ಆಸ್ಟ್ರೇಲಿಯಾದ ಹಿಂದೂ ದೇವಾಲಯದಲ್ಲಿ ಮತ್ತೆ ಮೋದಿ ವಿರೋಧಿ ಬರಹ – 2 ತಿಂಗಳಲ್ಲಿ 4ನೇ ಘಟನೆ

Public TV
1 Min Read
Australia hindu temple 1

ಕ್ಯಾನ್ಬೆರಾ: ಹಿಂದೂ ದೇವಾಲಯದಲ್ಲಿ (Hindu Temple)  ಮತ್ತೆ ಭಾರತ (India) ಹಾಗೂ ಮೋದಿ (Narendra Modi) ವಿರೋಧಿ ಬರಹಗಳನ್ನು ಗೀಚಿ ವಿರೂಪಗೊಳಿಸಿರುವ ಘಟನೆ ಮತ್ತೆ ಆಸ್ಟ್ರೇಲಿಯಾದಲ್ಲಿ (Australia) ವರದಿಯಾಗಿದೆ. ಇದು 2 ತಿಂಗಳಲ್ಲಿ ನಡೆದಿರುವ 4ನೇ ಘಟನೆಯಾಗಿದೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್‌ನ ದಕ್ಷಿಣ ಭಾದಲ್ಲಿನ ಬರ್ಬ್ಯಾಂಕ್ ಉಪನಗರದಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ದೇವಾಲಯವನ್ನು ಖಲಿಸ್ತಾನಿ ಬೆಂಬಲಿಗರು ವಿರೂಪಗೊಳಿಸಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಬೆಳಗ್ಗೆ ಭಕ್ತರು ಪೂಜೆ ಸಲ್ಲಿಸಲು ದೇವಾಲಯಕ್ಕೆ ಆಗಮಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೈಡನ್‌ಗಿದ್ದ ಕ್ಯಾನ್ಸರ್ ತೆಗೆದುಹಾಕಿದ ವೈದ್ಯರು – ಅಮೆರಿಕ ಅಧ್ಯಕ್ಷ ಈಗ ಸಂಪೂರ್ಣ ಗುಣಮುಖ

Australia hindu temple

ದೇವಾಲಯದ ಅರ್ಚಕರು ಹಾಗೂ ಭಕ್ತರು ಶನಿವಾರ ಬೆಳಗ್ಗೆ ಕರೆ ಮಾಡಿ ನಮ್ಮ ದೇವಾಲಯದ ಗೋಡೆ ಮೇಲೆ ದ್ವೇಷ ಬರಹಗಳನ್ನು ಗೀಚಿ ವಿರೂಪಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದು ಅತ್ಯಂತ ಖಂಡನೀಯ ಕೃತ್ಯವಾಗಿದ್ದು, 7 ದಿನಗಳಲ್ಲಿ ನಡೆದಿರುವ 2ನೇ ಘಟನೆ ಎಂದು ದೇವಾಲಯದ ಅಧ್ಯಕ್ಷ ಸತೀಂದರ್ ಶುಕ್ಲಾ ತಿಳಿಸಿದ್ದಾರೆ.

ಈ ಹಿಂದೆ ಬ್ರಿಸ್ಬೇನ್‌ನಲ್ಲಿರುವ ಮತ್ತೊಂದು ಹಿಂದೂ ದೇವಾಲಯ ಗಾಯತ್ರಿ ಮಂದಿರಕ್ಕೆ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಖಲಿಸ್ತಾನ್ ಭಯೋತ್ಪಾದಕರಿಂದ ಬೆದರಿಕೆ ಕರೆಗಳು ಬಂದಿವೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಹಿಂದೂ ಜನರನ್ನು ಭಯಭೀತಗೊಳಿಸಲು ದುಷ್ಕರ್ಮಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ. ಇದು ಸಿಖ್ ಫಾರ್ ಜಸ್ಟಿಸ್ (SFJ) ಮಾದರಿಯಾಗಿದೆ ಎಂದು ಹಿಂದೂ ಮಾನವ ಹಕ್ಕುಗಳ ನಿರ್ದೇಶಕಿ ಸಾರಾ ಎಲ್ ಗೇಟ್ಸ್ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಸ್ಥಿತಿ ಯಾರಿಗೂ ಬೇಡ- ಅಪ್ಪನ ನೆನಪಿಗಾಗಿ ಕ್ಯಾಂಟೀನ್ ಮಂಜಣ್ಣನಿಂದ ಉಚಿತ ಅಂಬುಲೆನ್ಸ್ ಸೇವೆ

Share This Article
Leave a Comment

Leave a Reply

Your email address will not be published. Required fields are marked *