ದಾವಣಗೆರೆ: ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ಮೆಟ್ರೋ ಕಾಮಗಾರಿಗೆ ಬಲಿಯಾದ ತಾಯಿ- ಮಗುವಿನ ಮೃತದೇಹ ದಾವಣಗೆರೆಗೆ ತಲುಪಿದ್ದು, ಬುಧವಾರ ಅಂತ್ಯಸಂಸ್ಕಾರ (Funeral) ನಡೆಯಲಿದೆ.
ದಾವಣಗೆರೆ ನಗರದ ಕುಂದವಾಡ ರಸ್ತೆಯ ಬಸವೇಶ್ವರ ನಗರದ ತೇಜಸ್ವಿನಿ (Tejaswini) ತಂದೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ತಾಯಿ-ಮಗುವಿನ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ಪ್ರತ್ಯೇಕವಾಗಿ ಮಾಡಲಿದ್ದಾರೆ. ಇದನ್ನೂ ಓದಿ: ಮೆಟ್ರೋ ಎಂಜಿನಿಯರ್ ಸಸ್ಪೆಂಡ್, ಕಂಟ್ರಾಕ್ಟರ್ ಮೇಲೆ ಕ್ರಿಮಿನಲ್ ಕೇಸ್ – ಸಿಎಂ ಸೂಚನೆ
10.30ಕ್ಕೆ ದಾವಣಗೆರೆ ನಗರದ ಹಳೇ ಪಿಬಿ ರಸ್ತೆಯಲ್ಲಿ ವೈಕುಂಠಧಾಮದಲ್ಲಿ ಅಗ್ನಿ ಸ್ಪರ್ಶದೊಂದಿಗೆ ತೇಜಸ್ವಿನಿ ಅಂತ್ಯಸಂಸ್ಕಾರ ನಡೆಯಲಿದೆ. ಮಗುವಿನ ಶವಸಂಸ್ಕಾರ ದಾವಣಗೆರೆ ನಗರದ ಬಾಟಲಿ ಬಿಲ್ಡಂಗ್ ಹಿಂಭಾಗದ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡೆಡ್ಲಿ ಮೆಟ್ರೋಗೆ ಇಬ್ಬರು ಬಲಿ – ಪಿಲ್ಲರ್ ದುರಂತಕ್ಕೆ ಕಾರಣಗಳೇನು?
ನಡೆದಿದ್ದೇನು..?: ಮಂಗಳವಾರ ಬೆಳಗ್ಗೆ 10:30ರ ವೇಳೆಗೆ ಗದಗ ಮೂಲದ ಸಿವಿಲ್ ಎಂಜಿನಿಯರ್ ಲೋಹಿತ್, ಪತ್ನಿ ಮತ್ತು ಅವಳಿ ಮಕ್ಕಳೊಂದಿಗೆ ಮನೆಯಿಂದ ಹೊರಟಿದ್ದರು. ಈ ವೇಳೆ ಹೆಣ್ಣೂರು ಬಳಿ ಲೋಹಿತ್ ಕುಟುಂಬವಿದ್ದ ಬೈಕ್ ಮೇಲೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ (Metro Pillar) ದಿಢೀರ್ ಎಂದು ಕುಸಿದಿದೆ.
ಘಟನೆಯಲ್ಲಿ 35 ವರ್ಷದ ತೇಜಸ್ವಿನಿ, ಎರಡೂವರೆ ವರ್ಷದ ಮಗು ವಿಹಾನ್ ಸಾವನ್ನಪ್ಪಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಲೋಹಿತ್ ಮತ್ತು ಅವರ ಎರಡೂವರೆ ವರ್ಷದ ಮಗಳು ವಿಸ್ಮಿತಾ ಬದುಕುಳಿದಿದ್ದಾರೆ. ದುರಂತಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಮೆಟ್ರೋ ತಜ್ಞರು ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣಗಳೇನು ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k