ಗುಜರಾತಿ ಹಿಂದೂ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್

Public TV
2 Min Read
Pic1 Note Radhika Anant Engagement

ಮುಂಬೈ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ನಿಶ್ಚಿತಾರ್ಥ ಮುಂಬೈನಲ್ಲಿರುವ ಮುಕೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾದಲ್ಲಿ ಗುರುವಾರ ನಡೆಯಿತು.

Pic3 Radhika Anant Engagement

ಕುಟುಂಬ, ಸ್ನೇಹಿತರ ಸಮ್ಮುಖದಲ್ಲಿ, ಸಂಪ್ರದಾಯಬದ್ಧವಾಗಿ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಗುಜರಾತಿ ಹಿಂದೂ ಕುಟುಂಬಗಳಲ್ಲಿ ತಲೆಮಾರುಗಳಿಂದಲೂ ಅನುಸರಿಸಿಕೊಂಡು ಬರುತ್ತಿರುವ ಗೋಲ್ ಧನ ಮತ್ತು ಚುನರಿ ವಿಧಿಯಂತಹ ಸಂಪ್ರದಾಯಗಳನ್ನು ಅನುಸರಿಸಿ, ಗುರುವಾರದಂದು ಎರಡು ಕುಟುಂಬಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡವು. ಕುಟುಂಬದ ದೇವಾಲಯ ಮತ್ತು ಸಮಾರಂಭದ ಸ್ಥಳಗಳಲ್ಲಿ ಪದ್ಧತಿಗಳನ್ನು ಪಾಲಿಸಲಾಯಿತು. ಇದನ್ನೂ ಓದಿ: ಇದು ಕುಸ್ತಿಪಟುಗಳ ಹೋರಾಟ.. ರಾಜಕೀಯ ಮಾಡ್ಬೇಡಿ: ಪ್ರತಿಭಟನೆಗೆ ಬಂದ ಸಿಪಿಐ ನಾಯಕಿಗೆ ತಡೆ

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಮನರಂಜನಾ ಕಾರ್ಯಕ್ರಮ ಕೂಡ ಇತ್ತು. ಅನಂತ್ ತಾಯಿ ನೀತಾ ಅಂಬಾನಿ ನೇತೃತ್ವದಲ್ಲಿ ಅಂಬಾನಿ ಕುಟುಂಬದ ಸದಸ್ಯರ ನೃತ್ಯ ಪ್ರದರ್ಶನ ಎಲ್ಲರನ್ನೂ ಬೆರಗುಗೊಳಿಸಿತು. ಬಳಿಕ ಸಂಜೆ ಸಾಂಪ್ರದಾಯಿಕ ಲಗ್ನ ಪತ್ರಿಕೆ ಓದುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗೋಲ್ ಧನ ಮತ್ತು ಚುನರಿ ವಿಧಿ ನಂತರ ಅನಂತ್ ಮತ್ತು ರಾಧಿಕಾ ಅವರ ಕುಟುಂಬಗಳ ಮಧ್ಯೆ ಆಶೀರ್ವಾದ ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.

Pic2 Radhika Anant Engagement

ಅನಂತ್ ಮತ್ತು ರಾಧಿಕಾ ಕೆಲವು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದು, ಅನಂತ್ ಮತ್ತು ರಾಧಿಕಾ ಬಹಳ ಸಮಯದಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅಂಬಾನಿ ಕುಟುಂಬದ ಹಲವಾರು ಕಾರ್ಯಕ್ರಮಗಳಲ್ಲಿ ಕುಟುಂಬದ ಇತರ ಸದಸ್ಯರೊಂದಿಗೆ ರಾಧಿಕಾ ಕಾಣಿಸಿಕೊಂಡಿದ್ದರು. ಇದೀಗ ಮದುವೆ ಆಗಲು ನಿರ್ಧರಿಸಿದ್ದಾರೆ. ನೀತಾ ಮತ್ತು ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನವನ್ನು ಪಡೆದಿದ್ದಾರೆ. ನಂತರ ರಿಲಯನ್ಸ್ (Reliance) ಇಂಡಸ್ಟ್ರೀಸ್‍ನಲ್ಲಿ ಜಿಯೋ (Jio) ಪ್ಲಾಟ್‍ಫಾರ್ಮ್‍ಗಳು ಮತ್ತು ರಿಲಯನ್ಸ್ ರೀಟೇಲ್ ವೆಂಚರ್ಸ್‍ನ ಮಂಡಳಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಸದ್ಯ ರಿಲಯನ್ಸ್ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿದ್ದಾರೆ.

Anant Ambani Engaged Radhika Merchant

ಶೈಲಾ ಮತ್ತು ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಕಲಿತು ಪದವೀಧರರಾಗಿದ್ದು, ಎನ್‍ಕೋರ್ ಹೆಲ್ತ್‌ಕೇರ್‌ ಮಂಡಳಿಯಲ್ಲಿ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಮಿಂಚಿದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್

Anant Ambani Engaged Radhika Merchant 1

ಏನಿದು ಗೋಲ್ ಧನ ಸಂಪ್ರದಾಯ:
ಗೋಲ್ ಧನ ಎಂದರೆ ಅರ್ಥ, ಬೆಲ್ಲ ಮತ್ತು ಕೊತ್ತಂಬರಿ ಬೀಜಗಳು. ಗುಜರಾತಿ ಸಂಪ್ರದಾಯದಲ್ಲಿ ಇದು ಮದುವೆಯ ಮುಂಚಿನ ಸಮಾರಂಭವಾಗಿದ್ದು, ನಿಶ್ಚಿತಾರ್ಥ ಎಂದು ಕರೆಯಲಾಗುತ್ತದೆ. ಈ ಸಮಾರಂಭ ನಡೆಯುವ ವರನ ಸ್ಥಳದಲ್ಲಿ ಗೋಲ್ ಧನ ವಿತರಿಸಲಾಗುತ್ತದೆ. ಆ ಬಳಿಕ ವಧುವಿನ ಕುಟುಂಬವು ವರನ ನಿವಾಸಕ್ಕೆ ಉಡುಗೊರೆಗಳು ಮತ್ತು ಸಿಹಿತಿಂಡಿಗಳೊಂದಿಗೆ ಬರುವ ಸಂಪ್ರದಾಯವಿದೆ. ನಂತರ ದಂಪತಿ ಆಗುವವರು ಉಂಗುರ ಬದಲಾಯಿಸಿಕೊಂಡ ನಂತರ ತಮ್ಮ ಹಿರಿಯರಿಂದ ಆಶೀರ್ವಾದ ಪಡೆಯುತ್ತಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *