ಯುವಕನ ಜೊತೆಗೆ ಪಾರ್ಕ್‍ನಲ್ಲಿ ಕೂತಿದ್ದಕ್ಕೆ 1 ಸಾವಿರ ವಸೂಲಿ- ಪೇದೆ ವಿರುದ್ಧ ಯುವತಿ ದೂರು

Public TV
2 Min Read
POLICE 1

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರಿಂದಲೇ ನೈತಿಕ ಪೊಲೀಸ್ ಗಿರಿ (Moral Policing) ನಡೆದಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಕೂರಲು ಅನುಮತಿ ಬೇಕಾ ಎಂಬ ಪ್ರಶ್ನೆಯೊಂದು ಎದ್ದಿದೆ.

https://twitter.com/ArshaLatif/status/1619927669898100736

ಹೌದು. ಶನಿವಾರ ಮಧ್ಯಾಹ್ನದ ವೇಳೆ ಯುವತಿ ತನ್ನ ಸ್ನೇಹಿತನ ಜೊತೆ ವೈಟ್‍ಫೀಲ್ಡ್ (Whitefield) ಕುಂದಲಹಳ್ಳಿ ಪಾರ್ಕ್ (Kundalahalli Park) ನಲ್ಲಿ ಕುಳಿತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಪೇದೆ, ಇಲ್ಲಿ ಹಾಗೇ ಕುಳಿತುಕೊಳ್ಳುವ ಹಾಗಿಲ್ಲ ಅಂತಾ ಫೊಟೋ ತೆಗೆದುಕೊಂಡಿದ್ದಾರೆ. ಅಲ್ಲದೆ 1 ಸಾವಿರ ದಂಡ ಹಾಕಿದ್ದಾರಂತೆ. ಇದೀಗ ಹಣ ಪಡೆದ ಪೇದೆ ವಿರುದ್ಧ ಹಾಗೂ ಪೇದೆ ಬಂದಿದ್ದ ಬೈಕ್ ಫೋಟೋ ಸಮೇತ ಟ್ಯಾಗ್ ಮಾಡಿ ಯುವತಿ ಟ್ವಿಟ್ಟರ್ ನಲ್ಲಿ ದೂರು ನೀಡಿದ್ದಾರೆ.

ಯುವತಿ ಟ್ವಿಟ್ಟರ್ (Twitter) ನಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದೇನು..?: ನಾನು ಬೆಂಗಳೂರಿಗೆ ಭೇಟಿ ನೀಡಿದಾಗ ಆಘಾತಕಾರಿ ಅನುಭವ ಆಯ್ತು. ಜನವರಿ 29 ರಂದು ಮಧ್ಯಾಹ್ನ, ನಾನು, ನನ್ನ ಸ್ನೇಹಿತ ವೈಟ್ ಫೀಲ್ಡ್ ಬಳಿಯ ಕುಂದಲಗಳ್ಳಿ ಕೆರೆಗೆ ಭೇಟಿ ನೀಡಿದ್ದವು. ಅಲ್ಲಿ ನೆರಳಿನಲ್ಲಿ ಕುಳಿತು, ಪ್ರಕೃತಿ ವಿಕ್ಷಣೆ ಮಾಡುತ್ತಿದ್ದೆವು. ಈ ವೇಳೆ ಅಲ್ಲಿಗೆ ಬಂದ ಪೊಲೀಸ್ ಒಬ್ಬರು ನಮ್ಮ ಫೋಟೋಗಳನ್ನು ತೆಗೆಯೋದಕ್ಕೆ ಶುರುಮಾಡಿದರು. ಇಲ್ಲಿ ಕುಳಿತುಕೊಳ್ಳಲು ಅನುಮತಿ ಇಲ್ಲ, ಹೇಗೆ ಒಳಗೆ ಬಂದಿದ್ದೀರಿ, ನಡೀರಿ ಪೊಲೀಸ್ ಠಾಣೆಗೆ ಅಂತಾ ಕಿರುಕುಳ ನೀಡಲು ಪ್ರಾರಂಭಿಸಿದರು. ಇದನ್ನೂ ಓದಿ: ಸ್ಕೂಟರ್‌ನಲ್ಲಿ ಬಂದು ಮಹಿಳೆಗೆ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಕೊನೆಗೆ ನಮ್ಮ ಬಳಿ ಒಂದು ಸಾವಿರ ಹಣ ತೆಗೆದುಕೊಂಡು ಅಲ್ಲಿಂದ ಕಳುಹಿಸಿದರು. ಈ ಘಟನೆಯಿಂದ ನಮಗೆ ದಿಗ್ಭ್ರಮೆಯಾಗಿದೆ. ಯಾವುದೇ ತಪ್ಪು ಮಾಡದ ನಾವು ಈ ನೈತಿಕ ಪೊಲೀಸ್‍ಗಿರಿಯನ್ನು ಏಕೆ ಸಹಿಸಿಕೊಳ್ಳಬೇಕು..? ಸಾರ್ವಜನಿಕ ಕೆರೆಯೊಂದರಲ್ಲಿ `ಅನುಮತಿ ಇಲ್ಲದೆ ಕುಳಿತಿದ್ದಕ್ಕಾಗಿ’ ಇಬ್ಬರಿಗೆ ಕಿರುಕುಳ ನೀಡುವ ಹಕ್ಕು ಮತ್ತು ಅವರು ಒಂದೇ ಲಿಂಗದವರಲ್ಲ ಎಂಬ ಕಾರಣಕ್ಕಾಗಿ ಹಣವನ್ನು ಪಡೆದುಕೊಳ್ಳುವ ಹಕ್ಕು ತನಗೆ ಇದೆ ಎಂದು ಈ ಪೊಲೀಸರು ಏಕೆ ಭಾವಿಸಿದರು..? ಅವರ ನಂಬರ್ ಪ್ಲೇಟ್‍ನ ಚಿತ್ರವನ್ನು ಲಗತ್ತಿಸಲಾಗಿದೆ. @BIrCityPolice ದಯವಿಟ್ಟು ಕ್ರಮ ತೆಗೆದುಕೊಳ್ಳಿ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *