ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ʻರಾಯಲ್ʼ ಆಗಿ ಮಿಂಚಲು ವಿರಾಟ್ ರೆಡಿ

Public TV
2 Min Read
viraat 3

`ಕಿಸ್’ ಸಿನಿಮಾ (Kiss Film) ಮೂಲಕ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗಮನ ಸೆಳೆದ ವಿರಾಟ್ (Actor Viraat) ಇದೀಗ ಎರಡನೇ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಖ್ಯಾತ ನಿರ್ದೇಶಕ ದಿನಕರ್ ತೂಗುದೀಪ್ (Dinakar Thoogudeepa) ನಿರ್ದೇಶನದಲ್ಲಿ ವಿರಾಟ್ ಹೊಸ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದ ಟೈಟಲ್ ಕೂಡ ರಿವೀಲ್ ಆಗಿದೆ.

viraat

ಎ.ಪಿ ಅರ್ಜುನ್‌ ನಿರ್ದೇಶನದ `ಕಿಸ್’ ಚಿತ್ರದಲ್ಲಿ ವಿರಾಟ್- ಶ್ರೀಲೀಲಾ (Sreeleela) ಜೋಡಿಯಾಗಿ ಸಿನಿಪ್ರೇಕ್ಷಕರ ಮನಗೆದ್ದಿದ್ದರು. ಈಗ `ಸಲಗ’ ಬ್ಯೂಟಿ ಸಂಜನಾ ಆನಂದ್ (Sanjana Anand) ಜೊತೆ ವಿರಾಟ್ `ರಾಯಲ್’ (Royal) ಆಗಿ ಮಿಂಚಲು ಬರುತ್ತಿದ್ದಾರೆ. ಚಿತ್ರದ ಟೈಟಲ್ ಮತ್ತು ಪೋಸ್ಟರ್ ಲುಕ್ ಮೂಲಕ ನಟ ಹೈಪ್ ಕ್ರಿಯೆಟ್ ಮಾಡಿದ್ದಾರೆ. ಇದನ್ನೂ ಓದಿ: ಸಿದ್-ಕಿಯಾರಾ ಮದುವೆ ಜೀವನದ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ

viraat 1

ದಿನಕರ್ ತೂಗುದೀಪ್ ನಿರ್ದೇಶನದ, ಜಯಣ್ಣ ಫಿಲ್ಮ್ಸ್‌ ನಿರ್ಮಾಣದ ಹೊಸ ಸಿನಿಮಾಗೆ `ರಾಯಲ್’ ಎಂದು ಹೆಸರಿಡಲಾಗಿದೆ. ಈ ಚಿತ್ರದ ಟೈಟಲ್ ಅನ್ನ ಅಶ್ವಿನಿ ಪುನೀತ್ ರಾಜ್‌ಕುಮಾರ್ (Puneeth Rajkumar) ಮತ್ತು ಹೊಂಬಾಳೆ ಸಂಸ್ಥೆಯ (Hombale Films) ರೂವಾರಿ ವಿಜಯ್ ಕಿರಗಂದೂರು ಅವರು ಟೈಟಲ್ ಪೋಸ್ಟರ್ ಲಾಂಚ್ ಮಾಡಿದ್ದಾರೆ. ಈ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

`ರಾಯಲ್’ ಆಗಿ ಜೀವನ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸು. ಅದರಂತೆಯೇ ಈ ಚಿತ್ರದ ನಾಯಕ ವಿರಾಟ್ ಕೂಡ ಅಂದುಕೊಂಡಿರುತ್ತಾರೆ. ಮುಂದೆ ಹೇಗೆಲ್ಲಾ ತಿರುವು ಬರಲಿದೆ ಎಂಬುದನ್ನ ಬೆಳ್ಳಿಪರದೆಯಲ್ಲಿ ತೋರಿಸಲು ನಿರ್ದೇಶಕರು ಹೊರಟಿದ್ದಾರೆ.

viraat 2

ಇನ್ನೂ `ರಾಯಲ್’ ಚಿತ್ರ ಪಕ್ಕಾ ಕರ್ಮರ್ಷಿಯಲ್ ಸಿನಿಮಾವಾಗಿದ್ದು, ಲವ್, ಆ್ಯಕ್ಷನ್, ಸೆಂಟಿಮೆಂಟ್, ಎಮೋಷನ್ಸ್ ಎಲ್ಲವನ್ನೂ ಒಳಗೊಂಡಿದೆ. ಮೊದಲ ಬಾರಿಗೆ ವಿರಾಟ್- ಸಂಜನಾ ಜೋಡಿ ತೆರೆಯ ಒಟ್ಟಿಗೆ ಕಾಣಿಸಿಕೊಳ್ತಿದ್ದು, ಚಿತ್ರದ 80% ರಷ್ಟು ಚಿತ್ರೀಕರಣವಾಗಿದೆ. ಈ ವರ್ಷದ ಅಂತ್ಯದಲ್ಲಿ ತೆರೆಗೆ ಅಬ್ಬರಿಸಲಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *