ಮುಂದಿನ ಸಿನಿಮಾದಿಂದ ‘ಕಾಂತಾರ’ ದಾಖಲೆಯನ್ನೇ ಮುರಿಯಿರಿ: ರಿಷಬ್‌ಗೆ ಕಮಲ್ ಹಾಸನ್ ಪತ್ರ

Public TV
2 Min Read
Kamal Haasan Rishab Shetty

‘ಕಾಂತಾರ’ (Kantara) ಚಿತ್ರ ನೋಡಿ ಇಡೀ ದೇಶವೇ ಕೊಂಡಾಡುತ್ತಿದೆ. ಕನ್ನಡದ ಸಿನಿಮಾ‌ವನ್ನ ಪರಭಾಷಿಗರು ಕೂಡ ಹಾಡಿ ಹೊಗಳುತ್ತಿದ್ದಾರೆ. ಹೀಗಿರುವಾಗ ‘ಕಾಂತಾರ’ ಸಿನಿಮಾ ನೋಡಿರುವ ಕಮಲ್​ ಹಾಸನ್​ (Kamal Haasan) ಅವರು ರಿಷಬ್​ ಶೆಟ್ಟಿಗೆ (Rishab Shetty) ದೀರ್ಘವಾಗಿ ಪತ್ರ ಬರೆದಿದ್ದಾರೆ. ಮಹಾನ್ ನಟನಿಂದ ಈ ರೀತಿಯ ಮೆಚ್ಚುಗೆ ಪತ್ರ ಸಿಕ್ಕಿದ್ದಕ್ಕೆ ರಿಷಬ್​ ದಿಲ್ ಖುಷಿ ಆಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಹೇಳಿಕೊಂಡಿದ್ದಾರೆ.

Kantara 2

ಕಮಲ್​ ಹಾಸನ್​ ಅವರಿಂದ ಈ ರೀತಿಯ ಮೆಚ್ಚುಗೆ ಪತ್ರ ಸಿಕ್ಕಿದ್ದಕ್ಕೆ ರಿಷಬ್​ ಶೆಟ್ಟಿ ತುಂಬ ಥ್ರಿಲ್ ಆಗಿದ್ದಾರೆ. ‘ಭಾರತೀಯ ಸಿನಿಮಾ ಲೋಕದ ದಿಗ್ಗಜ ನಟನಿಂದ ಈ ಪತ್ರ ಬಂದಿದೆ. ಕಮಲ್​ ಸರ್​ ನೀಡಿದ ಈ ಅಚ್ಚರಿಯ ಗಿಫ್ಟ್​ ನೋಡಿ ಅಪಾರ ಸಂತಸ ಆಗಿದೆ’ ಎಂದು ರಿಷಬ್​ ಶೆಟ್ಟಿ ಮಾಡಿರುವ ಈ ಪೋಸ್ಟ್​ ಸದ್ದು ಮಾಡುತ್ತಿದೆ.

ಈ ಹಿಂದೆ ಕಮಲ್​ ಹಾಸನ್​ ಅವರು ‘ಕಾಂತಾರ’ ಸಿನಿಮಾ ನೋಡಿದ್ದರು. ಆಗಲೂ ಅವರು ಫೋನ್ ಮೂಲಕ ರಿಷಬ್​ ಶೆಟ್ಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಈಗಾಗಲೇ ನಾನು ಫೋನ್​ನಲ್ಲಿ ಹೇಳಿದಂತೆ ಕಾಂತಾರ ಸಿನಿಮಾದ ದಾಖಲೆಯನ್ನು ನಿಮ್ಮ ಮುಂದಿನ ಸಿನಿಮಾದಿಂದ ಮುರಿಯಿರಿ’ ಎಂದು ಸಲಹೆ ನೀಡುವ ಮೂಲಕ ಕಮಲ್​ ಹಾಸನ್​ ಅವರು ಪತ್ರವನ್ನು ಕಂಪ್ಲಿಟ್ ಮಾಡಿದ್ದಾರೆ. ಇದನ್ನೂ ಓದಿ: ಮದುವೆ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ

 

KANTARAಇನ್ನೂ ಪ್ರತಿಷ್ಟಿತ ಆಸ್ಕರ್ ರೇಸ್ ನಲ್ಲಿ ‘ಕಾಂತಾರ’ ಚಿತ್ರ ಕೂಡ ಅರ್ಹತೆ ಪಡೆದಿದೆ. ಈ ಖುಷಿ ಸುದ್ದಿಯನ್ನು ಇತ್ತೀಚೆಗೆ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಕನ್ನಡದ ಕಾಂತಾರ‌ ಸಿನಿಮಾ ಆಸ್ಕರ್​ ಪ್ರಶಸ್ತಿ ಗೆಲ್ಲಲಿ ಎಂದು ಫ್ಯಾನ್ ಹಾರೈಸುತ್ತಿದ್ದಾರೆ. ಜೊತೆಗೆ ‘ಕಾಂತಾರ 2’ಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದನ್ನೂ ಓದಿ: Breaking- ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಚಿತ್ರಕ್ಕೆ ‘ಕಾಂತಾರ’ ಹುಡುಗಿ ಹೀರೋಯಿನ್

Live Tv 
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *