ಹುಕ್ಕಾ ಬಾರ್‌ನಲ್ಲಿ ವೈದ್ಯನ ಮಗಳ ಮೇಲೆ ಅತ್ಯಾಚಾರ

Public TV
1 Min Read
kanpur man rape case

ಲಕ್ನೋ: ವೈದ್ಯ ದಂಪತಿ ಮಗಳನ್ನು ಹುಕ್ಕಾ ಬಾರ್‌ಗೆ ಕರೆಸಿಕೊಂಡು, ಪಾನಿಯಾದಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ಕುಡಿಸಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ (UP Rape Case) ನಡೆದಿದೆ.

ಉತ್ತರ ಪ್ರದೇಶದ (Uttar Pradesh) ವೈದ್ಯ ದಂಪತಿಯ 16 ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಲಾಗಿದೆ. ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಗೆ ಈತ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿತನಾಗಿದ್ದ. ಆಕೆಯನ್ನು ಕೆಫೆವೊಂದಕ್ಕೆ ಕರೆಸಿಕೊಂಡು ಕೃತ್ಯ ಎಸಗಿದ್ದಾನೆ. ಇದನ್ನೂ ಓದಿ: ಐವರು ಮಕ್ಕಳಿದ್ದರೂ, ಆಸ್ತಿಯೆಲ್ಲಾ UP ಸರ್ಕಾರದ ಹೆಸರಿಗೆ ಬರೆದ ವೃದ್ಧ

STOP RAPE CRIME

ಕಾನ್ಪುರದ ವಿನಯ್ ಠಾಕೂರ್ ಮತ್ತು ಇತರ ಏಳು ಮಂದಿ ವಿರುದ್ಧ ಸಂತ್ರಸ್ತೆ ತಂದೆ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ವಿನಯ್ ಠಾಕೂರ್, ಮಾರ್ಚ್ 4 ರಂದು ಕರ್ರಾಹಿಯ ಎಂಜಿ ಕೆಫೆಗೆ ಹುಡುಗಿಯನ್ನು ಕರೆಸಿಕೊಂಡಿದ್ದ. ನಂತರ ವಿನಯ್ ಕೆಫೆಯಲ್ಲಿ ಬಾಲಕಿಗೆ ಪಾನಿಯಾದಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ಕೊಟ್ಟಿದ್ದ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದ. ಅಲ್ಲಿ ಅವನ ಏಳು ಸ್ನೇಹಿತರು ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದರು ಎಂದು ಸಂತ್ರಸ್ತೆ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪಿ ಅತ್ಯಾಚಾರ ಎಸಗಲು ಯತ್ನಿಸಿದಾಗ ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಆರೋಪಿ ಆಕೆಯ ದೇಹದ ಭಾಗಗಳನ್ನು ಕಚ್ಚಿದ್ದಾನೆ. ಬಾಲಕಿ ಮನೆಗೆ ಬಂದು ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದಾಳೆ. ಆಕೆಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಪ್ ನಾಯಕ ಮನೀಶ್ ಸಿಸೋಡಿಯಾ ಜೈಲುಪಾಲು

ಆರೋಪಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ. ಸಲುಗೆ ಬೆಳೆಸಿಕೊಂಡು ಅಶ್ಲೀಲ ವೀಡಿಯೋ ಮಾಡಿದ್ದ. ಕೆಲವು ದಿನಗಳಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ವೀಡಿಯೋ ವೈರಲ್ ಮಾಡುವುದಾಗಿ ಆರೋಪಿ ಬೆದರಿಕೆ ಕೂಡ ಹಾಕುತ್ತಿದ್ದ ಎಂದು ಸಂತ್ರಸ್ತೆ ತನ್ನ ತಂದೆಗೆ ಹೇಳಿಕೊಂಡಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *