ಬೆಂಗಳೂರು: ರಾಜ್ಯ ಸರ್ಕಾರದ ಅಬಕಾರಿ ಆದಾಯ (Excise Revenue) ಭರ್ಜರಿ ಏರಿಕೆ ಕಂಡಿದೆ.
2022-23ರಲ್ಲಿ ಅಬಕಾರಿ ಇಲಾಖೆಗೆ 29 ಸಾವಿರ ಕೋಟಿ ರೂ. ಆದಾಯ ಸಂಗ್ರಹದ ಗುರಿ ನೀಡಲಾಗಿತ್ತು. ಆದರೆ ವರ್ಷಾಂತ್ಯಕ್ಕೆ ಆದಾಯ 32 ಸಾವಿರ ಕೋಟಿ ರೂ. ಗೆ ಏರಿಕೆಯಾಗಲಿದೆ. ಇದು ಬಜೆಟ್ (Karnataka Budget) ಅಂದಾಜಿಗಿಂತ ಶೇ.10 ರಷ್ಟು ಹೆಚ್ಚು ಎನ್ನುವುದು ವಿಶೇಷ.
2023-24 ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗೆ 35 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಸಾರಾಯಿ/ ಸೇಂದಿಗೆ ಸಂಬಂಧಿಸಿದಂತೆ ಅಬಕಾರಿ ಬಾಕಿಗಳನ್ನು ವಸೂಲು ಮಾಡುವುದಕ್ಕೆ ನೂತನ ಕರಸಮಾಧಾನ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಈ ಯೋಜನೆ ಅಡಿ ಸಾರಾಯಿ/ ಸೇಂದಿಗೆ ಬಾಡಿಗೆ ಸಂಬಂಧದಲ್ಲಿ ಮೂಲ ಧನವನ್ನ 2023ರ ಜೂನ್ 30 ರಂದು ಅಥವಾ ಅದಕ್ಕೂ ಮುಂಚಿತವಾಗಿ ಪಾವತಿಸುವವರಿಗೆ ಬಡ್ಡಿ ಮತ್ತು ದಂಡಬಟ್ಟಿ ಪಾವತಿಯಲ್ಲಿ ಪರಿಹಾರ ನೀಡಲಾಗುತ್ತದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k