ಕಲಬುರಗಿ: ಚಾಲಾಕಿ ಕಳ್ಳರು ಬಸ್ ನಿಲ್ದಾಣದಲ್ಲಿ (Bus Stand) ನಿಲ್ಲಿಸಿದ್ದ ಬಸ್ (Bus) ಅನ್ನೇ ರಾತ್ರೋರಾತ್ರಿ ಎಗರಿಸಿರುವ (Theft) ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.
ಸೋಮವಾರ ತಡರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಎನ್‌ಇಕೆಆರ್‌ಟಿಸಿ ಬಸ್ (NEKRTC Bus) ಅನ್ನು ನಿಲ್ಲಿಸಲಾಗಿತ್ತು. ಖದೀಮರು ಬಸ್ ಅನ್ನು ನಸುಕಿನ ಜಾವ 3:30ರ ವೇಳೆಗೆ ಕಳ್ಳತನ ಮಾಡಿದ್ದಾರೆ. ಬಳಿಕ ಮಿರಿಯಾಣ ಮಾರ್ಗವಾಗಿ ತಾಂಡುರ ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಮರಾಠಾ ಮತಗಳ ಓಲೈಕೆಯಲ್ಲಿ ಕನ್ನಡ ಮಹನೀಯರ ಮರೆತರಾ ಬೆಳಗಾವಿ ರಾಜಕಾರಣಿಗಳು?
ಕಳ್ಳತನವಾಗಿರುವ ಎನ್‌ಇಕೆಆರ್‌ಟಿಸಿ ಬಸ್ ನಂಬರ್ ಕೆಎ 38 ಎಫ್ 971 ಹೊಂದಿದ್ದು, ಇದು ಬೀದರ್ ಬಸ್ ಡಿಪೋ ನಂಬರ್ 2ಕ್ಕೆ ಸೇರಿದ್ದಾಗಿದೆ. ಕಳ್ಳತನವಾದ ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ 2 ಪೊಲೀಸರ ತಂಡ ಬಸ್ ಹುಡುಕಾಟಕ್ಕಾಗಿ ತೆಲಂಗಾಣಕ್ಕೆ ತೆರಳಿದೆ. ಇದನ್ನೂ ಓದಿ: ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ವಿಧಿವಶ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k