ಬೆಂಗಳೂರು: ಚುನಾವಣೆ ಹತ್ತಿರ ಬರ್ತಿದ್ದ ಹಾಗೇ ಬಿಜೆಪಿ (BJP) ಪಕ್ಷವು ಜನತೆ ಮುಂದೆ ಡಬಲ್ ಇಂಜಿನ್ ಸರ್ಕಾರಗಳ ರಿಪೋರ್ಟ್ ಕಾರ್ಡ್ ಇಡಲು ಮುಂದಾಗಿದೆ. ಇದಕ್ಕಾಗಿ ಬಿಜೆಪಿ ಪಕ್ಷದ ವತಿಯಿಂದ ಇದೇ ತಿಂಗಳ 21 ರಿಂದ 29ರ ವರೆಗೆ ವಿಜಯ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ವಿಜಯಪುರದ ಸಿಂದಗಿಯಲ್ಲಿ ಈ ವಿಜಯ ಸಂಕಲ್ಪ ಅಭಿಯಾನ ಆಯೋಜಿಸಲಾಗಿದೆ. ಅಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ (J.P.Nadda) ಅವರು ಸಿಂದಗಿಗೆ ಆಗಮಿಸಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಜೆಪಿಯು ಡಬಲ್ ಇಂಜಿನ್ ಸರ್ಕಾರಗಳ ರಿಪೋರ್ಟ್ ಕಾರ್ಡ್ ಅನ್ನು ಬಿಡುಗಡೆ ಮಾಡಲಿದೆ. ರಿಪೋರ್ಟ್ ಕಾರ್ಡ್ ಅನ್ನು ಜನರ ಮುಂದಿಡೋ ಮೂಲಕ ಮತ ಕೇಳಲು ಬಿಜೆಪಿ ಮುಂದಾಗಿದೆ. ಈ ರಿಪೋರ್ಟ್ ಕಾರ್ಡ್‌ನಲ್ಲೂ ಹಿಂದುತ್ವ, ಅಭಿವೃದ್ಧಿ ಮತ್ತು ವಿವಿಧ ಸಮುದಾಯಗಳ ಸಮೀಕರಣದ ಲೆಕ್ಕಾಚಾರ ಹೆಣೆಯಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಗೆದ್ರೆ ಮೋದಿ ಸೋಲುತ್ತಾರೆ: ಶಾಸಕ ಪುಟ್ಟರಂಗಶೆಟ್ಟಿ
ಕೇಂದ್ರ ಸರ್ಕಾರದ ರಿಪೋರ್ಟ್ ಕಾರ್ಡ್ ಏನು?
ಜಮ್ಮು ಕಾಶ್ಮೀರದ ಆರ್ಟಿಕಲ್ 370 ರದ್ದು, ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ, ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮ, ಉಜ್ವಲಾ ಯೋಜನೆ, ಗ್ರಾಮಜ್ಯೋತಿ ಯೋಜನೆ, ಆಪರೇಷನ್ ಗಂಗಾ, ಭಯೋತ್ಪಾದನಾ ನಿಗ್ರಹ ಕ್ರಮಗಳು, ಆಯುಷ್ಮಾನ್ ಭಾರತ್, ಸಾಗರ ಮಾಲಾ, ಭಾರತ ಮಾಲಾ ಯೋಜನೆಗಳು, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ, ಲಸಿಕಾಕರಣ, ಪೌರತ್ವ ತಿದ್ದುಪಡಿ ವಿಧೇಯಕ.
ರಾಜ್ಯ ಸರ್ಕಾರದ ರಿಪೋರ್ಟ್ ಕಾರ್ಡ್ ಏನು?
ಎಸ್ಸಿ/ಎಸ್ಟಿ ಸಮುದಾಗಳಿಗೆ ಮೀಸಲಾತಿ ಹೆಚ್ಚಳ, ಪಂಚಮಸಾಲಿ/ಒಕ್ಕಲಿಗ ಸಮುದಾಯಗಳಿಗೆ ಹೊಸ ಪ್ರವರ್ಗಗಳ ಸೃಷ್ಟಿ, ಗೋಹತ್ಯೆ ತಡೆ ಕಾಯ್ದೆ ಜಾರಿ, ಬಲವಂತದ ಮತಾಂತರ ತಡೆ ಕಾಯ್ದೆ ಜಾರಿ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿ, ನಮ್ಮ ಕ್ಲಿನಿಕ್, ಪಶು ಚಿಕಿತ್ಸಾ ಸಂಚಾರಿ ಅಂಬುಲೆನ್ಸ್, ನೇಕಾರ ಸಮ್ಮಾನ್ ಯೋಜನೆ, ಯಶಸ್ವಿನಿ ಮರು ಆರಂಭ, ಎಸ್ಸಿ/ಎಸ್ಟಿ ಸಮುದಾಯಗಳಿಗೆ ಉಚಿತ 75 ಯೂನಿಟ್ ವಿದ್ಯುತ್, ವಿವಿಧ ಅಮೃತ ಯೋಜನೆಗಳು, ವಿದ್ಯಾನಿಧಿ ಯೋಜನೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ಕ್ಷೀರ ಸಮೃದ್ಧಿ, ಮನೆ ಮನೆಗೆ ಗಂಗೆ ಯೋಜನೆಗಳು, ಗ್ರಾಮ ಒನ್ ಯೋಜನೆ, ವಿವಿಧ ನೀರಾವರಿ ಯೋಜನೆಗಳು, ಉತ್ತರ ಕರ್ನಾಟಕ ಅಭಿವೃದ್ಧಿ, ಕಾಶಿ ದರ್ಶನ ರೈಲು ಸೇವೆ, ವಿವಿಧ ಪಿಂಚಣಿ, ಮಾಸಾಶನಗಳ ಹೆಚ್ಚಳ. ಇದನ್ನೂ ಓದಿ: ಮಾಜಿ ಶಾಸಕ ವೈಎಸ್‌ವಿ ದತ್ತಾ, ಶಾಸಕ ಹೆಚ್.ನಾಗೇಶ್ ಕಾಂಗ್ರೆಸ್ ಸೇರ್ಪಡೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k