Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಬಿಜೆಪಿಗೆ ಭಾವನಾತ್ಮಕ ಅಜೆಂಡಾಗಳು ಬೇಕೇ ಹೊರತು ಅಭಿವೃದ್ಧಿಯ ಅಜೆಂಡಾ ಬೇಕಾಗಿಲ್ಲ: ಡಿಕೆಶಿ

Public TV
Last updated: January 4, 2023 6:33 pm
Public TV
Share
4 Min Read
DK SHIVAKUMAR 1
SHARE

ಬೆಂಗಳೂರು: ಬಿಜೆಪಿಗೆ (BJP) ಭಾವನಾತ್ಮಕ ಅಜೆಂಡಾಗಳು ಬೇಕೇ ಹೊರತು ಅಭಿವೃದ್ಧಿಯ ಅಜೆಂಡಾ ಬೇಕಾಗಿಲ್ಲ. ಆದರೆ ಕಾಂಗ್ರೆಸ್ (Congress) ಜನಸಾಮಾನ್ಯರ ಬದುಕಿನ ವಿಚಾರಕ್ಕೆ ಆದ್ಯತೆ ನೀಡುತ್ತದೆ. ಉದ್ಯೋಗವಿಲ್ಲದೆ, ಹಸಿವಿನಿಂದ ಬಳಲುತ್ತಿರುವವರ ಬದುಕು ಕಟ್ಟಿಕೊಡಲು ಪ್ರಯತ್ನಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Nalinkumar Kateel 1

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ತಮ್ಮ ಪಕ್ಷದ ಅಜೆಂಡಾ ಹೇಳಿದ್ದಾರೆ. ಬಿಜೆಪಿ ಅಜೆಂಡಾ ಜನರ ಮನಸ್ಸು ಕೆಡಿಸಿ ಸಮಾಜದ ಶಾಂತಿ ಕದಡಲು ಬಯಸುತ್ತದೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ (Rahul Gandhi)  ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಮಾಡಿ ದೇಶದ ಜನರ ಮನಸ್ಸು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಜನಸಾಮಾನ್ಯರಲ್ಲಿ ಪರಸ್ಪರ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ನಳಿನ್ ಕುಮಾರ್ ಹಾಗೂ ಬಿಜೆಪಿ ನಾಯಕರ ಹೇಳಿಕೆಯನ್ನು ಇಡೀ ದೇಶ ಖಂಡಿಸುತ್ತದೆ. ಪಕ್ಷದ ಅಧ್ಯಕ್ಷನಾಗಿ ನಾನು ಕೂಡ ಖಂಡಿಸುತ್ತೇನೆ ಎಂದರು. ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ನನ್ನ ಶರ್ಟ್ ತೆಗೆದು ನಿಲ್ಲಿಸಿದ್ದಾರೆ: ಯುವತಿಯ ಆರೋಪ

BJP 3

ಕಾಂಗ್ರೆಸ್ ಪಕ್ಷ ಸದಾ ಅಭಿವೃದ್ಧಿಯ ಕಾರ್ಯಸೂಚಿ ಮೇಲೆ ಕೆಲಸ ಮಾಡುತ್ತಿದೆ. ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಅವರ ಬದುಕು ಕಟ್ಟಿಕೊಡುವತ್ತ ಗಮನಹರಿಸುತ್ತಿದೆ. ಬಿಜೆಪಿಗೆ ಬಡವರು ಆರ್ಥಿಕ ಸಬಲತೆ ಸಾಧಿಸುವುದು ಬೇಕಾಗಿಲ್ಲ ಎಂದು ಕಿಡಿಕಾರಿದರು.

ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಕೆಲವು ಮಾಧ್ಯಮಗಳಲ್ಲಿ ಪ್ರಿಯಾಂಕಾ ಗಾಂಧಿ ಅವರ ಆಗಮನದ ವಿಚಾರವಾಗಿ ವರದಿ ಬಂದಿದೆ. ಪ್ರಿಯಾಂಕಾ ಗಾಂಧಿ ಅವರು ಸದ್ಯ ಉತ್ತರ ಪ್ರದೇಶದಲ್ಲಿ ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಯಾವಾಗ ರಾಜ್ಯಕ್ಕೆ ಬರುತ್ತಾರೆ ಎಂದು ಅಧಿಕೃತವಾಗಿ ದಿನಾಂಕ ತಿಳಿಸುತ್ತೇನೆ. ನಾನು ರಾಜ್ಯದ ಮಹಿಳೆಯರಿಗೆ ಈ ಮೂಲಕ ಒಂದು ಮನವಿ ಮಾಡುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಅನ್ನು ಪ್ರಕಟಿಸುತ್ತೇನೆ. ರಾಜ್ಯದ ಮಹಿಳೆಯರು ತಮ್ಮ ಬದುಕು, ದೇಶ ಹಾಗೂ ರಾಜ್ಯದಲ್ಲಿ ಯಾವ ರೀತಿ ಬದಲಾವಣೆ ತರಬೇಕು ಎಂಬುದರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲಿ. ಕಾಂಗ್ರೆಸ್ ಪಕ್ಷದಿಂದ ಮಹಿಳೆಯರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ತಿಳಿಯ ಬಯಸುತ್ತೇವೆ. ಯಾವುದೇ ಹೆಣ್ಣುಮಗಳು ಅವರ ಸಲಹೆ, ಅಭಿಪ್ರಾಯ ಹಾಗೂ ನೋವನ್ನು ಹೇಳಿಕೊಳ್ಳಬಹುದು. ನನ್ನ ಅಥವಾ ಪರಮೇಶ್ವರ್ ಅವರ ಹೆಸರಿಗೆ, ಕಾಂಗ್ರೆಸ್ ಕಚೇರಿ ವಿಳಾಸಕ್ಕೆ ಪತ್ರ ಬರೆಯಬಹುದು. ಅವರ ಸಲಹೆಗಳನ್ನು ಪರಿಶೀಲಿಸಿ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: BJP ಅವ್ರಿಗೆ ಲವ್ ಮಾಡಿ ಗೊತ್ತಿಲ್ಲ, ಮೊದ್ಲು ಯುಪಿ ಸಿಎಂಗೆ ಲವ್ ಮಾಡೋಕೆ ಹೇಳಿ – ಇಬ್ರಾಹಿಂ

amith shah

ಬಿಜೆಪಿ ನಾಯಕರ ದ್ವೇಷದ ಹೇಳಿಕೆಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದಿಲ್ಲವೇ ಎಂದು ಕೇಳಿದಾಗ, ಇದೇ ಕಾರಣಕ್ಕೆ ರಾಜ್ಯದಲ್ಲಿ ಯಾವುದೇ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸಲು ಮುಂದೆ ಬರುತ್ತಿಲ್ಲ. ಇದೊಂದು ನಾಚಿಕೆಗೇಡಿನ ವಿಚಾರ. ಇದೇ ಬಿಜೆಪಿಯ ನಿಜವಾದ ಮುಖ ಎಂದು ಹೇಳಿದರು.

ಬಿಜೆಪಿಯಲ್ಲಿ ನಾಯಕರಿಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ನಾನು ಅಮಿತ್ ಶಾ (Amit Shah) ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದೇನೆ. ಅಮಿತ್ ಶಾ ಅವರು ಮುಂಬರುವ ಚುನಾವಣೆಯನ್ನು ಮೋದಿ (Narendra Modi) ಅವರ ನಾಯಕತ್ವದಲ್ಲಿ ಎದುರಿಸಲಾಗುವುದು ಎಂದು ಹೇಳಿದ್ದಾರೆ. ಅಂದರೆ ರಾಜ್ಯದಲ್ಲಿ ಯಾವುದೇ ನಾಯಕತ್ವ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಕೆಲ ತಿಂಗಳ ಹಿಂದೆ ಇದೇ ಅಮಿತ್ ಶಾ ಅವರು ಬಸವರಾಜ ಬೊಮ್ಮಾಯಿ (Basavaraj Bommai) ಅವರ ನೇತೃತ್ವದಲ್ಲಿ ಚುನಾವಣೆ ಮಾಡಲಾಗುವುದು ಎಂದು ಹೇಳಿದ್ದರು. ಈಗ ಅವರು ಮೋದಿ ಅವರು ಚುನಾವಣಾ ನೇತೃತ್ವ ವಹಿಸುತ್ತಾರೆ ಎಂದಿದ್ದಾರೆ. ಅಂದರೆ ಮೋದಿ ಅವರು ಬಂದು ಇಲ್ಲಿ ಬಿಜೆಪಿ ಪರವಾಗಿ ಚುನಾವಣೆ ಮಾಡುತ್ತಾರೆ. ರಾಜ್ಯದಲ್ಲಿ ನಮಗೆ ನಾಯಕರು ಬೇಕಾಗಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯ ನಾಯಕರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದೆ. ಅದಕ್ಕೆ ಈಗಲೂ ಬದ್ಧ ಎಂದು ಅಭಿಪ್ರಾಯಪಟ್ಟರು.

NARENDRA MODI 12

ಬಸ್ ಯಾತ್ರೆಗೂ ಮುನ್ನ ಮೊದಲ ಪಟ್ಟಿ ಬಿಡುಗಡೆ ಆಗುವುದೇ ಎಂದು ಕೇಳಿದಾಗ, ಪಕ್ಷದ ಅಭ್ಯರ್ಥಿ ಪಟ್ಟಿ ಪ್ರಕಟಿಸಲು ಒಳ್ಳೆಯ ಮುಹೂರ್ತ ಬೇಕು. ಎಲ್ಲರೂ ಪ್ರತಿ ಜಿಲ್ಲೆಗೆ ಹೋಗಿ ಚರ್ಚೆ ನಡೆಸಿದ್ದಾರೆ. ಒಂದೆರಡು ಜಿಲ್ಲೆಗಳು ಬಾಕಿ ಇವೆ. ನಾನು ಅವರ ಸಲಹೆಗೆ ಕಾಯುತ್ತಿದ್ದೇನೆ. ಅವರು ಸಲಹೆ ಸಲ್ಲಿಸಿದ ತಕ್ಷಣ ಸಭೆ ಮಾಡಿ, ಚರ್ಚಿಸಿ ಪ್ರಕಟಿಸಲಾಗುವುದು. ಕೇಂದ್ರ ಪರಿಶೀಲನಾ ಸಮಿತಿ ಸದ್ಯದಲ್ಲೇ ಪ್ರಕಟಿಸಲಿದೆ. ಅಭ್ಯರ್ಥಿ ಆಯ್ಕೆ ವಿಚಾರವಾಗಿ ಎಲ್ಲ ಪ್ರಕ್ರಿಯೆ ನಡೆಯುತ್ತಿದೆ. ಕಾರ್ಯಕರ್ತರು, ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಭಿಪ್ರಾಯ ಪಡೆಯಲಾಗುತ್ತಿದೆ. ಅವರು ಎರಡು ಮೂರು ಹೆಸರು ನೀಡುತ್ತಿದ್ದಾರೆ. ಇದರ ಜೊತೆಗೆ ಪಕ್ಷದ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಜನರ ಅಭಿಪ್ರಾಯ ಪಡೆಯಲಾಗುವುದು. ಪಕ್ಷದಲ್ಲಿ 78 ಲಕ್ಷ ಸದಸ್ಯರಿದ್ದು ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಆದಷ್ಟು ಬೇಗ ಈ ಎಲ್ಲ ಪ್ರಕ್ರಿಯೆ ಮುಗಿಸುತ್ತೇವೆ ಎಂದು ತಿಳಿಸಿದರು.

ದೆಹಲಿ ಪ್ರಯಾಣದ ಬಗ್ಗೆ ಕೇಳಿದಾಗ, ನಾನು ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಿ ಹೆಜ್ಜೆ ಹಾಕಬೇಕು ಎಂಬ ಆಸೆ ಇದೆ. ಕರ್ನಾಟಕದಲ್ಲಿ ಯಾತ್ರೆ ಮುಗಿದ ಬಳಿಕ ನಾವು ಎಲ್ಲಿಯೂ ಹೋಗಿ ಭಾಗವಹಿಸಿಲ್ಲ. ಹೀಗಾಗಿ ಅಲ್ಲಿ ಹೋಗಿ ಭಾಗವಹಿಸಬೇಕಿದೆ ಎಂದರು.

ಸಿದ್ದರಾಮಯ್ಯ (Siddaramaiah)  ಅವರು ಮುಖ್ಯಮಂತ್ರಿಗಳನ್ನು ನಾಯಿ ಮರಿಗೆ ಹೋಲಿಕೆ ಮಾಡಿದ್ದಾರೆ ಎಂಬ ವಿಚಾರವಾಗಿ ಕೇಳಿದಾಗ, ಸಿದ್ದರಾಮಯ್ಯ ಸಿಎಂರನ್ನು ನಾಯಿ ಮರಿಗೆ ಹೋಲಿಸಿ ಮಾತನಾಡಿದ್ದು ನನಗೆ ಗೊತ್ತಿಲ್ಲ. ನಮ್ಮ ಮನೆಯಲ್ಲೂ ನಾಯಿ ಇದೆ. ನಾಯಿ ಬಗ್ಗೆ ನನಗೆ ಗೌರವ ಇದೆ. ಕಳ್ಳರನ್ನು ಹಿಡಿಯೋಕೆ ರಕ್ಷಣೆಗೆ ನಾಯಿಬೇಕು. ಕಷ್ಟಕ್ಕೆ ಸುಖಕ್ಕೆ ನಾಯಿ ಬೇಕು. ನಾಯಿ ನಾರಾಯಣ ಅಂತಾರೆ. ನಾಯಿ ನನಗೆ ಬಹಳ ಪ್ರಿಯವಾದ ಪ್ರಾಣಿ. ಸಿದ್ದರಾಮಯ್ಯ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ನುಡಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:bjpcongressDK ShivakumarNalin Kumar Kateelಕಾಂಗ್ರೆಸ್ಡಿ.ಕೆ.ಶಿವಕುಮಾರ್ಬಿಜೆಪಿಸಿದ್ದರಾಮಯ್ಯ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Ramya Prajwal Devaraj
ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್: ಪ್ರಜ್ವಲ್ ಕಿಡಿ
Cinema Latest Sandalwood Top Stories
Ramya Case 2 arrested by ccb police
ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಸಿಸಿಬಿ ಪೊಲೀಸರಿಂದ ಇನ್ನಿಬ್ಬರು ಅರೆಸ್ಟ್
Cinema Latest Sandalwood Top Stories
Kantara 2 1
ಕಾಂತಾರದಲ್ಲಿ ಕಾಣಿಸಲಿದ್ದಾರೆ ಸೂಪರ್‌ಸ್ಟಾರ್!
Cinema Latest
Coolie 2
ಸೂಪರ್‌ಸ್ಟಾರ್ ರಜನಿಕಾಂತ್ ಕೂಲಿಗೆ ಭಾರಿ ಡಿಮ್ಯಾಂಡ್
Bollywood Cinema Latest South cinema Top Stories
dulquer salmaan dq41
ದುಲ್ಕರ್ ಸಲ್ಮಾನ್ ಹೊಸ ಚಿತ್ರಕ್ಕೆ ಚಾಲನೆ : ನಟ ನಾನಿ ಸಾಥ್
Cinema Latest Top Stories

You Might Also Like

team india
Cricket

1 ಜಯ, 12 ಅಂಕ ಪಡೆದು ಮೂರನೇ ಸ್ಥಾನಕ್ಕೆ ಭಾರತ ಹೈಜಂಪ್‌!

Public TV
By Public TV
6 hours ago
Narendra Modi Donald Trump
Latest

ನೀವು ರಷ್ಯಾದಿಂದ ಆಮದು ಮಾಡಬಹುದು, ನಾವು ಮಾಡಿದ್ರೆ ಯುದ್ಧಕ್ಕೆ ಫಂಡಿಂಗ್‌ ಹೇಗೆ: ಟ್ರಂಪ್‌ಗೆ ಭಾರತದ ಗುದ್ದು

Public TV
By Public TV
6 hours ago
Kolar Rain
Bidar

ಕೋಲಾರ ಜಿಲ್ಲೆಯಾದ್ಯಂತ ಉತ್ತಮ ಮಳೆ – ರೈತರ ಮೊಗದಲ್ಲಿ ಮಂದಹಾಸ

Public TV
By Public TV
6 hours ago
Yadagiri Arrest
Districts

11 ಲಕ್ಷದ ಚಿನ್ನ ಕದ್ದು ಪರಾರಿ – ನಾಲ್ಕು ಕೇಸ್‌ಲ್ಲಿ ಭಾಗಿಯಾಗಿದ್ದ ಕತರ್ನಾಕ್ ಕಳ್ಳ ಅರೆಸ್ಟ್

Public TV
By Public TV
7 hours ago
mahadevappa
Bengaluru City

ಟಿಪ್ಪು ಡ್ಯಾಂ ಕಟ್ಟಿದ್ದ ಅಂತ ನಾನು ಎಲ್ಲಿಯೂ ಕೂಡ ಹೇಳಿಲ್ಲ – ಮಹದೇವಪ್ಪ ಯೂಟರ್ನ್

Public TV
By Public TV
7 hours ago
Prahlad Joshi 1
Latest

ಮೈಸೂರು ಮಹಾರಾಜರ ಕೊಡುಗೆಗೆ ಕಾಂಗ್ರೆಸ್ ಅಪಸ್ವರ – ಮಹದೇವಪ್ಪ ಮೊದ್ಲು ಇತಿಹಾಸ ಅರಿಯಲಿ: ಜೋಶಿ ಕಿಡಿ

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?