ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯದ ಮೇಲೆ ಹೆಚ್ಚುವರಿ ನಿರ್ಬಂಧ ಹೇರಲು ಸಾಧ್ಯವಿಲ್ಲ: ಸುಪ್ರೀಂ

Public TV
2 Min Read
supreme court 12

ನವದೆಹಲಿ: ದೇಶದ ಎಲ್ಲಾ ಜನತೆಗೆ ಸರಿಸಮನಾಗಿ ಸಂವಿಧಾನದ 19(1)(ಎ) ಅಡಿ ನೀಡಲಾಗಿರುವ ವಾಕ್ ಸ್ವಾತಂತ್ರ್ಯವನ್ನು(Freedom of speech) ಸಚಿವರು, ಸಂಸದರು, ಶಾಸಕರು ಕೂಡ ಅನುಭವಿಸುತ್ತಾರೆ. ಈ ವಿಚಾರದಲ್ಲಿ ರಾಜಕಾರಣಿಗಳಿಗೆ ಹೆಚ್ಚುವರಿ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು 4:1ರ ಅನುಪಾತದಲ್ಲಿ ಸುಪ್ರೀಂಕೋರ್ಟ್(Supreme Court) ತೀರ್ಪು ನೀಡಿದೆ.

2016ರ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಸಚಿವರೊಬ್ಬರು ನೀಡುವ ಹೇಳಿಕೆಯನ್ನು ಇಡೀ ಸರ್ಕಾರಕ್ಕೆ ಅನ್ವಯಿಸಲಾಗದು. ಸಾಮೂಹಿಕ ಹೊಣೆಗಾರಿಕೆಯ ತತ್ವವನ್ನು ಅನ್ವಯಿಸಿದರೂ ಸಚಿವರು ನೀಡಿದ ಹೇಳಿಕೆಯನ್ನು ಸರ್ಕಾರಕ್ಕೆ ವಿಕೃತವಾಗಿ ಆರೋಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಎಸ್‍ಎ ನಜೀರ್, ಬಿಆರ್ ಗವಾಯಿ, ಎಎಸ್ ಬೋಪಣ್ಣ, ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರಿದ್ದ ಸಾಂವಿಧಾನಿಕ ಪೀಠ ತೀರ್ಪು ಪ್ರಕಟಿಸಿದೆ. ಈ ಪೈಕಿ ಬಿವಿ ನಾಗರತ್ನ ಅವರು ಭಿನ್ನ ತೀರ್ಪು ನೀಡಿದ್ದಾರೆ.

Azam Khan

ಸಾಮೂಹಿಕ ಅತ್ಯಾಚಾರಕ್ಕೆ ಕುಟುಂಬದ ಬಗ್ಗೆ ಉತ್ತರಪ್ರದೇಶದ ಎಸ್‍ಪಿ ಮುಖಂಡ, ಅಂದು ಸಚಿವರಾಗಿದ್ದ ಅಜಂ ಖಾನ್(Azam Khan) ಇದು ರಾಜಕೀಯ ಷಡ್ಯಂತ್ರ ಅಲ್ಲದೇ ಬೇರೆ ಏನೂ ಇಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದಅರ್ಜಿ ವಿಚಾರಣೆ ನಡೆಸಿದ್ದ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ. ಇದನ್ನೂ ಓದಿ: ಹೊರಗಡೆಯ ಆಹಾರಕ್ಕೆ ನಿರ್ಬಂಧ ಹೇರಬಹುದು, ಥಿಯೇಟರ್‌ಗಳು ಶುದ್ಧವಾದ ಕುಡಿಯುವ ನೀರು ಫ್ರೀ ನೀಡಬೇಕು: ಸುಪ್ರೀಂ

ನಾಲ್ವರು ನ್ಯಾಯಾಧೀಶರು ಹೇಳಿದ್ದೇನು?
ಸಂವಿಧಾನದ 19(2)ವಿಧಿಯಲ್ಲಿರದ ನಿರ್ಬಂಧಗಳನ್ನು 19(1)ರ ಮೇಲೆ ವಿಧಿಸುವಂತಿಲ್ಲ. ಸಚಿವರೊಬ್ಬರು ನೀಡುವ ಹೇಳಿಕೆಯನ್ನು ಇಡೀ ಸರ್ಕಾರಕ್ಕೆ ಅನ್ವಯಿಸಲಾಗದು. ಸಚಿವರು ನೀಡಿದ ಹೇಳಿಕೆಯನ್ನು ಸರ್ಕಾರಕ್ಕೆ ಅನ್ವಯಿಸಿ ದೂಷಿಸುವುದು ಸಾಧ್ಯವಿಲ್ಲ. ಜನರ ಹಕ್ಕುಗಳಿಗೆ ವಿರುದ್ಧವಾಗಿ ಸಚಿವರು ಹೇಳಿಕೆ ನೀಡಿದಲ್ಲಿ ಅದು ಸಾಂವಿಧಾನಿಕ ಲೋಪವಾಗದು.

ಸಾರ್ವಜನಿಕ ಹುದ್ದೆಯಲ್ಲಿರುವವರಿಂದ ಕರ್ತವ್ಯಚ್ಯುತಿ ಉಂಟಾದರೆ ಮಾತ್ರ ಅದು ಸಾಂವಿಧಾನಿಕ ಲೋಪ. ಸಾರ್ವಜನಿಕ ಹುದ್ದೆಯಲ್ಲಿರುವವರು ಅಪರಾಧ ಘಟಿಸುವಿಕೆಗೆ ಕಾರಣರಾದರೆ ಆಗ ಸಾಂವಿಧಾನಿಕ ಲೋಪವಾಗುತ್ತದೆ. ವಾಕ್‍ಸ್ವಾತಂತ್ರ್ಯದ ಹಕ್ಕು,ನಿರ್ಬಂಧಗಳನ್ನು ಸರ್ಕಾರ, ಸರ್ಕಾರದಾಚೆಯ ಶಕ್ತಿಗಳ ವಿರುದ್ಧ ಚಲಾಯಿಸಬಹುದು.

parliment 1

 

ನ್ಯಾ. ಬಿವಿ ನಾಗರತ್ನ ಹೇಳಿದ್ದೇನು?
ಸಚಿವರ ಹೇಳಿಕೆಯೂ ಸರ್ಕಾರದ ವಿಚಾರ ಹೊಂದಿದರೆ ಅದು ಸರ್ಕಾರದ ನಿಲುವನ್ನೇ ಪ್ರದರ್ಶಿಸಿದಂತೆ ಆಗುತ್ತದೆ. ಸಚಿವರ ಹೇಳಿಕೆಯ ಸಾಮೂಹಿಕ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹೊರಿಸಬಹುದು. ಆದರೆ ವಾಕ್‍ಸ್ವಾತಂತ್ರ್ಯದ ಹಕ್ಕಿನ ಮೇಲೆ ಕೋರ್ಟ್‍ನಿಂದ ಹೆಚ್ಚುವರಿ ನಿರ್ಬಂಧ ಸಾಧ್ಯವಿಲ್ಲ. ಹೆಚ್ಚಿನ ನಿರ್ಬಂಧ ವಿಧಿಸುವ ಸಂಬಂಧ ಕಾನೂನು ರೂಪಿಸುವುದು ಸಂಸತ್‍ನ ಕೆಲಸವಾಗಿದೆ.

ದ್ವೇಷ ಭಾಷಣಗಳು ಸಮಾಜವನ್ನು ಅಸಮಾನವಾಗಿಸುತ್ತವೆ.ಇದರಿಂದಾಗಿ ಮೂಲಭೂತ ಮೌಲ್ಯಗಳಿಗೆ ದ್ವೇಷ ಭಾಷಣಗಳು ಹೊಡೆತ ನೀಡುತ್ತವೆ. ವಿವಿಧ ಹಿನ್ನೆಲೆಯ ನಾಗರಿಕರ ಮೇಲೆ ಆಕ್ರಮಣ ಮಾಡುತ್ತವೆ. ಪ್ರತಿಯೊಬ್ಬ ವ್ಯಕ್ತಿಯ ಘನತೆ ಎತ್ತಿಹಿಡಿಯುವುದು ಎಲ್ಲರ ಕರ್ತವ್ಯ. ಧರ್ಮ,ಜಾತಿ,ಮಹಿಳೆಯರ ಗೌರವಗಳನ್ನು ದ್ವೇಷ ಭಾಷಣ ಹಾಳು ಮಾಡಬಾರದು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *