ಹ್ಯಾಟ್ರಿಕ್ ಹೀರೋ ಶಿವಣ್ಣನ ಸಿನಿ ಜರ್ನಿಗೆ 37 ವರ್ಷಗಳ ಸಂಭ್ರಮ

Public TV
1 Min Read
SHIVARAJKUMAR

ರುನಾಡು ಕಂಡ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Actor Shivarajkumar) ಅವರ ಸಿನಿ ಪಯಣಕ್ಕೆ 37 ವರ್ಷಗಳಾಗಿದೆ. ಇಂದಿಗೂ ಬಹುಬೇಡಿಕೆ ನಟನಾಗಿ ತಮ್ಮ ಛಾರ್ಮ್ ಉಳಿಸಿಕೊಂಡಿದ್ದಾರೆ. 37 ವರ್ಷವನ್ನ ಚಿತ್ರರಂಗದಲ್ಲಿ ಶಿವಣ್ಣ ಪೂರೈಸುವುದಕ್ಕೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಟರ್ಕಿ-ಸಿರಿಯಾ ಭೀಕರ ಭೂಕಂಪ: ನೆರವಿಗೆ ನಿಂತ ಸನ್ನಿ ಲಿಯೋನ್

shivanna 1 1

1986ರಲ್ಲಿ `ಆನಂದ್ʼ (Anand) ಚಿತ್ರದ ಮೂಲಕ ಶಿವಣ್ಣ ಸಿನಿರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟರು. ಬಳಿಕ `ರಥಸಪ್ತಮಿ’ (Rathasaptami) ಮತ್ತು `ಮನಮೆಚ್ಚಿದ ಹುಡುಗಿ’ (Manamecchidahudugi) ಮೂರು ಸಿನಿಮಾಗಳನ್ನು ಬ್ಯಾಕ್ ಟು ಬ್ಯಾಕ್ ಹಿಟ್ ಕೊಡುವ ಮೂಲಕ ಹ್ಯಾಟ್ರಿಕ್ ಹೀರೋ ಆಗಿ ಚಿತ್ರರಂಗದಲ್ಲಿ ಗಟ್ಟಿನೆಲೆ ಕಂಡರು.

SHIVANNA 1 1

125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ 60ರ ವಯಸ್ಸಿನ ಎಂಗ್ ಆ್ಯಂಡ್ ಎನರ್ಜಿಟಿಕ್ ಹೀರೋ ಶಿವಣ್ಣಗೆ ಇಂದು 37 ವರ್ಷಗಳಾಗಿದೆ. `ವೇದ’ (Vedha Film) ಚಿತ್ರದ ಸೂಪರ್ ಸಕ್ಸಸ್ (Success) ನಂತರ ಈ ವರ್ಷ ಅರ್ಧ ಡಜನ್ ಚಿತ್ರಗಳು ಶಿವಣ್ಣ ಕೈಯಲ್ಲಿದೆ. ನೆಚ್ಚಿನ ನಟನ ಜರ್ನಿಗೆ ಶುಭ ಹಾರೈಸುತ್ತ ಅವರ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

FotoJet 2 41

ಶಿವಣ್ಣ ಕೈಯಲ್ಲಿ ಶ್ರೀನಿ ನಿರ್ದೇಶನದ `ಘೋಸ್ಟ್’, `ಭೈರತಿ ರಣಗಲ್’, ರಜನಿಕಾಂತ್ ಜೊತೆ `ಜೈಲರ್’, ಧನುಷ್ ಜೊತೆ `ಕ್ಯಾಪ್ಟನ್ ಮಿಲ್ಲರ್’ ಚಿತ್ರಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *