ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ವಿವಾದ ಮತ್ತೊಂದು ರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಸಲಾಗಿತ್ತು. ಕೆಲ ಕಡೆ ಪ್ರತಿಭಟನೆಗಳು ನಡೆದವು. ಸೆನ್ಸಾರ್ ಮಂಡಳಿ ಕೂಡ ಕೆಲ ಭಾಗಗಳನ್ನು ಕತ್ತರಿಸಬೇಕು ಎಂದು ಸಲಹೆ ನೀಡಿತ್ತು. ಈಗ ದಾಳಿಯಂತಹ ಪ್ರಕರಣಗಳು ನಡೆಯುತ್ತಿವೆ.
ಗುಜರಾತ್ ನ ಅಹ್ಮದಾಬಾದ್ ನ ಮಾಲ್ ಒಂದರಲ್ಲಿ ಪಠಾಣ್ ಸಿನಿಮಾದ ಪೋಸ್ಟರ್ ಅಂಟಿಸಲಾಗಿತ್ತು. ಈ ಪೋಸ್ಟರ್ ಅನ್ನು ತಗೆದು ಹಾಕುವಂತೆ ಭಜರಂಗ ದಳದ ಕಾರ್ಯಕರ್ತರು ಥಿಯೇಟರ್ ಮಾಲೀಕರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಪುರಸ್ಕರಿಸದೇ ಹೋದಾಗ, ಚಿತ್ರಮಂದಿರದ ಮೇಲೆ ದಾಳಿ ಮಾಡಿದ ಭಜರಂಗ ದಳದ ಕಾರ್ಯಕರ್ತರು ಅದನ್ನು ಹರಿದು ಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಮಿಲ್ಕಿ ಬ್ಯೂಟಿ ತಮನ್ನಾ – ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
ಘಟನೆಯ ಕುರಿತಾಗಿ ಮಾತನಾಡಿರುವ ಥಿಯೇಟರ್ ಮಾಲೀಕರು, ಕೇವಲ ಪೋಸ್ಟರ್ ಮಾತ್ರ ಹರಿದು ಹಾಕದೇ, ಈ ಸಿನಿಮಾವನ್ನು ಪ್ರದರ್ಶನ ಮಾಡಬಾರದು ಎಂದು ಬೆದರಿಕೆ ಕೂಡ ಹಾಕಿದ್ದಾರೆ ಎಂದಿದ್ದಾರೆ. ಪೋಸ್ಟರ್ ಹರಿದು ಹಾಕಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ. ಇದೇ ಸಂದರ್ಭದಲ್ಲಿ ಮಾತನಾಡಿರುವ ಭಜರಂಗ ದಳದ ಸದಸ್ಯರು, ಯಾವುದೇ ಸಿನಿಮಾ ಮಂದಿರದಲ್ಲೂ ಈ ಸಿನಿಮಾ ಪ್ರದರ್ಶನ ಮಾಡಬಾರದು, ಮಾಡಿದರೆ ದಾಳಿ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಇದೇ ಜನವರಿ 25ರಂದು ವಿಶ್ವದಾದ್ಯಂತ ಪಠಾಣ್ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಜನವರಿ 10ರಂದು ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಆಗುತ್ತಿದ್ದು, ಶಾರುಖ್ ಅಂಡ್ ಟೀಮ್ ಚಿತ್ರದ ಭರ್ಜರಿ ಪ್ರಚಾರ ನಡೆಸಿದೆ. ನಿನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಶಾರುಖ್ ಅಭಿಮಾನಿಗಳ ಜೊತೆ ಸಂವಾದ ಕೂಡ ಮಾಡಿದ್ದಾರೆ. ವಿವಾದಗಳ ಹೊರತಾಗಿಯೂ ಸಿನಿಮಾ ನೋಡುವಂತೆ ಅವರು ಮನವಿ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k