ವಿರಾಟ್ ಶತಕಗಳಿಂದಲೇ ಭಾರತ ಗೆಲ್ಲುತ್ತಿತ್ತು – ಕೊಹ್ಲಿಯನ್ನು ಹೊಗಳಿ ಸಚಿನ್ ವಿರುದ್ಧ ಅಖ್ತರ್ ಟೀಕೆ

Public TV
1 Min Read
Shoaib Akhtar And Team India

ಇಸ್ಲಾಮಾಬಾದ್: 2022ರ ಟಿ20 ವಿಶ್ವಕಪ್ (T20 WorldCup) ಬಳಿಕ ಟೀಂ ಇಂಡಿಯಾ (Team India) ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ನಿವೃತ್ತಿಯಾಗೋದು ಪಕ್ಕಾ ಅಂತಾ ಟೀಕಿಸಿದ್ದ ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ (Shoaib Akhtar) ಇದೀಗ ಕೊಹ್ಲಿಯನ್ನ ಹಾಡಿಹೊಗಳಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಖ್ತರ್, ನಾನೇಕೆ ಕೊಹ್ಲಿಯನ್ನು ಹೊಗಳಬಾರದು ಎಂದಿದ್ದಾರೆ. ಇದೇ ವೇಳೆ ಸಚಿನ್ ತೆಂಡೂಲ್ಕರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಒತ್ತಾಯಕ್ಕೆ ಮಣಿದು ಕೊಹ್ಲಿ ನಾಯಕತ್ವ ತೊರೆದರು: ಶೋಯೆಬ್‌ ಅಖ್ತರ್‌

Virat Kohli 7

ನೀವು ನೋಡಿ ಸಚಿನ್ ತೆಂಡೂಲ್ಕರ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮ್ಯಾನ್‌ ಎಂದು ನಾನು ನಂಬುತ್ತೇನೆ. ಆದ್ರೆ ಅವರು ಒಬ್ಬ ನಾಯಕನಾಗಿ ಸೋತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: WPL 2023: ಕೌರ್‌ ಭರ್ಜರಿ ಫಿಫ್ಟಿ – ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್‌ಗೆ 143 ರನ್‌ಗಳ ಭರ್ಜರಿ ಜಯ

ಇದೇ ವೇಳೆ ವಿರಾಟ್ ಕೊಹ್ಲಿ ಅವರನ್ನ ಏಕೆ ಹೊಗಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ನಾನೇಕೆ ಹಾಗೆ ಮಾಡಬಾರದು? ಕೊಹ್ಲಿ ಅವರಿಂದ ಈವರೆಗೆ ಏಕದಿನ ಪಂದ್ಯಗಳಲ್ಲಿ 46 ಶತಕಗಳು ಸಿಡಿದಿವೆ. ಅದರಲ್ಲಿ 40 ಶತಕಗಳು ಚೇಸಿಂಗ್‌ನಲ್ಲೇ ಬಂದಿವೆ. ಒಂದು ಹಂತದಲ್ಲಿ ನೋಡೊದಾದ್ರೆ ವಿರಾಟ್ ಕೊಹ್ಲಿ ಅವರ ಶತಕಗಳಿಂದಲೇ ಭಾರತ ಗೆಲ್ಲುತ್ತಿತ್ತು ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

Shoaib Akhtar Virat Kohli 1

ಏಕದಿನ ಕ್ರಿಕೆಟ್‌ನಲ್ಲಿ (ODI Cricket) 46 ಶತಕಗಳನ್ನ ಪೂರೈಸಿರುವ ವಿರಾಟ್ ಕೊಹ್ಲಿ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. ಸಚಿನ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನ ಸಿಡಿಸಿದ್ದಾರೆ. ಇನ್ನೂ 4 ಶತಕಗಳನ್ನ ಸಿಡಿಸಿದ್ರೆ ಕೊಹ್ಲಿ, ವಿಶ್ವದಾಖಲೆ ನಿರ್ಮಿಸಿ ಹೊಸ ಮೈಲಿಗಲ್ಲು ಸಾಧಿಸಲಿದ್ದಾರೆ. ಇದನ್ನೂ ಓದಿ: ನೆಟ್‌ನಲ್ಲಿ ಬೆವರಿಳಿಸಿದ ಕೊಹ್ಲಿ – ನಿರ್ಣಾಯಕ ಪಂದ್ಯದ ಗೆಲುವಿಗೆ ಭಾರತ ಭರ್ಜರಿ ತಯಾರಿ

ಸದ್ಯ ಇದೀಗ ಆಸ್ಟ್ರೇಲಿಯಾ (Australia) ವಿರುದ್ಧದ ಬಾರ್ಡರ್ ಗಾವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿದ್ದು, 4ನೇ ನಿರ್ಣಾಯಕ ಪಂದ್ಯಕ್ಕಾಗಿ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *