ವಿಧಾನಮಂಡಲ ಜಂಟಿ ಅಧಿವೇಶನ ಇಂದಿನಿಂದ ಆರಂಭ – ಸರ್ಕಾರದ ಸಾಧನೆ ಬಣ್ಣಿಸಿದ ರಾಜ್ಯಪಾಲ ಗೆಹ್ಲೋಟ್

Public TV
2 Min Read
Thawarchand Gehlot

ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನ (Karnataka Assembly Session) ಇಂದಿನಿಂದ (ಶುಕ್ರವಾರ) ಆರಂಭಗೊAಡಿದ್ದು, ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawarchand Gehlot) ಭಾಷಣ ಮಾಡಿದರು. ಈ ವೇಳೆ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರು.

ನನ್ನ ಸರ್ಕಾರವು ರೈತರು, ಕಾರ್ಮಿಕರು, ಬಡವರು, ದುರ್ಬಲರು, ಅವಕಾಶ ವಂಚಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ. ಅಭಿವೃದ್ಧಿ ಪಥದಲ್ಲಿ ರಾಜ್ಯ ಮುಂಚೂಣಿಯಾಗಿ ದಾಪುಗಾಲಿಡುತ್ತಿದೆ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮಾದರಿಯನ್ನು ಸರ್ಕಾರ ಅನುಸರಿಸುತ್ತಿದೆ. ಮೋದಿಯವರು ಮುಂದಿನ 25 ವರ್ಷಕ್ಕೆ ಅಮೃತ ಕಾಲದಲ್ಲಿ ಹಾಕಿಕೊಟ್ಟ ಪ್ರಗತಿ ಪಥವನ್ನು ಯಶಸ್ವಿಯಾಗಿ ರಾಜ್ಯವು ಕ್ರಮಿಸುವ ವಿಶ್ವಾಸ ಇದೆ. ರೈತ ಮತ್ತು ಅವನ ಕುಟುಂಬ ಸದೃಢಗೊಳಿಸಲು ಸರ್ಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೊಗಳಿದರು. ಇದನ್ನೂ ಓದಿ: Aero India 2023: ತುರ್ತು ಆರೋಗ್ಯ ಸೇವೆಗಾಗಿ 30 ವೈದ್ಯಕೀಯ ತಂಡಗಳ ನಿಯೋಜನೆ

karnataka assembly session

ರೈತ ವಿದ್ಯಾನಿಧಿ ಯೋಜನೆ ರೈತರು, ನೇಕಾರರು, ಕೃಷಿ ಕಾರ್ಮಿಕರು, ಮೀನುಗಾರರಿಗೆ ವಿಸ್ತರಿಸಿದೆ. 10.79 ಲಕ್ಷ ವಿದ್ಯಾರ್ಥಿಗಳಿಗೆ 484 ಕೋಟಿ ರೂ. ವಿದ್ಯಾರ್ಥಿ ವೇತನ ಕೊಡಲಾಗಿದೆ. ರೈತ ಶಕ್ತಿ ಯೋಜನೆಯಡಿ ಪ್ರತಿ ಎಕರೆಗೆ 250 ರೂ. ಡೀಸೆಲ್ ಸಹಾಯಧನ, 750 ಅಮೃತ ರೈತ, ಮೀನುಗಾರರ, ನೇಕಾರರ ಉತ್ಪಾದಕ ಸಂಸ್ಥೆಗಳ ರಚನೆಗೆ ನೋಂದಣಿ, ಗೋಸಂಪತ್ತಿನ ರಕ್ಷಣೆಗೆ ಗೋಹತ್ಯಾ ತಡೆ ಕಾಯ್ದೆ ತರಲಾಗಿದೆ. 100 ಸರ್ಕಾರಿ ಗೋ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಬಣ್ಣಿಸಿದರು.

ದೇಶದಲ್ಲೇ ಪ್ರಥಮ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆ ತರಲಾಗಿದೆ. ಜಾನುವಾರುಗಳ ಚರ್ಮಗಂಟು ರೋಗ ನಿಯಂತ್ರಣಕ್ಕೆ 1 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ. ಮತ್ಸ್ಯಸಂಪದ ಯೋಜನೆ ಮೂಲಕ ಮೀನುಗಾರರಿಗೆ 2758 ಕೋಟಿ ಆರ್ಥಿಕ ನೆರವು ನೀಡಲಾಗಿದೆ. ಶೂನ್ಯ ಬಡ್ಡಿ ದರದಲ್ಲಿ 15,066 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ವಿತರಣೆ, 29,638 ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿದರದಲ್ಲಿ 1,215 ಕೋಟಿ ರೂ. ಸಾಲ ಕೊಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಂಗಲ್ ಹನುಮಂತಯ್ಯ ಜೀವನ ಚರಿತ್ರೆ ಗ್ರಂಥ ಈ ವರ್ಷ ಬಿಡುಗಡೆ: ಬೊಮ್ಮಾಯಿ

session

ರಾಜ್ಯಪಾಲರು ಭಾಷಣದಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳದ ಬಗ್ಗೆ ಮಾತನಾಡಿದರು. ಆದರೆ ಹೊಸ ಪ್ರವರ್ಗಗಳ ಸೃಷ್ಟಿ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಪಂಚಮಸಾಲಿ ಸಮುದಾಯ ಮತ್ತು ಒಕ್ಕಲಿಗ ಸಮುದಾಯಗಳ ಬೇಡಿಕೆ ಸಂಬಂಧ 2ಸಿ, 2ಡಿ ಪ್ರವರ್ಗಗಳನ್ನು ಸರ್ಕಾರ ಸೃಷ್ಟಿಸಿತ್ತು. ಕಳೆದ ವರ್ಷ ಡಿಸೆಂಬರ್ 29 ರಂದು ನಡೆದ ಸಚಿವ ಸಂಪುಟದಲ್ಲಿ ಈ ಸಂಬಂಧ ತೀರ್ಮಾನ ಕೈಗೊಂಡಿತ್ತು. ಆದರೆ ಪಂಚಮಸಾಲಿ ಸಮುದಾಯ ಹೊಸ ಪ್ರವರ್ಗಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆ ಬಗ್ಗೆ ರಾಜ್ಯಪಾಲರು ಪ್ರಸ್ತಾಪಿಸಿಲ್ಲ.

ಸರ್ಕಾರದ ಸಾಧನೆ, ಯೋಜನೆಗಳಿಗೆ ಸಂಬಂಧಿಸಿದಂತೆ 34 ಪುಟಗಳ ಭಾಷಣ ಪುಸ್ತಕವನ್ನು ರಾಜ್ಯಪಾಲರು ಓದಿದರು. ಸುಮಾರು ಒಂದು ಗಂಟೆ ಕಾಲ ಭಾಷಣ ಮಾಡಿದರು. ರಾಜ್ಯಪಾಲರ ಭಾಷಣ ದಿನವೂ ಅನೇಕ ಶಾಸಕರು ಗೈರಾಗಿದ್ದರು. ಅಧಿವೇಶನದ ಮೊದಲ ದಿನವೇ ವಿಧಾನಸಭೆಯಲ್ಲಿ ಖಾಲಿ ಖಾಲಿ ಕುರ್ಚಿಗಳು ಕಂಡುಬಂದವು. ಇದನ್ನೂ ಓದಿ: ಪಕ್ಷ ಸೂಚಿಸಿದ್ರೆ ಹಾಸನದಿಂದಲೂ ಸ್ಪರ್ಧೆಗೆ ಸಿದ್ಧ: ಹೆಚ್‌.ಡಿ.ರೇವಣ್ಣ

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕರು ಅಧಿವೇಶನಕ್ಕೆ ಗೈರಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರೂ ಸಹ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *