ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಸಂಚಲನ ಮೂಡಿಸಿರುವ ‘ಕಾಂತಾರ’ ಸಿನಿಮಾದ ನಾಯಕಿ ಸಪ್ತಮಿ ಗೌಡ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕರ ಹೊಸ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ದಲ್ಲಿ ನಟಿಸಲು ಆಯ್ಕೆಯಾಗಿರುವ ವಿಷಯವನ್ನು ನಿನ್ನೆಯಷ್ಟೇ ‘ಪಬ್ಲಿಕ್ ಟಿವಿ ಡಿಜಿಟಲ್’ ಬ್ರೇಕ್ ಮಾಡಿತ್ತು. ಆನಂತರ ಈ ವಿಷಯವನ್ನು ಸ್ವತಃ ಸಪ್ತಮಿ ಗೌಡ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ತಮ್ಮ ತಂಡಕ್ಕೆ ಸಪ್ತಮಿ ಅವರನ್ನು ಸ್ವಾಗತಿಸಿದ್ದಾರೆ. ನೀವು ಅತ್ಯುತ್ತಮ ನಟಿ ಎಂದು ಹೊಗಳಿದ್ದಾರೆ.
ಈಗಾಗಲೇ ಸಿನಿಮಾದ ಒಂದು ಹಂತದ ಚಿತ್ರೀಕರಣ ಕೂಡ ಮುಗಿದಿದ್ದು, ಎರಡನೇ ಹಂತದ ಶೂಟಿಂಗ್ ನಲ್ಲಿ ಸಪ್ತಮಿ ಪಾಲ್ಗೊಂಡಿದ್ದಾರೆ. ಈ ಬಾರಿಯ ಸಂಕ್ರಾಂತಿಯನ್ನು ದಿ ವ್ಯಾಕ್ಸಿನ್ ವಾರ್ ಶೂಟಿಂಗ್ ಸೆಟ್ ನಲ್ಲೇ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಬಯಸದೇ ಬಂದಿರುವ ಭಾಗ್ಯ ಎಂದೂ ಅವರು ಹೇಳಿಕೊಂಡಿದ್ದಾರೆ. ಸ್ವತಃ ವಿವೇಕ್ ಅಗ್ನಿಹೋತ್ರಿ ಅವರೇ ಸಪ್ತಮಿ ಗೌಡ ಅವರಿಗೆ ಕಾಲ್ ಮಾಡಿ, ನಟಿಸಲು ಅವಕಾಶ ನೀಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ
ಪಾತ್ರದ ಬಗ್ಗೆ ಹೆಚ್ಚೇನೂ ಹೇಳದ ಸಪ್ತಮಿ, ಈ ಸಿನಿಮಾದಲ್ಲಿ ನಾಯಕ, ನಾಯಕಿ ಅಂತೇನೂ ಇಲ್ಲ. ಕಂಟೆಂಟ್ ಮೇಲೆ ನಿಂತಿರುವಂತಹ ಸಿನಿಮಾ. ಈ ಸಿನಿಮಾದಲ್ಲಿ ನನ್ನದೂ ಪ್ರಮುಖ ಪಾತ್ರ ಅಂದಷ್ಟೇ ಹೇಳಿಕೊಂಡಿದ್ದಾರೆ. ಹೈದರಾಬಾದ್ ನಲ್ಲಿ ಸದ್ಯ ದಿ ವ್ಯಾಕ್ಸಿನ್ ವಾರ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಸಂಕ್ರಾಂತಿ ದಿನದಂದು ಅವರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
ಕಾಂತಾರ ಸಿನಿಮಾ ಹಾಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಈಗಾಗಲೇ ಆಸ್ಕರ್ ಅಂಗಳದಲ್ಲಿವೆ. ಎರಡೂ ಚಿತ್ರಗಳ ನಡುವೆ ಪೈಪೋಟಿಯೂ ಏರ್ಪಡಬಹುದು. ಇಂತಹ ಹೊತ್ತಿನಲ್ಲಿ ಸಪ್ತಮಿ ಗೌಡ ಅವರಿಗೆ ಬಾಲಿವುಡ್ ಗೆ ಹೋಗುವಂತಹ ಅವಕಾಶ ಸಿಕ್ಕಿದೆ. ಅದರಲ್ಲೂ ಕಳೆದ ವರ್ಷ ಬಾಕ್ಸ್ ಆಫೀಸ್ ದೋಚಿದ್ದ ವಿವೇಕ್ ಅಗ್ನಿಹೋತ್ರಿ ಜೊತೆ ಕೆಲಸ ಮಾಡಲು ಅವರು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ಕನ್ನಡದ ಕಾಳಿ ಚಿತ್ರಕ್ಕೂ ಸಪ್ತಮಿ ಗೌಡ ಸಹಿ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k