ಪ್ರತಿ ಹೆಣ್ಣು ತನ್ನ ಸಂಗಾತಿಯಿಂದ ಬಯಸೋದು ಏನು ಗೊತ್ತಾ?

Public TV
2 Min Read
couple

ಪುರುಷರು ನಮ್ಮನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ” ಎಂಬುದು ಬಹುಪಾಲು ಮಹಿಳೆಯರ ಆರೋಪ. ಹೆಣ್ಣು ನಿಜವಾಗಿಯೂ ಏನು ಬಯಸುತ್ತಾಳೆ ಎಂಬುದನ್ನು ಅರಿತುಕೊಳ್ಳುವಲ್ಲಿ ಗಂಡು ಸೋಲುತ್ತಾನೆ. ಕೆಲವರು ತನ್ನವಳ ಬಗ್ಗೆ ಎಲ್ಲವನ್ನೂ ತಿಳಿದಿದ್ದೇನೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಾರೆ. ಆದರೆ ತಿಳಿದಿರುವಿಕೆಯಲ್ಲಿ ಹೆಚ್ಚಿನವು ತಪ್ಪು ಎಂದು ಸಾಬೀತಾಗಿವೆ. ಪುರುಷರು ತಮ್ಮನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಲ್ಲಾ ಮಹಿಳೆಯರು ಬಯಸುತ್ತಾರಂತೆ.

ಸಪೋರ್ಟ್‌
ಸ್ವಲ್ಪ ವಿನೋದ ಮತ್ತು ಜಗಳ, ಮುನಿಸು ಜೀವನದಲ್ಲಿ ಚೆನ್ನಾಗಿರುತ್ತೆ. ಆದರೆ ನಿಮ್ಮಾಕೆಯನ್ನು ಯಾರಾದರು ಗೇಲಿ ಮಾಡಿದಾಗ, ನೀವು ಆಕೆ ಪರವಾಗಿ ನಿಲ್ಲಿರಿ. ಏನೇ ಆಗಲಿ.. ನೀವು ಅವಳ ಪರವಾಗಿ ನಿಲ್ಲಬೇಕೆಂದು ಅವಳು ಮನಸ್ಸಿನೊಳಗೆ ಬಯಸುತ್ತಾಳೆ. ಆಕೆ ಗಟ್ಟಿತನದ ಮಹಿಳೆಯಾಗಬೇಕೆಂದರೆ ಕೆಲವೊಮ್ಮೆ ನಿಮ್ಮ ಬೆಂಬಲ ತುಂಬಾ ಮುಖ್ಯ. ಇದನ್ನೂ ಓದಿ: ವಿವಾಹಿತರೊಂದಿಗೆ ಅಫೇರ್‌ ಇಟ್ಕೊಂಡಿರೋರಿಗೆ ಒಂದಷ್ಟು ಸಲಹೆ…

COUPLE

ಪ್ರೀತಿ ನಿರೀಕ್ಷೆ
ಹೆಣ್ಣು ತನ್ನ ಸಂಗಾತಿ ಸ್ವಲ್ಪಮಟ್ಟಿನ ಪ್ರೀತಿಯನ್ನಾದರೂ ತೋರಿಸಲಿ ಎಂದು ಅಪೇಕ್ಷಿಸುತ್ತಾಳೆ. ನಾನು ನಿನ್ನೊಂದಿಗಿದ್ದೇನೆ ಎನ್ನುವಂತೆ ಕೈಗಳು ಅಥವಾ ಸೊಂಟವನ್ನು ಹಿಡಿದುಕೊಳ್ಳುವುದು ಆಕೆ ನಿಮ್ಮವಳೆಂದು ಜಗತ್ತಿಗೆ ತೋರಿಸಲು ಒಂದು ಚಿಕ್ಕ ಮಾರ್ಗವಾಗಿದೆ.

ಜೊತೆಗೆ ಸಮಯ ಕಳೆಯಲು ಬಯಕೆ
ನೀವು ಮನೆಯಲ್ಲಿದ್ದಾಗ ಹೆಚ್ಚಿನ ಸಮಯ ಸಂಗಾತಿಯೊಂದಿಗೆ ಕಳೆಯಿರಿ. ಅವನು ನನ್ನ ಕಡೆ ಗಮನ ಕೊಡಲಿ, ತುಂಬಾ ಕೇರ್‌ ಮಾಡಿ ಎಂದು ಮಹಿಳೆಯರು ಬಯಸುವುದು ಹೆಚ್ಚು. ಆದ್ದರಿಂದ ನಿಮ್ಮ ಫೋನ್ ಅಥವಾ ಕೆಲಸವನ್ನು ಪಕ್ಕಕ್ಕೆ ಇರಿಸಿ. ನಿಮ್ಮಾಕೆಯೊಂದಿಗೆ ಸಮಯ ಕಳೆಯಿರಿ. ಒಟ್ಟಿಗೆ ಸಿನಿಮಾ ವೀಕ್ಷಿಸಿ. ಮನೆಯ ಕೆಲಸವನ್ನು ಒಟ್ಟಿಗೆ ಮಾಡಿ. ಇದು ನಿಮ್ಮ ಸಂಗಾತಿಗೆ ತುಂಬಾ ಮುಖ್ಯವಾಗಿರುತ್ತದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

couple movie watch

ಭಾವನೆ ಹಂಚಿಕೊಳ್ಳುವುದು, ಪ್ರಾಮಾಣಿಕತೆ
ಸತ್ಯವು ಎಷ್ಟೇ ಕಹಿ ಆಗಿರಲಿ, ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಿ. ಆಕೆಗೆ ಸುಳ್ಳು ಹೇಳುವುದು ಮತ್ತು ದ್ರೋಹ ಮಾಡುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಸಂಗಾತಿಗೆ ಸತ್ಯವೇ ಮುಖ್ಯವಾಗಿರುತ್ತದೆ. ಸಂಗಾತಿಯೊಂದಿಗೆ ನೀವು ಪ್ರಾಮಾಣಿಕರಾಗಿದ್ದಷ್ಟೂ ಸಂಬಂಧ ಗಟ್ಟಿಗೊಳ್ಳುತ್ತದೆ.

teenage couple love marrige

ಹೇಳುವುದನ್ನು ಆಲಿಸುವುದು
ನಿಮ್ಮವಳು ಏನು ಹೇಳುತ್ತಿದ್ದಾಳೆಂಬುದನ್ನು ಮೊದಲು ಆಲಿಸಿ. ಆಕೆ ಮಾತನಾಡುವಾಗಿ ಅಡ್ಡಿಪಡಿಸಬೇಡಿ. ಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸಿ. ಈ ನಡವಳಿಕೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

ವಿಶೇಷವಾಗಿ ಟ್ರೀಟ್‌ ಮಾಡುವುದು
ನಿಮ್ಮ ಸಂಗಾತಿಯನ್ನು ಸ್ನೇಹಿತೆಯಂತೆ ಪರಿಗಣಿಸಿ. ಇದರಿಂದ ನಿಮ್ಮಾಕೆಗೆ ನೀವು ಇನ್ನಷ್ಟು ಇಷ್ಟವಾಗಬಹುದು. ಆಕೆ ನಿಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯಾಗಿರಬೇಕು. ನನ್ನನ್ನು ವಿಶೇಷವಾಗಿ ಟ್ರೀಟ್‌ ಮಾಡಲಿ ಅಂತಾ ಬಯಸುವ ಮಹಿಳೆಯರೇ ಹೆಚ್ಚು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *