ಮೊನ್ನೆಯಷ್ಟೇ ಕ್ರಿಕೆಟ್ ದಂಥಕತೆ ಸಚಿನ್ ಅವರನ್ನು ತಮಿಳಿನ ಖ್ಯಾತ ನಟ ಸೂರ್ಯ ಭೇಟಿ ಮಾಡಿ, ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಸುದೀಪ್ ಅವರನ್ನು ಕ್ರಿಕೆಟಿಗರು ಪದೇ ಪದೇ ಭೇಟಿ ಮಾಡುತ್ತಲೇ ಇರುತ್ತಾರೆ. ಆ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಅಂಥದ್ದೊಂದು ಫೋಟೋ ಯಶ್ ಅವರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಕ್ರಿಕೆಟ್ ಲೋಕದ ಡಿಕೆ ಸಾಹೇಬ್ ಎಂದೇ ಖ್ಯಾತರಾಗಿರುವ ದಿನೇಶ್ ಕಾರ್ತಿಕ್ (Dinesh Karthik) ಇತ್ತೀಚೆಗಷ್ಟೇ ಯಶ್ (Yash) ಅವರನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ತಗೆಸಿಕೊಂಡ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ಜೊತೆ ‘ಸಲಾಂ ರಾಕಿ ಭಾಯ್’ ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ಈ ಸಮಯದಲ್ಲಿ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡರು ಎಂದು ಹೇಳಲಾಗುತ್ತಿದೆ.
ತಮ್ಮ ಮುಂದಿನ ಸಿನಿಮಾ ಬಗ್ಗೆ ಯಶ್ ಜಾಣೆ ನಡೆ ಪ್ರದರ್ಶಿಸುತ್ತಿದ್ದಾರೆ. ಈವರೆಗೂ ಯಾವುದೇ ಮಾಹಿತಿಯನ್ನು ಅವರು ಹಂಚಿಕೊಳ್ಳದೇ ಇದ್ದರೂ, ಅವರ ಸಿನಿಮಾ ಬಗ್ಗೆ ವರ್ಷದಿಂದಲೂ ಬೇರೆ ಬೇರೆ ರೀತಿಯಲ್ಲಿ ಚರ್ಚೆ ಆಗುತ್ತಲೇ ಇದೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಈ ಬಾರಿ ಅವರ ಸಿನಿಮಾ ಹಾಲಿವುಡ್ ರೇಂಜ್ ನಲ್ಲಿ ಇರಲಿದೆಯಂತೆ. ಹಾಗಾಗಿಯೇ ಸಂಪೂರ್ಣ ಸಿದ್ಧತೆಯೊಂದಿಗೆ ಅವರು ಹೊಸ ಸಿನಿಮಾಗೆ ಕಾಲಿಡಲಿದ್ದಾರಂತೆ.