ಉಡುಪಿಯಲ್ಲಿ 15 ದಿನಗಳ ಕಾಲ ಅತಿರುದ್ರ ಮಹಾಯಾಗ, ಶಿವಾರತಿ

Public TV
1 Min Read
UDUPI SHIVARATHI 1

ಉಡುಪಿ: ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅಪೂರ್ವ ಧಾರ್ಮಿಕ ಕಾರ್ಯಕ್ರಮವನ್ನು ನಡೆಯುತ್ತಿದೆ. 15 ದಿನಗಳ ನಿರಂತರ ಕಾರ್ಯಕ್ರಮದಲ್ಲಿ 2 ಲಕ್ಷ ಭಕ್ತರು ಭಾಗಿಯಾಗಲಿದ್ದಾರೆ. ಗಂಗೆಗೆ ನಡೆಯುವ ಮಾದರಿಯ ಆರತಿ ಕೈಲಾಸವಾಸಿ ಶಿವ (Shiva) ನಿಗೆ ಆಗಲಿದೆ.

UDUPI SHIVARATHI

ಇತಿಹಾಸದಲ್ಲೇ ಮೊದಲ ಬಾರಿಗೆ ಉಡುಪಿ (Udupi) ಯಲ್ಲಿ ಅತಿ ರುದ್ರ ಮಹಾಯಾಗ ನಡೆಯುತ್ತಿದೆ. ಮಣಿಪಾಲ (Manipal) ಸಮೀಪದ ಸರಳಬೆಟ್ಟು ಶ್ರೀ ಉಮಾಮಹೇಶ್ವರಿ ದೇವಸ್ಥಾನ (Umamaheshwari Temple) ದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದೆ. ಬರೋಬ್ಬರಿ 15 ದಿನಗಳ ಕಾಲ ನಡೆಯುವ ಅತಿ ರುದ್ರ ಮಹಾಯಾಗದಲ್ಲಿ 150 ಜನ ಋತ್ವಿಜರು ರುದ್ರಪಠಣ, ಯಾಗ- ಹೋಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಕಾರವಾರದಲ್ಲಿ PDO ವರ್ಗಾವಣೆ ಕಿರಿಕ್ – ಕಚೇರಿಯಲ್ಲೇ ಹಾಲಿ, ಮಾಜಿ ಶಾಸಕರ ಫೈಟ್

UDUPI SHIVARATHI 2

ಶೈವ ಪರಂಪರೆ ಮಾದರಿಯಲ್ಲಿ ಪೂಜೆ ಪುನಸ್ಕಾರ ಹೋಮ ಮಂತ್ರ ಪಠಣ ಯಾಗಗಳು ನಡೆಯುತ್ತಿದೆ. ಪ್ರತಿ ರುದ್ರಪಠಣದ ನಂತರ ಈಶ್ವರ ದೇವರಿಗೆ ಕಲಾ ಸೇವೆ ನಡೆಯುತ್ತಿದೆ. ಸಂಗೀತ ಭರತನಾಟ್ಯ, ಯಕ್ಷಗಾನ (Yakshagana) ಸೇವೆಯನ್ನು ದೇವರಿಗೆ ಸಮರ್ಪಿಸಲಾಗುತ್ತಿದೆ. ಮುಂಜಾನೆಯಿಂದ ರಾತ್ರಿಯತನಕ ನಿರಂತರ ಅನ್ನದಾನ ಫಲಹಾರಗಳು ಸುಮಾರು 2 ಲಕ್ಷ ಜನಕ್ಕೆ ಏರ್ಪಾಟು ಮಾಡಲಾಗಿದೆ.

UDUPI SHIVARATHI 3

ಅತಿ ರುದ್ರ ಮಹಾಯಾಗದ ಮತ್ತೊಂದು ಆಕರ್ಷಣೆ ಶಿವಾರತಿ ಗಂಗಾವತಿಯ ಮಾದರಿಯಲ್ಲೇ ಶಿವಾರತಿಯನ್ನು ದೇವರಿಗೆ ಸಮರ್ಪಣೆ ಮಾಡಲಾಗುತ್ತಿದೆ. ಉಡುಪಿ ನಡೆಯುತ್ತಿರುವ ಅತಿ ರುದ್ರ ಮಹಾಯಾಗಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ದೇಶದ ಕೆಲ ಭಾಗಗಳಿಂದ ಉತ್ತರ ಭಾರತದಿಂದ ಭಕ್ತರು ಬರುತ್ತಿದ್ದಾರೆ. ಶೃಂಗೇರಿ ಸ್ವಾಮೀಜಿಗಳ ನೇತೃತ್ವದಲ್ಲಿ ಅತಿರುದ್ರ ಮಹಾಯಾಗದ ಪೂರ್ಣಾವತಿ ನಡೆಯಲಿದೆ. ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಅತಿರುದ್ರ ಮಹಾಯಾಗದಲ್ಲಿ ಭಾಗಿಯಾಗಬೇಕು ಎಂಬ ನಂಬಿಕೆಯಿದೆ.

Share This Article
Leave a Comment

Leave a Reply

Your email address will not be published. Required fields are marked *