ಬೆಳಗಾವಿ: ಪ್ರಧಾನಿ ನರೆಂದ್ರ ಮೋದಿ (Narendra Modi) ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಪರೀಕ್ಷೆ ಮುಂದೂಡಿ ಪದವಿಪೂರ್ವ ಶಿಕ್ಷಣ ಇಲಾಖೆ (Department of Pre-University Education) ಆದೇಶಿಸಿದೆ.
ರಾಜ್ಯಾದ್ಯಂತ ಈಗಾಗಲೇ ಪ್ರಥಮ ಪಿಯುಸಿ ಪರೀಕ್ಷೆಗಳು (PUC Exam) ಆರಂಭಗೊಂಡಿದ್ದು, ಈ ಆದೇಶ ಬೆಳಗಾವಿಗೆ (Belagavi) ಮಾತ್ರ ಅನ್ವಯವಾಗಲಿದೆ. ನಾಳೆ ನಡೆಯುವ ಪರೀಕ್ಷೆ ಮಾರ್ಚ್ 6ರಂದು ನಡೆಯಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕರಗುತ್ತಿವೆ ಹಿಮಸರೋವರಗಳು – ಭಾರತ, ಪಾಕಿಸ್ತಾನದ ಜನರಿಗೆ ಕಾದಿದೆ ಪ್ರವಾಹದ ಅಪಾಯ!
ಪ್ರಧಾನಿ ಆಗಮನದಿಂದ ಬಸ್ ಸಂಚಾರ ವ್ಯತ್ಯಯ ಆಗಲಿದೆ. ನಗರದ ವಿವಿಧೆಡೆ ಸಂಚಾರ ಮಾರ್ಗಗಳು ಬದಲಾವಣೆಗೊಳ್ಳಲಿವೆ. ಇದರಿಂದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಇಲಾಖೆಯ ಉಪನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ.
ಪ್ರಧಾನಿ ಮೋದಿಯವರ ಭೇಟಿ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಲಿದ್ದಾರೆ. ರೋಡ್ ಶೋ ಮಾರ್ಗ ಫೈನಲ್ ಆದರೆ ಅದ್ಧೂರಿ ರೋಡ್ ಶೋಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಮೋದಿ ಆಗಮನ ಹಿನ್ನೆಲೆ ವೈಮನಸ್ಸು ಮರೆತು ಒಂದಾದ ಬಿಜೆಪಿ ನಾಯಕರು