ನಾನು ಸರಳ, ಸಜ್ಜನ ರಾಜಕಾರಣಿ, ಹಣ ವಾಪಸ್ ಪಡೆದೇ ಪಡೀತಿನಿ – ಮಾಡಾಳ್

Public TV
2 Min Read
Maadal Virupakshappa

ದಾವಣಗೆರೆ: ನಾನು ಸರಳ – ಸಜ್ಜನ ರಾಜಕಾರಣಿ, ಲೋಕಾಯುಕ್ತಕ್ಕೆ (Lokayukta) ಸೂಕ್ತ ದಾಖಲೆ ಕೊಟ್ಟು ಹಣ ವಾಪಸ್ ಪಡೆದೇ ಪಡೆಯುತ್ತೇನೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Maadal Virupakshappa) ಹೇಳಿದ್ದಾರೆ.

ಕೋರ್ಟ್ (Court) ನಿರೀಕ್ಷಣಾ ಜಾಮೀನು ಪಡೆದು ಚನ್ನಗಿರಿಯ ನಿವಾಸಕ್ಕೆ ವಾಪಸ್ ಬರುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ, ನಾನು ಯಾವುದೇ ತಪ್ಪು ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಅದಕ್ಕಾಗಿ ಕೋರ್ಟ್ ನನಗೆ ಜಾಮೀನು ಕೊಟ್ಟಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಮಾಡಾಳ್‌ ಮನೆಗೆ ವಾಪಸ್‌ – ತೆರೆದ ವಾಹನದಲ್ಲಿ ಮೆರವಣಿಗೆ

KSDL Corruption Case BJP MLA Madal Virupakshappa returns home

ನನ್ನನ್ನ ಯಾರೂ ಟ್ರ್ಯಾಪ್‌ ಮಾಡೋಕೆ ಬಂದಿಲ್ಲ. ಆದ್ರೆ ಯಾರೋ ದುರುದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ನನ್ನ ಮೇಲೆ ಆದಾಯ ತೆರಿಗೆ ಇಲಾಖೆ ರೇಡ್ ಮಾಡಿಸಿದ್ದರು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಇನ್ನೇನೋ ಮಾಡಿಸಿದ್ದರು, ಇದೀಗ ಲೋಕಾಯುಕ್ತ ದಾಳಿ ಮಾಡಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆರೋಗ್ಯಕ್ಕಾಗಿ ವಿಶೇಷ ವ್ಯವಸ್ಥೆ ರೂಪಿಸಲಾಗುತ್ತಿದೆ: ಬೊಮ್ಮಾಯಿ

ನಾನೀಗ ಆಡಳಿತ ಪಕ್ಷದಲ್ಲಿದ್ದೇನೆ, ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಹಾಗಾಗಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ. ನಾವೂ ವಿರೋಧ ಪಕ್ಷದಲ್ಲಿದ್ದಾಗ ತಪ್ಪು ನಡೆದರೆ, ಕ್ರಮಕ್ಕೆ ಒತ್ತಾಯಿಸುತ್ತಿದ್ದೆವು. ಇದು ಸ್ವಾಭಾವಿಕ. ಸಿದ್ದರಾಮಯ್ಯ (Siddaramaiah) ಅವರ ಮೇಲೆ ನನಗೆ ಅಪಾರ ಗೌರವವಿದೆ. ಅಲ್ಲದೇ ಈ ವಿಚಾರದಲ್ಲಿ ಸತ್ಯಾಂಶ ಏನು ಅನ್ನೋದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.

ನಾನು ಸರಳ, ಸಜ್ಜನ ರಾಜಕಾರಣಿ: ನಾನು ಸರಳ, ಸಜ್ಜನ ರಾಜಕಾರಣಿ ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನ್ನ ಕ್ಷೇತ್ರದ ಜನರೇ ಹೇಳ್ತಾರೆ. ನ್ಯಾಯಾಲಯದಿಂದ ನಿಷ್ಪಕ್ಷಪಾತ ತೀರ್ಪು ಸಿಗುತ್ತದೆಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ದುಡ್ಡು ವಾಪಸ್ ಪಡೆಯುತ್ತೇನೆ: ಚನ್ನಗಿರಿ ಅಡಿಕೆ ನಾಡು ಅಂತಾರೆ. ಇಲ್ಲಿ ಅಡಿಕೆ ತೋಟ ಇರುವ ಯಾವುದೇ ಮನೆಯವರ ಬಳಿಯೂ 5-6 ಕೋಟಿ ರೂ. ಇದ್ದೇ ಇರುತ್ತೆ. ನಮ್ಮ ಬಳಿ 125 ಎಕರೆ ಅಡಿಕೆ ತೋಟ ಇದೆ. 2 ಕ್ರಶರ್‌ಗಳಿವೆ, ಅಡಿಕೆ ಮಂಡಿ ಇದೆ. ಇನ್ನೂ ಅನೇಕ ವ್ಯವಹಾರಗಳಿವೆ. ನನ್ನ ಮಗ ಪ್ರಶಾಂತ್ ಬಳಿ ಸಿಕ್ಕಿರೋದು ನಮ್ಮ ಕುಟುಂಬಕ್ಕೆ ಸೇರಿದ ಹಣವೇ ಹೊರತು, ಲಂಚದ ಹಣವಲ್ಲ. ಲೋಕಾಯುಕ್ತಕ್ಕೆ ಸೂಕ್ತ ದಾಖಲೆ ನೀಡಿ ಹಣವನ್ನು ವಾಪಸ್ ಪಡೆದೇ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ಪಾನ್ ಮಸಾಲ ಕಂಪನಿ ದುಡ್ಡಿರಬಹುದು: ನನ್ನ ಮಗ ಪ್ರಶಾಂತ್ ಸುಮ್ಮನೇ ಕೂತಿದ್ದ. ಯಾರೋ ಇಬ್ಬರು ಬಂದು ದುಡ್ಡು ಕೊಟ್ಟು ಹೋದ್ರು, ನಂತರ ಲೋಕಾಯುಕ್ತದವರು ಬಂದು ಹಣದ ಮೇಲೆ ಕೈ ಹಿಡಿಸಿ ಸೀಜ್ ಮಾಡಿಕೊಂಡು ಹೋದ್ರು. ಆ ಹಣವನ್ನ ನಮ್ಮ ಪಾನ್ ಮಸಾಲ ಕಂಪನಿಗಾಗಿ ಕೊಡಲು ಬಂದಿರಬಹುದು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *