ಬಿಗ್ ಬಾಸ್ ಒಟಿಟಿಗೆ (Bigg Boss House) ಪ್ರೇಮ ಪಕ್ಷಿಗಳಾಗಿ ನಂದು (Nandu) ಮತ್ತು ಜಶ್ವಂತ್ ಬೋಪಣ್ಣ (Jashwanth Bopanna) ಎಂಟ್ರಿ ಕೊಟ್ಟಿದ್ದರು. ದೊಡ್ಮನೆಯಲ್ಲಿ ಈ ಜೋಡಿಯ ಮುನಿಸು, ಪ್ರೀತಿ ಬಾಂಧವ್ಯವನ್ನ ನೋಡಿ ಪ್ರೇಕ್ಷಕರು ಕೂಡ ಫಿದಾ ಆಗಿದ್ದರು. ಹೀಗಿರುವಾಗ ನಂದು ಮತ್ತು ಜಶ್ ಮಧ್ಯೆ ಬಿರುಕು ಮೂಡಿದ್ಯಾ? ಬಿಗ್ ಬಾಸ್ ಶೋ ಬಳಿಕ ಲವ್ ಬ್ರೇಕಪ್ ಆಗಿದ್ಯಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.
ದೊಡ್ಮನೆ ರಿಯಾಲಿಟಿ ಶೋಗೆ ಬರುವ ಮುಂಚೆಯೇ ನಂದು ಮತ್ತು ಜಶ್ ಲವರ್ಸ್ ಆಗಿದ್ದರು. ಸಾಕಷ್ಟು ಸಮಯದಿಂದ ಡೇಟಿಂಗ್ ಮಾಡ್ತಿದ್ದರು. ಹಿಂದಿ ರಯಾಲಿಟಿ ಶೋ `ರೋಡಿಸ್’ (Roadies Reality Show) ವಿನ್ನರ್ ಆಗಿರುವ ನಂದು, ಈ ಶೋನಲ್ಲಿಯೇ ಜಶ್ ಜೊತೆ ಪ್ರೇಮಾಂಕರವಾಗಿತ್ತು. ಬಳಿಕ ಒಟಿಟಿ ಬಿಗ್ ಬಾಸ್‌ಗೆ ನಂದು ಮತ್ತು ಜಶ್ವಂತ್ ಜೊತೆಯಾಗಿ ಕಾಲಿಟ್ಟಿದ್ದರು. ಇದನ್ನೂ ಓದಿ: ಸೋನುಗೆ ಕೈಕೊಟ್ಟು ಅಮೂಲ್ಯ ಜೊತೆ ರಾಕೇಶ್ ಅಡಿಗ ಸುತ್ತಾಟ
ದೊಡ್ಮನೆಯಲ್ಲಿ ಸಾನ್ಯ ಅಯ್ಯರ್ (Sanya Iyer) ಸ್ನೇಹದಿಂದ ಒಮ್ಮೆ ನಂದು ಮತ್ತು ಜಶ್ ನಡುವೆ ಬಿರುಕು ಉಂಟಾಗಿತ್ತು. ಬಳಿಕ ಎಲ್ಲವೂ ಸರಿಹೋಗಿತ್ತು. ಈಗ ಶೋ ಮುಗಿದ ಮೇಲೆ ನಂದು ಮತ್ತು ಜಶ್ವಂತ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿಗೆ ಪುಷ್ಟಿ ನೀಡುವಂತಹ ಘಟನೆವೊಂದು ನಡೆದಿದೆ.
ಇತ್ತೀಚೆಗಷ್ಟೇ `ಬಿಗ್ ಬಾಸ್’ ಖ್ಯಾತಿಯ ನಂದು ಅವರ ಹುಟ್ಟುಹಬ್ಬವನ್ನ (Birthday) ಕುಟುಂಬದ ಜೊತೆ ಆಚರಿಸಿದ್ದರು. ನಂದು ಬರ್ತ್‌ಡೇಗೆ ಸ್ನೇಹಿತ ರೂಪೇಶ್ ಶೆಟ್ಟಿ ಸರ್ಪ್ರೈಸ್ ಆಗಿ ಎಂಟ್ರಿ ಕೊಟ್ಟಿದ್ದರು. ನಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಗ್ ಬಾಸ್ ವಿನ್ನರ್ ರೂಪೇಶ್ ಭಾಗಿಯಾಗಿದ್ದರು. ಆದರೆ ಜಶ್ವಂತ್ (Jashwanth) ಕಾಣೆಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಂದು ಹುಟ್ಟುಹಬ್ಬಕ್ಕೆ ಜಶ್ವಂತ್ ವಿಶ್ ಮಾಡಿರಲಿಲ್ಲ. ಒಟ್ಟಿಗೆ ನಂದು ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಕೂಡ ಮಾಡಲಿಲ್ಲ. ಹಾಗಾಗಿ ಈ ಎಲ್ಲಾ ಬೆಳವಣಿಗೆ ಬ್ರೇಕಪ್ (BreakUp) ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.
View this post on Instagram
ಬಿಗ್ ಬಾಸ್ ಶೋ (Bigg Boss Kannada) ಬಳಿಕ ನಂದು ಮತ್ತು ಜಶ್ವಂತ್ ಭೇಟಿಯಾಗಿಲ್ಲ. ಇದೀಗ ನಂದು ಬರ್ತ್ಡೇಗೆ ಜಶ್ವಂತ್ ಭಾಗವಹಿಸದೇ ಇರೋದು ಹಲವು ಅನುಮಾನಕ್ಕೆ ದಾರಿ ಮಾಡಿ ಕೊಟ್ಟಿದೆ. ಮೂಲಗಳ ಪ್ರಕಾರ, ಇಬ್ಬರ ಲವ್ ಸ್ಟೋರಿಗೆ ಬ್ರೇಕ್ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಈ ಜೋಡಿ, ಅಧಿಕೃತವಾಗಿ ಹೇಳುವವರೆಗೂ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k