Union Budget 2023ː ಕರ್ನಾಟಕಕ್ಕೆ ಬಂಪರ್ ಕೊಡುಗೆ – ರೈಲ್ವೆಗೆ ದಾಖಲೆಯ 7,561 ಕೋಟಿ ಅನುದಾನ

Public TV
2 Min Read
indian railways southern railway 2

ನವದೆಹಲಿ: ಈ ಬಾರಿ ಕೇಂದ್ರ ಬಜೆಟ್‌ನಲ್ಲಿ (Union Budget 2023) ಕರ್ನಾಟಕದ ರೈಲ್ವೆ ಇಲಾಖೆಗೆ (Karnataka Railway Department) ಬಂಪರ್ ಕೊಡುಗೆ ಸಿಕ್ಕಿದೆ. ಈ ಬಾರಿ ರಾಜ್ಯದ ರೈಲ್ವೇ ಯೋಜನೆಗಳಿಗೆ (Railway Projects) ಒಟ್ಟು 7,561 ಕೋಟಿ ಅನುದಾನ ಬಜೆಟ್‌ನಲ್ಲಿ ಘೋಷಿಸಲಾಗಿದೆ.

2009 ರಿಂದ 2014ರ ಅವಧಿಯಲ್ಲಿ ನೀಡಿದಕ್ಕೆ ಹೋಲಿಸಿದರೆ, ಈ ಬಾರಿ ಶೇ.9 ರಷ್ಟು ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಅಲ್ಲದೇ ನೈರುತ್ಯ ರೈಲ್ವೆ ವಲಯಕ್ಕೆ 9,200 ಕೋಟಿ ರೂ. ನೆರವು ನೀಡಿದ್ದು, ಅದರಲ್ಲಿ ಕರ್ನಾಟಕ ರಾಜ್ಯವೊಂದಕ್ಕೆ 7,561 ಕೋಟಿ ರೂ. ದೊರೆತಿದೆ. ಇನ್ನುಳಿದ ಮೊತ್ತ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಸಿಕ್ಕಿದೆ.

Vande Bharat Express Train Ashwini Vaishnaw

ಬಹುಬೇಡಿಕೆಯ 10 ಮಾರ್ಗಗಳ ಕಾಮಗಾರಿ, ವಿದ್ಯುದೀಕರಣ, ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಜೋಡಿ ಮಾರ್ಗ (ಡಬ್ಲಿಂಗ್) ಯೋಜನೆಗಳ ನಿರ್ಮಾಣಕ್ಕೆ ಅನುದಾನ ಬಳಸಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: 

ಹೊಸ ರೈಲ್ವೆ ಮಾರ್ಗ: ನೈರುತ್ಯ ರೈಲ್ವೆ ವಲಯಕ್ಕೆ ಈಗಾಗಲೇ ಘೋಷಣೆಯಾದ ಹೊಸ ಮಾರ್ಗಗಳಿಗೆ ಒಟ್ಟಾರೆ 2,423 ಕೋಟಿ ಅನುದಾನ ಮಂಜೂರಾಗಿದ್ದು, ಅದರಲ್ಲಿ ಕರ್ನಾಟಕಕ್ಕೆ 1,408 ಕೋಟಿ ರೂ. ದೊರೆತಿದೆ. 865 ಕೋಟಿ ರೂ.ಗಳನ್ನು ಮುಂದೆ ಘೋಷಣೆಯಾಗುವ ಹೊಸ ಮಾರ್ಗಕ್ಕೆ ಮೀಸಲಿಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ (Sanjeev Kishore) ತಿಳಿಸಿದ್ದಾರೆ.

Railway

ಮುಖ್ಯವಾಗಿ ಈ ಬಾರಿ ಅಮೃತ್ ಭಾರತ ಯೋಜನೆ ಅಡಿಯಲ್ಲಿ ರಾಜ್ಯದ ಹುಬ್ಬಳ್ಳಿ, ಧಾರವಾಡ, ಚಾಮರಾಜನಗರ, ಹರಿಹರ, ಹಾಸನ, ಶಿವಮೊಗ್ಗ ಸೇರಿ 52 ರೈಲ್ವೆ ನಿಲಾಣಗಳನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ರೈಲ್ವೇ ಮಾರ್ಗಗಳ ವಿದ್ಯುದೀಕರಣ: ಈ ಬಾರಿ ಅನುದಾನದಲ್ಲಿ ಗದಗ – ಹೊಟಗಿ, ಚಿಕ್ಕಬಾಣಾವರ – ಹುಬ್ಬಳ್ಳಿ, ಬಿರೂರು – ತಾಳಗುಪ್ಪ, ಹಾಸನ – ಮಂಗಳೂರು, ಮೀರಜ್ – ಲೋಂಡ, ಹೊಸಪೇಟೆ – ಹುಬ್ಬಳ್ಳಿ – ವಾಸ್ಕೋಡಗಾಮ, ಚಿಕ್ಕಬಾಣಾವರ – ಹಾಸನ ಜಿಲ್ಲೆಗಳ ನಡುವೆ ರೈಲ್ವೆ ಮಾರ್ಗಗಳ ವಿದ್ಯುದೀಕರಣ ಯೋಜನೆ ಕೈಗೊಳ್ಳಲಾಗುತ್ತದೆ.

Ashwini Vaishnaw

ರಾಜ್ಯಕ್ಕೆ 10 ಹೊಸ ರೈಲ್ವೇ ಮಾರ್ಗ: ಈ ಬಾರಿ 10 ಹೊಸ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. 350 ಕೋಟಿ ರೂ.ಗಳಲ್ಲಿ ಗದಗ (ತಳಕಲ್) – ವಾಡಿ, 300 ಕೋಟಿ ರೂ.ಗಳಲ್ಲಿ ಗಿಣಿಗೇರಾ – ರಾಯಚೂರು, 420.85 ಕೋಟಿ ರೂ.ಗಳಲ್ಲಿ ತುಮಕೂರು – ದಾವಣಗೆರೆ (ಚಿತ್ರದುರ್ಗ ಮಾರ್ಗ), 350 ಕೋಟಿ ರೂ.ಗಳಲ್ಲಿ ತುಮಕೂರು – ರಾಯದುರ್ಗ (ಕಲ್ಯಾಣ ದುರ್ಗ ಮಾರ್ಗ), 360 ಕೋಟಿ ರೂ.ಗಳಲ್ಲಿ ಬಾಗಲಕೋಟೆ – ಕುಡಚಿ, 150 ಕೋಟಿ ರೂ.ಗಳಲ್ಲಿ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು, 10 ಕೋಟಿ ರೂ.ಗಳಲ್ಲಿ ಬೆಳಗಾವಿ – ಧಾರವಾಡ, 200 ಕೋಟಿ ರೂ.ಗಳಲ್ಲಿ ಮಾರಿಕುಪ್ಪಂ – ಕುಪ್ಪಂ, 145 ಕೋಟಿ ರೂ.ಗಳಲ್ಲಿ ಕಡೂರು – ಚಿಕ್ಕಮಗಳೂರು – ಹಾಸನ ಹಾಗೂ 20 ಕೋಟಿ ರೂ.ಗಳಲ್ಲಿ ಮಲಗೂರು – ಪಾಲಸಮುದ್ರಂ ಹೊಸ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ.

chenab railway bridge 2

7 ಮಾರ್ಗಗಳಲ್ಲಿ ಡಬ್ಲಿಂಗ್: ಇನ್ನುಳಿದಂತೆ ಗದಗ – ಹೊಟಗಿ ಬಯ್ಯಪ್ಪನಹಳ್ಳಿ – ಹೊಸೂರು, ಯಶವಂತಪುರ – ಚನ್ನಸಂದ್ರ, ಲೋಂಡಾ – ಮೀರಜ್, ಹುಬ್ಬಳ್ಳಿ – ಚಿಕ್ಕಜಾಜೂರು, ಬೆಂಗಳೂರು ದಂಡು – ವೈಟ್‌ಫೀಲ್ಡ್, ಹೊಸಪೇಟೆ – ತಿನೈಘಾಟ್ – ವಾಸ್ಕೋಡಗಾಮ ನಡುವೆ ಜೋಡಿ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ ಎಂದು ಸಂಜೀವ್ ಕಿಶೋರ್ ಮಾಹಿತಿ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *