ಬೆಂಗಳೂರು: ಜನವರಿಯಲ್ಲಿ ರಾಜ್ಯ ಬಿಜೆಪಿ (BJP) ಗರಿಗೆ ಎಲೆಕ್ಷನ್ ಟಾಸ್ಕ್ ವರಿ ಶುರುವಾಗಿದೆ. ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರಗೃಹ ಸಚಿವ ಅಮಿತ್ ಶಾ ಎಲೆಕ್ಷನ್ ಟಾಸ್ಕ್ ಶುರುವಾಗಿದೆ.
ಇದೇ ಜನವರಿ 5 ಮತ್ತು 6 ಎರಡು ದಿನಗಳ ಕಾಲ ಜೆ.ಪಿ.ನಡ್ಡಾ (J P Nadda) ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ತುಮಕೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಸಾರ್ವಜನಿಕ ಸಮಾವೇಶ, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಜನವರಿ 12ರಂದು ಯುವ ಜನೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗಿಯಾಗಲಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆಯಲಿರುವ ಯುವಜನೋತ್ಸವದಲ್ಲಿ ಪ್ರಧಾನಿಯಿಂದ ಮೆಗಾ ಭಾಷಣ ನಡೆಯಲಿದೆ. ಇಷ್ಟೇ ಅಲ್ಲ, ಅಮಿತ್ ಶಾ (AmitShah) ಅವರು ಸಂಕ್ರಾಂತಿ ಬಳಿಕ ಮತ್ತೆ 2 ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈಗಾಗಲೇ ಜನವರಿ 2ರಿಂದ ಆರಂಭವಾಗಿರುವ ಬೂತ್ ಅಭಿಯಾನ ಜನವರಿ 12ಕ್ಕೆ ಅಂತ್ಯಗೊಳ್ಳಲಿದೆ. ಇದನ್ನೂ ಓದಿ: ರಸ್ತೆ, ಚರಂಡಿಯಂತಹ ಸಣ್ಣ ವಿಚಾರಗಳನ್ನು ಕೇಳ್ಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ: ಕಟೀಲ್
ಬೂತ್ ಅಭಿಯಾನಕ್ಕೆ ಚಾಲನೆ ಕೊಟ್ಟಿರುವ ಅಮಿತ್ ಶಾ ವಿಜಯಸಂಕಲ್ಪ ಯಾತ್ರೆಯಲ್ಲೂ ಭಾಗವಹಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಈಗಾಗಲೇ ಆಪರೇಷನ್ ಓಲ್ಡ್ ಮೈಸೂರು ಟಾಸ್ಕ್ ಕೊಟ್ಟಿರುವ ಅಮಿತ್ ಶಾಗೆ ರಾಜ್ಯ ನಾಯಕರು ರಿಪೋರ್ಟ್ ನೀಡಬೇಕಿದೆ. ಟಾಸ್ಕ್ ರಿಪೋರ್ಟ್ ಕೊಡುವುದರ ಜೊತೆ ಎಷ್ಟು ಅನುಷ್ಠಾನ ಎಂಬುದರ ಬಗ್ಗೆ ರಾಜ್ಯ ನಾಯಕರು ವರದಿ ಕೊಡಬೇಕು. ಒಟ್ಟಿನಲ್ಲಿ ಜನವರಿಯಲ್ಲಿ ಎಲೆಕ್ಷನ್ ವಾರ್ಮ್‍ಅಪ್ ಬಳಿಕ ಫೆಬ್ರವರಿ ಮೊದಲ ವಾರದಿಂದ ಶುರುವಾಗಲಿದೆ ಎಲೆಕ್ಷನ್ ಅಸಲಿ ಆಟ.