Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ನ್ಯಾಯ ಬೇಕು ಮೋದಿ – ಪ್ರಧಾನಿಗೆ 12 ಪ್ರಶ್ನೆ ಕೇಳಿದ ಸಿದ್ದರಾಮಯ್ಯ

Public TV
Last updated: January 19, 2023 12:43 pm
Public TV
Share
3 Min Read
narendra Modi Siddaramaiah
SHARE

ಬೆಂಗಳೂರು: ಕಲಬುರಗಿ ಹಾಗೂ ಯಾದಗಿರಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) 12 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಪಿಎಸ್‌ಐ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿಗೆ ನ್ಯಾಯ ಬೇಕು ಮೋದಿ ಎಂದು ಪೋಸ್ಟರ್ ಗಳನ್ನು ಪ್ರಕಟ ಮಾಡಿದ್ದಾರೆ.

1. ಪಿಎಸ್‌ಐ ನೇಮಕಾತಿ ಹಗರಣದಿಂದ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣವೂ ಸೇರಿ ಮೊನ್ನೆ ನಡೆದ PWD ಸಹಾಯಕ ಎಂಜಿನಿಯರ್ ನೇಮಕಾತಿ ಹಗರಣದಲ್ಲಿ ಕೆಲಸದಿಂದ ವಂಚಿತರಾದ ಎಲ್ಲಾ ಅರ್ಹರಿಗೆ ನ್ಯಾಯ ಕೊಡಿಸಿ ಮೋದಿಯವರೇ?

2. ಕೆ.ಆರ್ ಪುರಂನ ಇನ್ಸ್ಪೆಕ್ಟರ್ ನಂದೀಶ್ 80 ಲಕ್ಷ ಲಂಚ ಕೊಟ್ಟು ವರ್ಗಾವಣೆ ಪಡೆದು ಬಂದ ಕಾರಣಕ್ಕೆ ಒತ್ತಡದಿಂದ ಸತ್ತಿದ್ದಾರೆ ಎಂದು ಸ್ವತಃ ಬಿಜೆಪಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಇತರರಿಗೆ ರಕ್ಷಣೆ ನೀಡುವ ಪೊಲೀಸರಿಗೇ ಹೀಗಾದರೆ ಸಾಮಾನ್ಯರ ಗತಿ ಏನು ಮೋದಿ ಅವರೇ?

#ನ್ಯಾಯಬೇಕು_ಮೋದಿ @narendramodi @PMOIndia pic.twitter.com/NM5nHp4Zzx

— Siddaramaiah (@siddaramaiah) January 19, 2023

3. ಕೋವಿಡ್ ಸಂದರ್ಭದಲ್ಲಿ ಅಗತ್ಯ ಸಲಕರಣೆ ಪೂರೈಕೆ ಮಾಡಿದ್ದ ಗುತ್ತಿಗೆದಾರ ಬಸವರಾಜ ಅಮರಗೋಳ ಅವರಿಗೆ ರಾಜ್ಯ ಸರ್ಕಾರ ಬಿಲ್‌ ಹಣ ನೀಡದೆ ಇರುವುದರಿಂದ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಈತನಿಗೆ ನ್ಯಾಯ ಕೊಡಿಸಿ, ಪ್ರಾಣ ಉಳಿಸಬೇಕಾದವರು ನೀವಲ್ಲವೇ ಮೋದಿ ಅವರೇ?

4. ಪರೇಶ್ ಮೇಸ್ತಾನ ಸಾವನ್ನೂ ತನ್ನ ಭರ್ಜರಿ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದು ಬಿಜೆಪಿ. ಈಗ ಆತನ ವಯೋವೃದ್ಧ ತಂದೆ-ತಾಯಿ ಕುಟುಂಬಕ್ಕೆ ನ್ಯಾಯ ಬೇಕು. ಇದನ್ನೂ ಓದಿ: ಹಳೇ ಮೈಸೂರಿನಲ್ಲಿ ಅಮಿತ್ ಶಾ ಸೂತ್ರ – ಕಲ್ಯಾಣ ಕರ್ನಾಟಕದಲ್ಲಿ ಮೋದಿ ಮೋಡಿ

5. ಕೊರೊನಾ ಕಾಲದಲ್ಲಿ ಸ್ಯಾನಿಟೈಸರ್‌, ಮಾಸ್ಕ್ ನಿಂದ ಹಿಡಿದು ವೆಂಟಿಲೇಟರ್ ವರೆಗೆ ಎಲ್ಲದರಲ್ಲೂ ರಾಜ್ಯ ಸರ್ಕಾರ ಲೂಟಿ ಮಾಡಿದ್ದರಿಂದ ಕನಿಷ್ಠ 3,000 ಕೋಟಿ ರೂ. ಅವ್ಯವಹಾರ ನಡೆದಿದೆ. ಕೊರೊನಾದಿಂದ ಹಾದಿಯಲ್ಲಿ ಬೀದಿಯಲ್ಲಿ ಸತ್ತವರ ಆತ್ಮಗಳು ನ್ಯಾಯಕ್ಕಾಗಿ ನಿಮ್ಮ ಹಾದಿಯನ್ನೇ ಕಾಯುತ್ತಿವೆ ಮೋದಿ ಅವರೇ.

#ನ್ಯಾಯಬೇಕು_ಮೋದಿ @narendramodi @PMOIndia pic.twitter.com/fXS5u4rxbX

— Siddaramaiah (@siddaramaiah) January 19, 2023

6. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಹೊಣೆಗೇಡಿತನದಿಂದ ನಾಡಿಗೆ ಬೆಳಕು ಕೊಟ್ಟ ಲಕ್ಷಾಂತರ ಮಂದಿಯ ಬಾಳು ಕತ್ತಲಾಗಿದೆ. ಶರಾವತಿ ಸಂತ್ರಸ್ಥ ಕುಟುಂಬಗಳ ಸಮಸ್ಯೆಗೆ ಸಂದಿಸಿ ಪ್ರಧಾನಿಗಳೇ?

7. ಕನ್ನಡ ನಾಡಿನ ಹೆಮ್ಮೆಯ ನಂದಿನಿ ಸಂಸ್ಥೆ ಮೇಲೆ ಗುಜರಾತಿನ ಅಮುಲ್ ಕಣ್ಣು ಬಿದ್ದಿದೆ. ನಮ್ಮ ರೈತರ ಅನ್ನದ ತಟ್ಟೆಗೆ ಮಣ್ಣು ಹಾಕುವ ವ್ಯಾಪಾರಿ ಬುದ್ದಿ ಸಾಕು ಮಾಡಿ ಪ್ರಧಾನಿಗಳೇ. ಕನ್ನಡ ನಾಡಿನ ಹೆಮ್ಮೆಯ ನಂದಿನಿ ಸಂಸ್ಥೆ ಮೇಲೆ ಗುಜರಾತಿನ ಅಮುಲ್ ಕಣ್ಣು ಬಿದ್ದಿದೆ. ನಮ್ಮ ರೈತರ ಅನ್ನದ ತಟ್ಟೆಗೆ ಮಣ್ಣು ಹಾಕುವ ವ್ಯಾಪಾರಿ ಬುದ್ದಿ ಸಾಕು ಮಾಡಿ ಪ್ರಧಾನಿಗಳೇ.

#ನ್ಯಾಯಬೇಕು_ಮೋದಿ @narendramodi @PMOIndia pic.twitter.com/2Z2QFEC2e5

— Siddaramaiah (@siddaramaiah) January 19, 2023

8. ಕಾಲುಬಾಯಿರೋಗ ಮತ್ತು ಚರ್ಮಗಂಟು ರೋಗದಿಂದ ಒಂದೂವರೆ ಲಕ್ಷದಷ್ಟು ಜಾನವಾರುಗಳು ಮರಣಹೊಂದಿವೆ. ರೋಗಕ್ಕೆ ಲಸಿಕೆ ಮತ್ತು ಜೀವನಾಧಾರದ ರಾಸುಗಳನ್ನು ಕಳೆದುಕೊಂಡ ರೈತ ಕುಟುಂಬಗಳಿಗೆ ಪರಿಹಾರ ಕೊಡಿಸಿ ಪ್ರಧಾನ ಮಂತ್ರಿಗಳೇ.

9. ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಹತ್ತಾರು ಕುಟುಂಬಗಳ ಮಕ್ಕಳಿಗೆ ಹಾಗೂ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ಒದಗಿಸಿ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಪ್ರಧಾನಿಗಳೇ.

#ನ್ಯಾಯಬೇಕು_ಮೋದಿ @narendramodi @PMOIndia pic.twitter.com/AoIinJvJ57

— Siddaramaiah (@siddaramaiah) January 19, 2023

10. 40% ಕಮಿಷನ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಕಾಮಗಾರಿಯ ಹಣ ನೀಡದೆ ಸತಾಯಿಸಿದ ನಿಮ್ಮ ಬಿಜೆಪಿ ಸರ್ಕಾರದ ಹಣದಾಸೆಗೆ ಗುತ್ತಿಗೆದಾರ ಪ್ರಸಾದ್‌ ಬಲಿಯಾದ. ಈ ಸಾವಿನ ಸರಣಿಯನ್ನು ಕೊನೆಗಾಣಿಸುವವರು ಯಾರು ಮೋದಿ ಅವರೇ?

11. ಸಚಿವರಾಗಿದ್ದ ಈಶ್ವರಪ್ಪ ಅವರಿಗೆ 40% ಕಮಿಷನ್ ನೀಡಲಾಗದೆ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆಗೆ ಶರಣಾದರು. ಬದುಕಿದ್ದಾಗಲಂತೂ ನೀವು ಆತನಿಗೆ ನ್ಯಾಯ ಕೊಡಿಸಿಲ್ಲ, ಸತ್ತ ಮೇಲಾದರೂ ನ್ಯಾಯ ಸಿಗುವುದು ಬೇಡವೇ ಮೋದಿ ಅವರೇ?

12. ಮೆಟ್ರೋ ಪಿಲ್ಲರ್ ಕುಸಿತದಿಂದ ಮೃತಪಟ್ಟ ಸಾಫ್ಟ್‌ವೇರ್‌ ಎಂಜಿನಿಯರ್ ತೇಜಸ್ವಿನಿ ಹಾಗೂ ಇವರ ಎರಡು ವರ್ಷದ ಕಂದಮ್ಮ ವಿಹಾನ್ ಸಾವಿಗೆ ಹೊಣೆ ಯಾರು? ಮುಖ್ಯ ಎಂಜಿನಿಯರ್ ವಿರುದ್ಧ ಕ್ರಮ ಯಾವಾಗ ಪ್ರಧಾನಿಗಳೇ?

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:bjpcongresskarnatakaNarenndra Modisiddaramaiahಕರ್ನಾಟಕಕಾಂಗ್ರೆಸ್ನರೇಂದ್ರ ಮೋದಿಸಿದ್ದರಾಮಯ್ಯ
Share This Article
Facebook Whatsapp Whatsapp Telegram

You Might Also Like

Lingaraj Kanni Priyank Kharge 1
Districts

ಮಾದಕದ್ರವ್ಯ ಮಾರಾಟ – ಪ್ರಿಯಾಂಕ್‌ ಖರ್ಗೆ ಆಪ್ತ ಅರೆಸ್ಟ್‌

Public TV
By Public TV
13 minutes ago
daily horoscope dina bhavishya
Astrology

ದಿನ ಭವಿಷ್ಯ 14-07-2025

Public TV
By Public TV
50 minutes ago
space Station 3
Latest

ಬಾಹ್ಯಾಕಾಶದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಏನಾಗುತ್ತೆ?

Public TV
By Public TV
7 hours ago
butter fruit chutney
Food

ಪಟಾಪಟ್ ಅಂತ ಮಾಡಿ ಬಟರ್‌ ಫ್ರೂಟ್‌ ಚಟ್ನಿ‌ – ಟೇಸ್ಟ್ ಸೂಪರ್!

Public TV
By Public TV
8 hours ago
bihar lawyer murder
Crime

ಬಿಹಾರ; ನಡುರಸ್ತೆಯಲ್ಲೇ ವಕೀಲನಿಗೆ ಗುಂಡಿಕ್ಕಿ ಹತ್ಯೆ

Public TV
By Public TV
8 hours ago
KGF
Districts

ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆಗೆ ಕೇಂದ್ರ ಒಪ್ಪಿಗೆ

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?