ತಿರುವನಂತಪುರಂ: ಭಾರತ ಹಾಗೂ ಶ್ರೀಲಂಕಾ ನಡುವೆ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಭಾನುವಾರ ತಿರುವನಂತಪುರಂನಲ್ಲಿ ನಡೆಯಲಿದೆ.
ಈಗಾಗಲೇ ಎರಡನೇ ಏಕದಿನ ಪಂದ್ಯ ಗೆದ್ದಿರುವ ಭಾರತ ಸರಣಿ ಕೈವಶಪಡಿಸಿಕೊಂಡಿದ್ದು, ಸರಣಿ ಕ್ಲೀನ್ ಸ್ವೀಪ್ ಸಾಧಿಸುವತ್ತ ಗುರಿ ನೆಟ್ಟಿದೆ. ಇತ್ತ ಶ್ರೀಲಂಕಾ ಕೊನೆಯ ಪಂದ್ಯದಲ್ಲಿ ಗೆದ್ದು ಸರಣಿಗೆ ಗುಡ್ ಬೈ ಹೇಳಲು ಹಾತೊರೆಯುತ್ತಿದೆ. ಇದನ್ನೂ ಓದಿ: T20 ವಿಶ್ವಕಪ್‌ನಲ್ಲಿ ಭಾರತದ ವನಿತೆಯರಿಗೆ ಶುಭಾರಂಭ – SA ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ
2-0 ಅಂತರದಲ್ಲಿ ಸರಣಿ ಕೈವಶಪಡಿಸಿಕೊಂಡಿರುವ ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಮಹತ್ತರ ಬದಲಾವಣೆ ಗೋಚರಿಸುವ ಸಾಧ್ಯತೆ ಕಂಡು ಬಂದಿದೆ. ಈಗಾಗಲೇ ಟಿ20 ಕ್ರಿಕೆಟ್‍ನಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಇವರೊಂದಿಗೆ ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್ ಮತ್ತು ಅರ್ಶ್‍ದೀಪ್ ಸಿಂಗ್ ಕೂಡ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ಎರಡು ವಾರಗಳಲ್ಲಿ 2 ಬಾರಿ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ ಲಲಿತ್ ಮೋದಿ
ಏಕದಿನ ರ‍್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಲು ಈ ಪಂದ್ಯ ಕೂಡ ಭಾರತಕ್ಕೆ ಮಹತ್ವದ್ದಾಗಿದ್ದು, ಗೆಲುವಿನತ್ತ ರೋಹಿತ್ ಪಡೆ ದೃಷ್ಟಿ ನೆಟ್ಟಿದೆ. ಹಾಗಾಗಿ ಬದಲಾವಣೆ ಮಾಡದೇ ಕಣಕ್ಕಿಳಿದರೂ ಅಚ್ಚರಿ ಪಡಬೇಕಾಗಿಲ್ಲ. ಇಂದು ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k