ಟಾಲಿವುಡ್ ಹಿರಿಯ ನಟ ಮಂಚು ಮೋಹನ್ ಬಾಬು ಅವರ ಪುತ್ರ, ನಟ ಮಂಚು ಮನೋಜ್ (Manchu Manoj) ಮದುವೆ (Marriage) ಕುರಿತು ಕಳೆದ ಎರಡು ವಾರಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಅಲ್ಲದೇ ಕೆಲ ದಿನಗಳಿಂದ ಟ್ರೆಂಡಿಂಗ್ ಕೂಡ ಆಗಿದೆ. ಈಗಾಗಲೇ ಮೊದಲ ಪತ್ನಿಗೆ ಡಿವೋರ್ಸ್ ನೀಡಿರುವ ಮನೋಜ್, ಎರಡನೇ ಮದುವೆಗೆ ಸಜ್ಜಾಗಿರುವ ವಿಚಾರ ಸಂಚಲನವನ್ನೂ ಉಂಟು ಮಾಡಿತ್ತು. ಇದೀಗ ಮಂಚು ಮನೆಯಲ್ಲಿ ಮದುವೆ ದಿನಾಂಕ ಗೊತ್ತು ಮಾಡಲಾಗಿದೆ.
ಶ್ರೀಮಂತ ಮನೆತನದ ಹುಡುಗಿಯನ್ನು ಮನೋಜ್ ಮದುವೆಯಾಗುತ್ತಿದ್ದು, ಮಾರ್ಚ್ 3ರಂದು ಅವರು ಭೂಮಾ ಮೌನಿಕಾ ರೆಡ್ಡಿ (Bhuma Mounika Reddy) ಅವರ ಜೊತೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕರ್ನೂಲ್ ಜಿಲ್ಲೆಯ ದೊಡ್ಡ ಕುಟುಂಬದ ಮಗಳಾಗಿರುವ ಭೂಮಾ ಮೌನಿಕಾ ರೆಡ್ಡಿ, ಮೊದಲಿನಿಂದಲೂ ಮನೋಜ್ ಗೆ ಪರಿಚಯ ಎಂದು ಹೇಳಲಾಗುತ್ತಿದೆ. ಆದರೆ, ಸಿನಿಮಾ ರಂಗಕ್ಕೂ ಭೂಮಾಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ವೀಶೇಷ. ಇದನ್ನೂ ಓದಿ: ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ
ಇದು ಭೂಮಾಗೂ ಎರಡನೇ ಮದುವೆ ಎನ್ನಲಾಗುತ್ತಿದ್ದು, ಸ್ವತಃ ಮನೋಜ್ ಆ ಮದುವೆಗೂ ಹೋಗಿದ್ದರು ಎನ್ನುವ ಗಾಸಿಪ್ ಕೂಡ ಕೇಳಿ ಬರುತ್ತಿದೆ. ಮನೋಜ್ ತಮ್ಮ ಪತ್ನಿ ಪ್ರಣತಿ ರೆಡ್ಡಿಯಿಂದ (Pranathi Reddy) ವಿಚ್ಛೇದನ ಪಡೆದ ನಂತರ ಭೂಮಾ ಜೊತೆ ಸ್ನೇಹಿ ಹೊಂದಿದ್ದರು ಎನ್ನುವ ಮಾತೂ ಇದೆ. ಕೇವಲ ಮದುವೆ ದಿನಾಂಕ ಮಾತ್ರ ಗೊತ್ತು ಮಾಡಲಾಗಿದ್ದು, ಎಲ್ಲಿ ಮದುವೆ ಆಗುತ್ತಾರೆ ಎನ್ನುವ ವಿವರವನ್ನು ಕುಟುಂಬಗಳು ಬಿಟ್ಟುಕೊಟ್ಟಿಲ್ಲ.