ರಾಯ್ಪುರ: ಛತ್ತೀಸ್‌ಗಢದ (Chhattisgarh) ಜಂಜ್‌ಗಿರ್ ಚಂಪಾದಲ್ಲಿ ಮನೆಯೊಂದರ ಬೆಡ್‌ರೂಮ್‌ನಲ್ಲಿ ಯೂಟ್ಯೂಬರ್ ಮೃತದೇಹ ಪತ್ತೆಯಾಗಿದೆ. ಮೃತರನ್ನು ಇಶಿಕಾ ಶರ್ಮಾ ಎಂದು ಗುರುತಿಸಲಾಗಿದೆ. ಆಕೆಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.
ಶರ್ಮಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೈಹಿಕ ಹಲ್ಲೆ ಮತ್ತು ಉಸಿರುಗಟ್ಟುವಿಕೆಯಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ವರದಿಗಳು ಬಹಿರಂಗಪಡಿಸಿವೆ. ಇಶಿಕಾ ಮತ್ತು ಆಕೆಯ ಸಹೋದರ ಹಿಂದಿನ ರಾತ್ರಿ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಮುಸ್ಲಿಮರಿಗೆ ಶೇ.30 ಮೀಸಲಾತಿ ಕೊಡಿ: ಜೆಡಿಯು ನಾಯಕ ಒತ್ತಾಯ
ಪ್ರಮುಖ ಆರೋಪಿಯಾದ ಸಹೋದರನೊಂದಿಗೆ ಹೆಚ್ಚಿನ ಜನರು ಇದ್ದರು ಎಂದು ಶಂಕಿಸಲಾಗಿದೆ. ಆಕೆಯ ಸಾವಿಗೆ ನಿಖರ ಕಾರಣವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಹೋಟೆಲ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಘಟನೆ ನಡೆದ ದಿನ ಇಶಿಕಾ ಪೋಷಕರು ಊರಿನಿಂದ ಹೊರಗಿದ್ದ ಕೊರ್ಬಾದಲ್ಲಿ ಇದ್ದರು. ಇಶಿಕಾ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಕೊನೆಯ ಸಂಭಾಷಣೆ ನಡೆಸಿದ್ದಳು. ಸೋಮವಾರ ಬೆಳಗ್ಗೆ ಆಕೆಯ ತಂದೆ ಪತ್ರಕರ್ತ ಗೋಪಾಲ್ ಶರ್ಮಾ ಇಶಿಕಾಗೆ ಕರೆ ಮಾಡಿದಾಗ ಫೋನ್ ತೆಗೆಯಲಿಲ್ಲ. ನಂತರ ಮಗನಿಗೆ ಕರೆ ಮಾಡಿದ್ದಾರೆ. ಆತನೂ ಉತ್ತರಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗೆಳತಿ ಹತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ – ಕೆಲವೇ ಗಂಟೆಯಲ್ಲೇ ಬೇರೊಬ್ಬಳನ್ನು ಮದುವೆಯಾದ
ಘಟನೆಯಾದ ಮಾರನೇ ದಿನ ಬೆಳಗ್ಗೆ ವಾಚ್‌ಮನ್ ಮನೆಗೆ ಬಂದಾಗ ಮನೆಯ ಮುಂಭಾಗದ ಗೇಟ್ ತೆರೆದಿರುವುದು ಕಂಡು ಬಂದಿದೆ. ಗೋಪಾಲ್ ಶರ್ಮಾ ಅವರ ಮಗ ತನ್ನ ಕೋಣೆಯೊಳಗೆ ಮಲಗಿದ್ದ. ಇಶಿಕಾ ಅವರ ಮೃತದೇಹ ಆಕೆಯ ಮಲಗುವ ಕೋಣೆಯಲ್ಲಿ ಬಿದ್ದಿತ್ತು. ವಾಚ್‌ಮನ್ ಇದನ್ನು ಗಮನಿಸಿ, ಇಶಿಕಾಳ ಸಹೋದರನನ್ನು ಎಬ್ಬಿಸಿದ್ದಾನೆ. ನಂತರ ಮನೆಯವರಿಗೆ ವಿಷಯ ತಿಳಿಸಿದ್ದಾರೆ.
ಇಶಿಕಾ ಶರ್ಮಾ ಮತ್ತು ಆಕೆಯ ಸಹೋದರನೊಂದಿಗೆ ಮತ್ತೊಬ್ಬ ಯುವಕ ವಾಸಿಸುತ್ತಿದ್ದ. ಆದರೆ ಘಟನೆ ನಂತರ ಆತ ಪರಾರಿಯಾಗಿದ್ದಾನೆ. ಇಶಿಕಾ ಮತ್ತು ಅವಳ ಸಹೋದರನ ಮೊಬೈಲ್ ಮತ್ತು ಸ್ಕೂಟರ್ ಕಾಣೆಯಾಗಿದೆ. ಪರಾರಿಯಾಗಿರುವ ಯುವಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k