2 ಸಾವಿರ ರೂ. ಕೊಟ್ಟೇ `ನಾ ನಾಯಕಿ’ ಸಮಾವೇಶಕ್ಕೆ ಮಹಿಳೆಯರನ್ನ ಕರೆತರಲಾಗಿದೆ – ಟ್ವೀಟ್‌ನಲ್ಲಿ ಕಾಲೆಳೆದ BJP

Public TV
2 Min Read
Na Nayaki

ಬೆಂಗಳೂರು: ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ `ನಾ ನಾಯಕಿ’ (Na Nayaki) ಕಾರ್ಯಕ್ರಮಕ್ಕೆ 2 ಸಾವಿರ ರೂ. ಕೊಟ್ಟೇ ಮಹಿಳೆಯರನ್ನು ಕರೆತರಲಾಗಿದೆ ಎಂದು ಬಿಜೆಪಿ (BJP) ಆರೋಪಿಸಿದೆ.

ಕಾಂಗ್ರೆಸ್ (Congress) ವಿರುದ್ಧ ಟ್ವೀಟ್‌ನಲ್ಲಿ ಕಾಲೆಳೆದಿರುವ ಬಿಜೆಪಿ, `ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂದ್ರೆ ಇದೇನಾ? `ನಾಯಕಿ’ ಕಾರ್ಯಕ್ರಮಕ್ಕೂ 2,000 ರೂ. ಕೊಟ್ಟೇ ಕರೆತರಲಾಗಿತ್ತು. ಶ್ರೀಮತಿ ಪ್ರಿಯಾಂಕಾ ಗಾಂಧಿ (Priyanka Gandhi) ನೇತೃತ್ವದ ಸಮಾವೇಶದಲ್ಲಿ ಹರಿದ ಕಾಂಚಾಣವೇ ಬಹುಶಃ ಕಾಂಗ್ರೆಸ್ಸಿಗರ `ಗೃಹಲಕ್ಷ್ಮಿ’ ಯೋಜನೆ ಇರಬೇಕು ಎಂದು ವ್ಯಂಗ್ಯವಾಡಿದೆ. ಇದನ್ನೂ ಓದಿ: ಇಂಗ್ಲಿಷ್‌ ಪದವೀಧರೆ ಈಗ ಚಾಯ್‌ವಾಲಿ – ಯುವತಿ ಭವಿಷ್ಯದ ಕನಸಿಗೆ ಜನರ ಮೆಚ್ಚುಗೆ

ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಮಹಿಳಾ ಕಾಂಗ್ರೆಸ್‌ನ `ನಾ ನಾಯಕಿ’ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ರಾಜ್ಯ ಕಾಂಗ್ರೆಸ್‌ನ ಮಹಿಳಾ ಪ್ರಣಾಳಿಕೆಯ ಕೆಲವು ಪ್ರಮುಖ ವಿಚಾರಗಳನ್ನು ಘೋಷಣೆ ಮಾಡಿದರು. ಇದೇ ವೇಳೆ `ಗೃಹಲಕ್ಷ್ಮಿ’ ಬಾಂಡ್ ಅನ್ನೂ ಪ್ರದರ್ಶಿಸಿದರು. ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿ ತಿರುಗೇಟು ನೀಡಿತ್ತು. ಇದನ್ನೂ ಓದಿ: ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನ ಪಾಠ ಕಲಿತಿದೆ – ಶೆಹಬಾಜ್ ಷರೀಫ್

ನಂತರ `ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯಗಳನ್ನೇ ಪ್ರಶ್ನಿಸದ ಪ್ರಿಯಾಂಕಾ ಗಾಂಧಿ ಅವರು ಈಗ `ಗೃಹಲಕ್ಷ್ಮಿ’ ಯೋಜನೆ ಜಾರಿಗೊಳಿಸುವ ಭರವಸೆ ನೀಡಿರೋದು `ಕಾಂಗ್ರೆಸ್ ಗ್ಯಾರಂಟಿ ಸುಳ್ಳಿನ ಸರಣಿ’ಯ ಮುಂದುವರಿದ ಭಾಗ.

ಛತ್ತೀಸ್‌ಘಡದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಮಾಸಿಕ ಭತ್ಯೆ ಕೊಡ್ತಿಲ್ಲ, ವಿಧವೆಯರಿಗೆ ಮಾಸಿಕ 1,000 ರೂ. ಪೆನ್ಷನ್ ಕೊಡ್ತಿಲ್ಲ, ಹಿಮಾಚಲ ಪ್ರದೇಶದಲ್ಲಿ 18-60 ವರ್ಷದ ಮಹಿಳೆಯರಿಗೆ 1,500ರೂ. ನೆರವು – ಸಿಕ್ತಿಲ್ಲ. ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 3,500 ರೂ. ಮಾಸಿಕ ನಿರುದ್ಯೋಗ ಭತ್ಯೆ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿತ್ತು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *