ಬೆಳಕು, ಆದರೆ ಇದು ಬೆಳಕಲ್ಲ 100 ದಿನದ ದರ್ಶನ: ಸಕ್ಸಸ್ ಬಗ್ಗೆ ರಿಷಬ್ ಸ್ಪೆಷಲ್ ನೋಟ್

Public TV
1 Min Read
kantara film

ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಕನ್ನಡದ `ಕಾಂತಾರ’ (Kantara Film) ಸಿನಿಮಾ ಶತದಿನೋತ್ಸವ ಆಚರಿಸಿದೆ. `ಕಾಂತಾರ’ ಸಿನಿಮಾದ ಸಕ್ಸಸ್‌ಫುಲ್ ಜರ್ನಿಯ ಬಗ್ಗೆ ರಿಷಬ್ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸ್ಪೆಷಲ್ ನೋಟ್ ಬರೆದುಕೊಂಡಿದ್ದಾರೆ.

Kantara 2

ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಾಣದ, ರಿಷಬ್‌ ಶೆಟ್ಟಿ (Rishab Shetty) ನಿರ್ದೇಶನದ `ಕಾಂತಾರ’ 100 ದಿನಗಳನ್ನ ಪೂರೈಸಿದೆ. ಸೆಪ್ಟೆಂಬರ್ 30ರಂದು `ಕಾಂತಾರ’ ಸಿನಿಮಾ ತೆರೆಕಂಡಿತ್ತು. 2022ರ ವರ್ಷದ ಬ್ಲ್ಯಾಕ್ ಬಸ್ಟರ್ ಹಿಟ್ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ರಿಲೀಸ್ ಆಗಿ ಸಿನಿಮಾ ಸಕ್ಸಸ್ ಕಂಡಿದೆ. 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹೀಗಿರುವಾಗ `ಕಾಂತಾರ’ 100 ದಿನಗಳನ್ನ ಪೂರೈಸಿರುವ ಬಗ್ಗೆ ರಿಷಬ್ ಶೆಟ್ಟಿ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ.

kantara 2

ʻಬೆಳಕು.. ಆದರೆ ಇದು ಬೆಳಕಲ್ಲ 100 ದಿನದ ದರ್ಶನʼ ಎಂದು ರಿಷಬ್ ಶೆಟ್ಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪ್ರಯಾಣದ ಉದ್ದಕ್ಕೂ ನಮ್ಮನ್ನು ಹಿಡಿದಿಟ್ಟುಕೊಂಡು ದೈವತ್ವವನ್ನು ಕಂಡುಕೊಂಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ಕಾಂತಾರ ಸಿನಿಮಾ ಡಿವೈನ್ ಬ್ಲ್ಯಾಕ್ ಬಸ್ಟರ್, 100 ದಿನಗಳನ್ನ ಪೂರೈಸಿದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಕೊನೆಗೂ ಸಿಹಿ ಸುದ್ದಿ ಕೊಟ್ರು ವಿಕ್ಕಿ ಕೌಶಲ್-‌ ಕತ್ರಿನಾ ಕೈಫ್‌ ದಂಪತಿ

ʻಕಾಂತಾರʼ ಸಿನಿಮಾ ತುಳುನಾಡಿನ ದೈವದ ಕಥೆಯಾಗಿದ್ದು, ಚಿತ್ರಮಂದಿರದ ನಂತರ ಒಟಿಟಿಯಲ್ಲಿ ಕೂಡ ಚಿತ್ರ ಪ್ರಸಾರವಾಗಿತ್ತು. ಇದೀಗ ಶತ ದಿನಗಳನ್ನ(100 Days) ಪೂರೈಸಿರುವ ರಿಷಬ್ ಶೆಟ್ಟಿ ಸಿನಿಮಾ ಈಗ ಕಿರುತೆರೆಗೆ ಲಗ್ಗೆ ಇಡುತ್ತಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article