ಕನ್ನಡದ `ಕಾಂತಾರ’ (Kantara) ಪ್ಯಾನ್ ಇಂಡಿಯಾ ಸಿನಿಮಾವಾಗಿ ದಶದಿಕ್ಕುಗಳಲ್ಲೂ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ. 100 ದಿನಗಳನ್ನ ಪೂರೈಸಿರುವ ಬೆನ್ನಲ್ಲೇ ಇದೀಗ ಸಕ್ಸಸ್ ಪಾರ್ಟಿ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ನಟನೆ, ನಿರ್ದೇಶನದ `ಕಾಂತಾರ’ ದೈವದ ಕಥೆಗೆ ಕನ್ನಡಿಗರು ಮಾತ್ರವಲ್ಲದೇ ಪರಭಾಷಿಗರು ಫಿದಾ ಆಗಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಕೋಟಿಗಟ್ಟಲೇ ಲೂಟಿ ಮಾಡುವ ಮೂಲಕ ಹಿಂದಿ ಸಿನಿಮಾಗಳಿಗೆ ಸೆಡ್ಡು ಹೊಡೆದಿತ್ತು. ಇದನ್ನೂ ಓದಿ:ರಾಮ್ ಚರಣ್ ಅದೃಷ್ಟವನ್ನೇ ಬದಲಿಸಿದ ಆರ್.ಆರ್.ಆರ್ ಚಿತ್ರ
`ಕಾಂತಾರ’ ಸಿನಿಮಾ ಶತದಿನೋತ್ಸವ ಪೂರೈಸಿದೆ. ಈ ಸಂಭ್ರಮವನ್ನು ಇಡೀ ಚಿತ್ರತಂಡ ಒಟ್ಟಾಗಿ ಫೆ.5ರಂದು ಬೆಂಗಳೂರು ವಿಜಯನಗರದ ಬಂಟ್ಸ್ ಸಂಘದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಕ್ಸಸ್ ಸೆಲೆಬ್ರೆಟ್ ಮಾಡಲಿದ್ದಾರೆ.
ಇದೇ ಭಾನುವಾರ ರಿಷಬ್ ಶೆಟ್ಟಿ, ನಾಯಕಿ ಸಪ್ತಮಿ (Saptami Gowda) ಸೇರಿದಂತೆ ಹಲವರು ಚಿತ್ರದ ಸಕ್ಸಸ್ ಖುಷಿಯಲ್ಲಿ ಭಾಗಿಯಾಗಿದ್ದಾರೆ. ಒಂದೇ ವೇದಿಕೆಯ ಮೇಲೆ ಕಾಂತಾರ ಚಿತ್ರತಂಡದ ಸಮಾಗಮವಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸ್ಟಾರ್ ನಟ-ನಟಿಯರನ್ನ ಕೂಡ ಹೊಂಬಾಳೆ ಸಂಸ್ಥೆ (Hombale Films) ಆಹ್ವಾನ ನೀಡಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k