಇನ್ಸ್‌ಪೆಕ್ಟರ್ ಹೋಳಿಗೆ ಮುಂಚಿತವಾಗಿ 10 ದಿನಗಳ ರಜೆ ಕೇಳಿದ್ದಾರೆ. ದಾಂಪತ್ಯ ಕಲಹ ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದಾರೆ. ರಜೆಯ ಅರ್ಜಿ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ನೌಕಾಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಮೂವರು ಪೈಲೆಟ್‌ಗಳ ರಕ್ಷಣೆ
ರಜೆ ಅರ್ಜಿಯಲ್ಲಿ ಏನಿದೆ?
`ಮದುವೆಯಾಗಿ (Marriage) 22 ವರ್ಷಗಳಾದರೂ ನಾನು ಅತ್ತೆ ಮನೆಗೆ ಹೋಗಿ ಹೋಳಿ ಆಚರಿಸಲು ಸಾಧ್ಯವಾಗಿಲ್ಲ. ಇದರಿಂದ ನನ್ನ ಹೆಂಡತಿ ತುಂಬಾ ಕೋಪಗೊಂಡಿದ್ದಾಳೆ. ಈ ಬಾರಿ ಅಲ್ಲಿಗೆ ಹೋಗಲೇಬೇಕೆಂದು ಹಠ ಹಿಡಿದು ಕುಳಿತಿದ್ದಾಳೆ. ರಜೆ ಇಲ್ಲದೆ ಹೋಗಿಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡು 10 ದಿನ ಸಾಮಾನ್ಯ ರಜೆ ಒದಗಿಸಿ’ ಎಂದು ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಓದಿದ ನಂತರ ಎಸ್ಪಿ ಅಶೋಕ್ ಕುಮಾರ್ ಮಾರ್ಚ್ 4 ರಿಂದ ಇನ್ಸ್‌ಪೆಕ್ಟರ್‌ಗೆ 5 ದಿನಗಳ ಸಾಮಾನ್ಯ ರಜೆ ನೀಡಿದ್ದಾರೆ. ಇದನ್ನೂ ಓದಿ: ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ತಂದೊಡ್ಡಿದ ಯುವತಿ