ನರೇಂದ್ರ ಮೋದಿ, ಅಮಿತ್ ಶಾ ಬಳಿಕ ಬೆಳಗಾವಿಗೆ ರಾಜನಾಥ್ ಸಿಂಗ್ ಪ್ರವಾಸ

Public TV
1 Min Read
Rajnath Singh

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ (Narendra Modi), ಅಮಿತ್ ಶಾ (Amit Shah) ಬಳಿಕ ಬೆಳಗಾವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಭೇಟಿ ನೀಡುತ್ತಿದ್ದು, ಖಾನಾಪುರ ಹಾಗೂ ಕಿತ್ತೂರು ಕ್ಷೇತ್ರಗಳಲ್ಲಿ ಮತಬೇಟೆ ನಡೆಸಲಿದ್ದಾರೆ.

ಜಿಲ್ಲೆಯ ಖಾನಾಪುರ ‌ತಾಲೂಕಿನ ನಂದಗಡದಲ್ಲಿ ವಿಜಯಸಂಕಲ್ಪ ರಥಯಾತ್ರೆ ಹಾಗೂ ಕಿತ್ತೂರು ಕ್ಷೇತ್ರದಲ್ಲಿ ಬೃಹತ್ ರೋಡ್ ಶೋದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ 11.40ಕ್ಕೆ ಬೆಳಗಾವಿ (Belagavi) ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಳಿಯಲಿರುವ ರಾಜನಾಥ್‌ ಸಿಂಗ್ ಬಳಿಕ ಹೆಲಿಕಾಪ್ಟರ್ ‌ಮೂಲಕ ನಂದಗಡಕ್ಕೆ ಹೋಗಲಿದ್ದಾರೆ. ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿರುವ ರಾಜನಾಥ ಸಿಂಗ್ 12.30ಕ್ಕೆ ನಂದಗಡದಲ್ಲಿ ವಿಜಯಸಂಕಲ್ಪ ರಥಯಾತ್ರೆಗೆ ಚಾಲನೆ ಕೊಡಲಿದ್ದಾರೆ. ಇದನ್ನೂ ಓದಿ: ಕೊನೆಯ ಸ್ಪರ್ಧೆ ತವರಲ್ಲೇ ಆಗಲಿ- ಸಿದ್ದು ಪರವಾಗಿ ದೆಹಲಿ ಅಂಗಳಕ್ಕೆ ಹೋಗಲು ಸಿದ್ಧವಾಯ್ತಾ ಟೀಂ ಮೈಸೂರು?

bjp flag

ಬಳಿಕ ಬೃಹತ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿರುವ ರಾಜನಾಥ್ ಸಿಂಗ ಅಲ್ಲಿಂದ ಹೆಲಿಕಾಪ್ಟರ್ ಮೂಲಕ‌ ಕಿತ್ತೂರು ಸೈನಿಕ ಶಾಲೆಗೆ ತೆರಳಲಿದ್ದಾರೆ. ‌ಕಿತ್ತೂರಲ್ಲೇ‌ ಮಧ್ಯಾಹ್ನದ ಭೋಜನ‌ ಮುಗಿಸಿ ಬೃಹತ್ ರೋಡ್ ‌ಶೋ‌ ನಡೆಸಲಿದ್ದಾರೆ. ಕಿತ್ತೂರು ‌ಪಟ್ಟಣದ‌ ಚೆನ್ನಮ್ಮ ವೃತ್ತದಿಂದ ಕೋಟೆಯವರೆಗೆ ಬೃಹತ್ ರೋಡ್ ‌ಶೋ ನಡೆಸಲಿದ್ದಾರೆ. ರಾಜನಾಥ ‌ಸಿಂಗ್‌ಗೆ ಸಿಎಂ ಬಸವರಾಜ ‌ಬೊಮ್ಮಾಯಿ,‌ ಸಚಿವ ಗೋವಿಂದ ‌ಕಾರಜೋಳ‌ ಸೇರಿ ಸ್ಥಳೀಯ ‌ಶಾಸಕರು ಸಾಥ್ ನೀಡಲಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್‍ನ್ಯೂಸ್- ಶೀಘ್ರದಲ್ಲೇ ಬರಲಿದೆ ಆಟೋ ಕ್ಯೂ ಆರ್ ಕೋಡ್ ಆ್ಯಪ್

Share This Article
Leave a Comment

Leave a Reply

Your email address will not be published. Required fields are marked *