ಬೆಂಗಳೂರು/ದಾವಣಗೆರೆ: ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ (Madal Virupakshappa) ಹಾಗೂ ಪುತ್ರನಿಂದ ಟೆಂಡರ್ ಡೀಲ್ ನಡೆದಿರುವುದು ಬಯಲಾಗಿದೆ.
ಅಪ್ಪನ ಟೆಂಡರ್ ಡೀಲ್, ಮಗ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದ್ದಾನೆ. ಶಾಸಕರ ಪುತ್ರ ಪ್ರಶಾಂತ್ (VPrashant Madal) ಮನೆಯಲ್ಲಿ 18 ಗಂಟೆ ಶೋಧ ನಡೆಸಿದ್ದು, ಸದ್ಯ 8.12 ಕೋಟಿ ಹಣ ಸೀಜ್ ಮಾಡಲಾಗಿದೆ. ಅಧಿಕಾರಿಗಳು ಪ್ರಶಾಂತ್ ಮನೆಯ ಮೂಲೆ ಮೂಲೆಯಲ್ಲಿಯೂ ಜಾಲಾಡಿದ್ದಾರೆ.
ಲೋಕಾಯುಕ್ತ (Lokayukta) ಕಚೇರಿಗೆ ಸೀಜ್ ಮಾಡಿ 8 ಗುಟ್ಕಾ ಬ್ಯಾಗ್‍ಗಳಲ್ಲಿ 8.12 ಕೋಟಿ ಹಣ ಹಾಗೂ ಚಿನ್ನ ಶಿಫ್ಟ್ ಮಾಡಲಾಗಿದೆ. ಇತ್ತ ಈಗಾಗಲೇ ಪ್ರಕರಣ ಸಂಬಂಧ 14 ದಿನ ನ್ಯಾಯಾಂಗ ಬಂಧನದಲ್ಲಿ ಪ್ರಶಾಂತ್ ಮಾಡಾಳ್, ಟೆಂಡರ್ ಡೀಲ್ ಬಗ್ಗೆ ಲೋಕಾಯುಕ್ತ ಅಧಿಕಾರಿಳಿಂದ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ಕೋಟಿ-ಕೋಟಿ ವಿಚಾರ, ವಿರೂಪಾಕ್ಷಪ್ಪ ವಿಚಾರಣೆ ಬಳಿಕ ಸತ್ಯ ತಿಳಿಯಲಿದೆ: ಆರಗ ಜ್ಞಾನೇಂದ್ರ
ವಿರೂಪಾಕ್ಷಪ್ಪ ಅವರ ದಾವಣಗೆರೆಯ ಚನ್ನಗಿರಿ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 4 ವಾಹನಗಳಲ್ಲಿ ಬಂದ 20ಕ್ಕೂ ಹೆಚ್ಚು ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಇನ್ನು ಬಹುಕೋಟಿ ಅಕ್ರಮ ಹಣ ಪತ್ತೆ ಬೆನ್ನಲ್ಲೇ ಮಾಡಾಳ್ ಪರಾರಿಯಾಗಿದ್ದಾರೆ.