ಚಿಕ್ಕಮಗಳೂರು: ಸರ್ಕಾರಿ ಅಂಬುಲೆನ್ಸ್ (Ambulance) ನಡುರಸ್ತೆಯಲ್ಲಿ ಕೆಟ್ಟು ನಿಂತ ಪರಿಣಾಮ ತುಂಬು ಗರ್ಭಿಣಿಯೊಬ್ಬಳು (Pregnant) ಸಾವು-ಬದುಕಿನ ಮಧ್ಯೆ ಹೋರಾಡಿದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಅಂಬುಲೆನ್ಸ್ ನಡುರಸ್ತೆಯಲ್ಲಿ ಕೆಟ್ಟು ನಿಂತಿದ್ದಲ್ಲದೆ, ರಸ್ತೆ ಮಧ್ಯೆಯ ಗುಂಡಿಗೆ ಇಳಿದು ಟೈರ್ ಕೂಡಾ ಪಂಚರ್ ಆಗಿತ್ತು. ತುಂಬು ಗರ್ಭಿಣಿ ಶರಣ್ಯ ಅಂಬುಲೆನ್ಸ್ ಕೆಟ್ಟು ನಿಂತ ಪರಿಣಾಮ ರಸ್ತೆ ಮಧ್ಯೆ ನರಳಾಡಿದ್ದಾರೆ. ಹೆರಿಗೆಗೆಂದು ಕೊಪ್ಪ ಆಸ್ಪತ್ರೆಗೆ ಕರೆದೊಯ್ಯುವಾಗ ಕಳಸ-ಬಾಳೆಹೊನ್ನೂರು ಮಾರ್ಗದ ಹಳುವಳ್ಳಿ ಎಂಬಲ್ಲಿ ಗುಂಡಿಬಿದ್ದ ರಸ್ತೆಯಲ್ಲಿ ಅಂಬುಲೆನ್ಸ್ ಕೆಟ್ಟು ನಿಂತಿದೆ. ಇದರಿಂದ ಗರ್ಭಿಣಿ ಸುಮಾರು 2 ಗಂಟೆಗಳ ಕಾಲ ನರಳಾಡಿದ್ದಾರೆ. ಇದನ್ನೂ ಓದಿ: 24 ಗಂಟೆಯಲ್ಲಿ 2ನೇ ಪ್ರಕರಣ- ಹುಲಿ ದಾಳಿಗೆ ಮತ್ತೊಬ್ಬ ಕಾರ್ಮಿಕ ಸಾವು
- Advertisement -
- Advertisement -
ದುರಸ್ತಿಯಾಗಿ ಹೊರಟ ಮೇಲೂ ಅಂಬುಲೆನ್ಸ್ ಮತ್ತೆ ಕೆಟ್ಟು ನಿಂತಿದ್ದು ಕೊನೆಗೆ ಬಾಳೆಹೊನ್ನೂರಿನಿಂದ ಬೇರೆ ಅಂಬುಲೆನ್ಸ್ ಕರೆಸಿ ಗರ್ಭಿಣಿಯನ್ನು ಕೊಪ್ಪಕ್ಕೆ ಕಳುಹಿಸಲಾಗಿದೆ. ಸದ್ಯ ಮಹಿಳೆ ಕೊಪ್ಪ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ-ಮಗು ಆರೋಗ್ಯವಾಗಿದ್ದಾರೆ.
- Advertisement -
ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಅಂಬುಲೆನ್ಸ್ ಹೊಸ ವಾಹನ ಎಂದು ಹೇಳಲಾಗುತ್ತಿದೆ. ಆದರೆ ರಸ್ತೆ ತೀರಾ ಹದಗೆಟ್ಟಿರುವುದರಿಂದ ವಾಹನ ಕೆಟ್ಟುನಿಂತಿದೆ. ಜೀವ ಉಳಿಸುವ ಅಂಬುಲೆನ್ಸ್‌ಗಳೇ ಹೀಗೆ ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿರುವುದರಿಂದ ಜನಸಾಮಾನ್ಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿರುವ SLV ಭವನ ನೆಲಸಮಗೈದ ಪುಡಿರೌಡಿಗಳು!
- Advertisement -
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k