ಬೆಳಗಾವಿ: ಫೆ.27ರಂದು ಕುಂದಾನಗರಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮನಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ನಾಡಿನ ಮಹನೀಯರು ಇತಿಹಾಸ ಸಾರುವ ಲೈವ್ ಶೋಗೆ ಸಿದ್ಧತೆ ನಡೆದಿದೆ.
ಫೆ.27ರಂದು ಬೆಳಗಾವಿ ನಗರದ ಸಿಪಿಎಡ್ ಮೈದಾನಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಆಗಮನ ಬಿಜೆಪಿ ಪಕ್ಷದ ನಾಯಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಕುಂದಾನಗರಿ ಬೆಳಗಾವಿ (Belagavi) ಸಜ್ಜಾಗುತ್ತಿದೆ. ಇದನ್ನೂ ಓದಿ: ಸಿದ್ರಾಮಣ್ಣನಿಗೆ ಕಟು ಸತ್ಯ ಎದುರಿಸುವ ಕಾಲ ಬಂದಿದೆ: ಬೊಮ್ಮಾಯಿ ವಾಗ್ದಾಳಿ
ಬೆಳಗಾವಿಯಲ್ಲಿ 8 ಕಿಲೋಮೀಟರ್ ರೋಡ್ ಶೋಗೆ ಭರ್ಜರಿ ಸಿದ್ಧತೆ ನಡೆದಿದ್ದು, ರೋಡ್ ಶೋ ಮಾರ್ಗದಲ್ಲಿ ಸ್ವತಃಪಕ್ಷದ ಧ್ವಜ, ಬಂಟಿಂಗ್ಸ್ ಕಟ್ಟಿದ ಬಿಜೆಪಿ ಶಾಸಕ ಅಭಯ ಪಾಟೀಲ್ (Abhay Patil) ರೋಡ್ ಶೋ ಮಾರ್ಗದ ರಸ್ತೆಯ ಎರಡು ಬದಿಗಳಲ್ಲಿ ಪಕ್ಷದ ಧ್ವಜ ಕಾರ್ಯಕರ್ತರು ಕಟ್ಟುತ್ತಿದ್ದಾರೆ. 8 ಕಿಲೋಮೀಟರ್ ರೋಡ್ ಶೋ ಉದ್ದಕ್ಕೂ ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಅವಳವಡಿಕೆ ಮಾಡಲಾಗುತ್ತಿದೆ.
ಡಿಸಿ ನಿತೇಶ್ ಪಾಟೀಲ್ ಅವರು ತಡರಾತ್ರಿ ಸಿದ್ಧತಾ ಕಾರ್ಯ ಪರಿಶೀಲನೆ ನಡೆಸಿದರು. ರೋಡ್ ಶೋ ಮಾರ್ಗದಲ್ಲಿ 90 ಲೈವ್ ಶೋಗೆ ನಿರ್ಧಾರ ಮಾಡಲಾಗಿದ್ದು, ಅದರಲ್ಲಿ ಪ್ರಮುಖವಾಗಿ ಛತ್ರಪತಿ ಶಿವಾಜಿ ಮಹಾರಾಜರು, ವೀರ ಮದಕರಿನಾಯಕ, ವಿಶ್ವಗುರು ಬಸವಣ್ಣ, ವೀರರಾಣಿ ಕಿತ್ತೂರು ಚೆನ್ನಮ್ಮ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಸೇರಿ ಹಲವು ಮಹನೀಯರ ಇತಿಹಾಸ ಸಾರುವ ಲೈವ್ ಶೋಗೆ ನಿರ್ಧಾರ ಮಾಡಿಕೊಳ್ಳಲಾಗಿದೆ.