ಸಿಂಗಾಪುರ: ಭಾರತ (India) ಮೂಲದ ಯೋಗ ಶಿಕ್ಷಕನೊಬ್ಬನನ್ನು ಮಹಿಳೆಯರಿಗೆ ಕಿರುಕುಳ (Molestation) ನೀಡಿದ ಆರೋಪದ ಮೇಲೆ ಸಿಂಗಾಪುರದಲ್ಲಿ (Singapore) ವಿಚಾರಣೆಗೆ ಗುರಿಪಡಿಸಲಾಗಿದೆ.
2020ರ ಜು.11ರಂದು ಯೋಗ (Yoga) ಶಿಕ್ಷಕ ರಾಜ್‍ಪಾಲ್ ಸಿಂಗ್ ಕಿರುಕುಳ ನೀಡಿದ್ದಾಗಿ 24 ವರ್ಷದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ತಾನು ಸಿಂಗ್‍ನಿಂದ ಅನುಭವಿಸಿದ ಕಿರುಕುಳದ ಬಗ್ಗೆ ಮಹಿಳೆ ತನ್ನ ಸ್ನೇಹಿತನೊಂದಿಗೆ ವಾಟ್ಸಪ್ (WhatsApp) ಮೆಸೇಜ್‍ನಲ್ಲಿ ತಿಳಿಸಿದ್ದಳು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸೆಲೀನ್ ಯಾಪ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಜೋರಾಗಿ ಸಂಗೀತವನ್ನು ಹಾಕದಂತೆ ಕೇಳಿದ್ದಕ್ಕೆ ಕೆನಡಾ ನಿವಾಸಿಯ ಕೊಲೆ
2020ರ ಜು.31ರಂದು ಮಹಿಳೆಯೊಬ್ಬರು ಟ್ವಿಟ್ಟರ್‌ನಲ್ಲಿ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಅದನ್ನು ನೋಡಿದ 28 ಹಾಗೂ 37 ವರ್ಷದ ಮಹಿಳೆಯರಿಬ್ಬರು ಅವರನ್ನು ಸಂಪರ್ಕಿಸಿದ್ದಾರೆ. ನಂತರ 28 ವರ್ಷದ ಮಹಿಳೆ ತಮ್ಮ ಮೇಲಾದ ದೌರ್ಜನ್ಯವನ್ನು ಫೇಸ್‍ಬುಕ್‍ನಲ್ಲಿ (Facebook) ಬರೆದುಕೊಂಡಿದ್ದಾರೆ.
ಈ ಬಗ್ಗೆ ಸಂತ್ರಸ್ತೆಯೊಬ್ಬರು ಕ್ಯಾಮೆರಾವನ್ನು ಸಾಕ್ಷಿಯಾಗಿ ನೀಡಿದ್ದು ಮಾಧ್ಯಮಗಳಿಗ ಅದು ಲಭ್ಯವಾಗಿಲ್ಲ. ರಾಜ್‍ಪಾಲ್ ಸಿಂಗ್ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು ಪ್ರಕರಣ ವಿಚಾರಣೆ ಹಂತದಲ್ಲಿದೆ. 5ನೇ ಮಹಿಳೆ ನೀಡಿದ ದೂರನ್ನು ಮುಂದಿನ ದಿನಗಳಲ್ಲಿ ವಿಚಾರಣೆನಡೆಸುವುದಾಗಿ ಕೋರ್ಟ್ ತಿಳಿಸಿದೆ.
ಸಿಂಗ್ 2019ರ ಏಪ್ರಿಲ್‍ನಲ್ಲಿ ಟೆಲೋಕ್ ಆಯರ್ ರಸ್ತೆಯ ಯೋಗ ಕೇಂದ್ರದ ಶಿಕ್ಷಕರಾಗಿ ನೇಮಕಗೊಂಡಿದ್ದರು. ಇದನ್ನೂ ಓದಿ: ವಿಧಾನಸೌಧದಲ್ಲಿನ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್