ಐಷಾರಾಮಿ ವಿಲ್ಲಾ ಖರೀದಿಸಿದ ಕೊಹ್ಲಿ, ಅನುಷ್ಕಾ – ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

Public TV
2 Min Read
Virat Kohli 5

ಮುಂಬೈ: ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಪತ್ನಿ ಅನುಷ್ಕಾ ಶರ್ಮಾ (Anushka Sharma) ಐಷಾರಾಮಿ ವಿಲ್ಲಾವೊಂದನ್ನ (Luxury Villa) ಖರೀದಿಸಿದ್ದಾರೆ. ಈ ವಿಲ್ಲಾದ ಚಿತ್ತಾಕರ್ಷಕ ವಿಹಂಗಮ ನೋಟವನ್ನು ವೀಡಿಯೋ ಸಮೇತ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಕಷ್ಟು ಸದ್ದು ಮಾಡ್ತಿದೆ.

 

View this post on Instagram

 

A post shared by Virat Kohli (@virat.kohli)

ದೇಶದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಕೊಹ್ಲಿ ಈಗಾಗಲೇ ಮುಂಬೈನಲ್ಲಿ (Mumbai) ಐಷಾರಾಮಿ ಮನೆ ಹೊಂದಿದ್ದಾರೆ. ಅಲ್ಲದೇ ಹಲವು ಉದ್ಯಮಗಳಲ್ಲಿಯೂ ಹಣ ಹೂಡಿಕೆ ಮಾಡಿದ್ದಾರೆ. ಆದರೂ ಇದೀಗ ಕೊಹ್ಲಿ, ಅನುಷ್ಕಾ ಜೋಡಿ ಮುಂಬೈನಿಂದ ದೂರದಲ್ಲಿ ಹೊಸ ವಿಲ್ಲಾವೊಂದನ್ನ ಖರೀದಿ ಮಾಡಿದೆ. ಇದನ್ನೂ ಓದಿ: ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

ವಿರಾಟ್ ಕೊಹ್ಲಿ ತಮ್ಮ ಬಿಡುವಿನ ವೇಳೆ ಕಳೆಯಲು ಮುಂಬೈನಿಂದ ದೂರವಿರುವ ಆಲಿಭಾಗ್‌ನಲ್ಲಿ ಹೊಸ ವಿಲ್ಲಾ ಖರೀದಿ ಮಾಡಿದ್ದಾರೆ. ಈ ವಿಲ್ಲಾದ ಒಳಾಂಗಣವನ್ನು ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಮಾಜಿ ಪತ್ನಿ ಸುಸಾನ್ನೆ ಖಾನ್ ವಿನ್ಯಾಸ ಮಾಡಿದ್ದಾರೆ ಅನ್ನೋದೆ ಇದ್ರಲ್ಲಿ ವಿಶೇಷವಾಗಿದೆ.

 

View this post on Instagram

 

A post shared by Virat Kohli (@virat.kohli)

ಸದ್ಯ ವಿರಾಟ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗಾವಾಸ್ಕರ್ ಟ್ರೋಫಿ ಟೆಸ್ಸ್ ಸರಣಿಯಲ್ಲಿದ್ದಾರೆ. ಹಾಗಾಗಿ ಕೊಹ್ಲಿ ಅನುಪಸ್ಥಿತಿಯಲ್ಲಿ ಸಹೋದರ ವಿಕಾಸ್ ಕೊಹ್ಲಿ ಬಂಗಲೆ ಖರೀದಿ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ವಿಲ್ಲಾದ ವೀಡಿಯೋವನ್ನು ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವಿಲ್ಲಾ ನೋಡಿದ ಅಭಿಮಾನಿಗಳೂ ಹರ್ಷಗೊಂಡಿದ್ದಾರೆ.

ವಿಶೇಷತೆ ಏನೇನಿದೆ?
ಆಲಿಬಾಗ್‌ನಲ್ಲಿರುವ ಆವಾಸ್ ಗ್ರಾಮದಲ್ಲಿರುವ 6 ಕೋಟಿ ರೂ. ಮೌಲ್ಯದ ವಿಲ್ಲಾ 2,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಆಸ್ತಿಯ ಮುದ್ರಾಂಕ ಶುಲ್ಕವೇ 36 ಲಕ್ಷ ರೂ. ಇದ್ದು, 400 ಚದರಡಿಯ ಸುಸಜ್ಜಿತ ಈಜುಕೊಳ ಸಹ ಹೊಂದಿದೆ. ಇದನ್ನೂ ಓದಿ: TNPL ನಲ್ಲೂ ದುಡ್ಡೋ ದುಡ್ಡು – ದುಬಾರಿ ಬೆಲೆಗೆ ಹರಾಜಾದ IPL ಚಾಂಪಿಯನ್ಸ್ ತಂಡದ ಆಟಗಾರ

Virat Kohli 2 1

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 19.24 ಕೋಟಿ ರೂ.ಗೆ ಫಾರ್ಮ್‌ಹೌಸ್‌ ಸಹ ಖರೀದಿಸಿದ್ದರು. ಅದಕ್ಕಾಗಿ 1.15 ಕೋಟಿ ರೂಪಾಯಿ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದರು.

ಅವಾಸ್ ಲಿವಿಂಗ್ ಅಲಿಬಾಗ್ ಎಲ್‌ಎಲ್‌ಪಿಯ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲ ಮಹೇಶ್ ಮ್ಹಾತ್ರೆ ಪ್ರಕಾರ, ಆವಾಸ್ ನೈಸರ್ಗಿಕ ಸೌಂದರ್ಯದಿಂದ ಕೂಡಿದೆ. ಸ್ಪೀಡ್ ಬೋಟ್‌ನಲ್ಲಿ ಮುಂಬೈನಿಂದ ಅಲಿಬಾಗ್‌ಗೆ 15 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ. ಇಲ್ಲಿ ಬೆಲೆ ದುಬಾರಿಯಾಗಿರುವುದರಿಂದ ಪ್ರತಿ ಚದರಡಿಗೆ 3 ಸಾವಿರದಿಂದ 3,500 ರೂ.ಗಳಷ್ಟಿದೆ. ಅನೇಕ ಶ್ರೀಮಂತರು ಇಲ್ಲಿ ಆಸ್ತಿ ಖರೀದಿ ಮಾಡಿದ್ದು, ವಾರಾಂತ್ಯಕ್ಕೆ ವಿಶ್ರಾಂತಿಗಾಗಿ ಬರುತ್ತಾರೆ ಎಂದು ತಿಳಿಸಿದ್ದಾರೆ.

Virat Kohli 3 1

ವಿರಾಟ್ ಕೊಹ್ಲಿ ಮಾತ್ರವಲ್ಲದೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಅಲಿಬಾಗ್‌ನಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ರೋಹಿತ್ ಶರ್ಮಾ 2021 ರಲ್ಲಿ ಮಹತ್ರೋಲಿ ಗ್ರಾಮದಲ್ಲಿ 4 ಎಕರೆ ಭೂಮಿ ಖರೀದಿಸಿದ್ದರು.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *